ಬೆಂಗಳೂರು, ಮೇ 24– ಬಿಬಿಎಂಪಿಯಲ್ಲಿ ಪ್ರಧಾನ ಅಭಿಯಂತರರಾಗಿದ್ದ ಬಿ.ಎಸ್.ಪ್ರಹ್ಲಾದ್ ಅವರಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.ಬಿಬಿಎಂಪಿಯಲ್ಲಿ ಬೃಹತ್ ನೀರುಗಾಲುವೆ, ರಾಜಕಾಲುವೆ, ರಸ್ತೆ ಮೂಲ ಭೂತ ಸೌಕರ್ಯ ವಿಭಾಗದ ಇಂಜಿನಿಯರ್ ಚೀಫ್ ಆಗಿದ್ದ ಪ್ರಹ್ಲಾದ್ ಅವರನ್ನು ಬಿ ಸೈಲ್ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ನಿರ್ದೇಶಕರಾಗಿ ವರ್ಗಾವಣೆ ಯಾಗಿದ್ದರೂ ಬಿಬಿಎಂಪಿ ನೀರುಗಾಲುವೆ, ರಸ್ತೆ ಮೂಲಭೂತ ಸೌಕರ್ಯ ಹುದ್ದೆಗೆ ಹೊಸ ನೇಮಕಾತಿ ಆಗುವವರೆಗೆ ಪ್ರಭಾರರಾಗಿ ಪ್ರಹ್ಲಾದ್ ಮುಂದುವರಿಯಲಿದ್ದಾರೆ.
ಬೆಂಗಳೂರಿನ ಬೃಹತ್ ಕಾಮಗಾರಿ ಯೋಜನೆಗಳ ನಿರ್ವಹಣೆ, ಉಸ್ತುವರಿಗೆ ಸ್ಥಾಪಿತವಾಗಿರುವ ಬಿ ಸೈಲ್ ಸಂಸ್ಥೆ ಟನಲ್ ರಸ್ತೆ ಸೇರಿದಂತೆ ಹಲವು ಬೃಹತ್ ಯೋಜನೆಗಳ ಉಸ್ತುವಾರಿ ವಹಿಸಿಕೊಂಡಿರುವುದು ವಿಶೇಷವಾಗಿದೆ.