ಬೆಂಗಳೂರು,ಜು.4- ಲೋಕಸಭೆ ಚುನಾವಣೆಯಲ್ಲಿ ಮತದಾರರಿಂದ ತಿರಸ್ಕೃತವಾಗಿರುವ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಲು ನೈತಿಕತೆ ಕಳೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧಮ್ಮು ಮತ್ತು ತಾಕತ್ತಿದ್ದರೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆ ಎದುರಿಸಿ ಎಂದು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯ, ಮಾಜಿ ಸಿಎಂ ಯಡಿಯೂರಪ್ಪ ಬಹಿರಂಗ ಸವಾಲು ಹಾಕಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 9 ಸ್ಥಾನ ಗೆದ್ದಿದೆ. ನಿಮನ್ನು ಒಂದಂಕಿಗೆ ಇಳಿಸುತ್ತೇವೆ ಎಂದು ಹೇಳಿದ್ದ ನಾವು ಹೇಳಿದಂತೆ ನಡೆದುಕೊಂಡಿದ್ದೇವೆ. ಯಾವ ಪುರುಷಾರ್ಥಕ್ಕೆ ಆಡಳಿತ ನಡೆಸುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದಾರೆ. ಇವರು ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ. ತಾಕತ್ತಿದ್ದರೆ ವಿಧಾನಸಭೆ ಚುನಾವಣೆ ವಿಸರ್ಜಿಸಿ ಹೊಸ ಜನಾದೇಶ ಪಡೆಯಿರಿ ಎಂದು ಸವಾಲು ಎಸೆದರು.
ಈಗಲೇ ಚುನಾವಣೆ ನಡೆದರೆ ಬಿಜೆಪಿ ನಿಚ್ಚಳವಾಗಿ ಅಧಿಕಾರಕ್ಕೆ ಬರಲಿದೆ. 19 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಗೆದ್ದಿದೆ. ಕಾಂಗ್ರೆಸ್ ಕಟಾಕಟ್ ಸುಳ್ಳು, ಗ್ಯಾರಂಟಿಗಳ ನಡುವೆಯೂ 19 ಸ್ಥಾನ ಗೆದ್ದು , ಶೇ 46.06% ಮತ ಬಿಜೆಪಿ ಪಡೆದಿದೆ. ಅದರ ಶ್ರೇಯಸ್ಸು ನಮ ಮತಭಾಂದವರಿಗೆ ಸಲುತ್ತದೆ ಎಂದರು.
ಸಿಕ್ಕ ಸಿಕ್ಕ ಕಡೆ ಜನರ ತೆರಿಗೆ ಹೆಚ್ಚಿಸಿ ಜನರ ಹೊಟ್ಟೆ ಮೇಲೆ ಹೊಡಿತಿದ್ದಾರೆ. ಸರ್ಕಾರ ಪಾಪರ್ ಆಗದಿದ್ದರೆ ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಿಸುವ ಅಗತ್ಯ ಇರುತ್ತಿರಲಿಲ್ಲ. ಬರಗಾಲ ಇದ್ದರೂ ಕಾವೇರಿ ನೀರು ಹರಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಪೋಲಿಸ್ ಠಾಣೆ ಮುತ್ತಿಗೆ, ದಲಿತ ಮಹಿಳೆ ಮೇಲೆ ಹಲ್ಲೆ, ವಾಲೀಕಿ ನಿಗಮದ ಹಗರಣ ಇದು ಒಂದು ಹಂತಕ್ಕೆ ಬರುವ ಮೊದಲೇ ಮೂಡಾ ಹಗರಣ ಬಯಲಿಗೆ ಬಂದಿದೆ. ಮುಖ್ಯಮಂತ್ರಿ ಗಳ ತವರು ಜಿಲ್ಲೆಯಲ್ಲೇ ಅವರ ಕಣ್ಣುಮುಂದೆ ನಡೆದಿದೆ. ಈ ಹಗರಣದಲ್ಲಿ ಸಿಎಂ ಕೈವಾಡವಿದೆ. ಮುಂದೆ ಬರುವ ಅಧಿವೇಶನದಲ್ಲಿ ಎಲ್ಲಾ ಹಗರಣಗಳನ್ನು ಬಯಲು ಮಾಡುತ್ತೇವೆ ಎಂದು ಗುಡುಗಿದರು.
ಇನ್ನು ಕೆಲವೇ ದಿನಗಳಲ್ಲಿ ಸ್ಥಳೀಯ ಸಂಸ್ಥೆ, ಬಿಬಿಎಂಪಿ ಚುನಾವಣೆ ಬರ್ತಿದೆಈ ಚುನಾವಣೆಗಳಲ್ಲಿ ನಾವು ಹೆಚ್ಚು ಸೀಟ್ ಗೆದ್ದು ಅಧಿಕಾರಕ್ಕೆ ಬರಬೇಕಾಗಿದೆ. ವಿಜಯೇಂದ್ರ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದಾರೆ. ಸದನದ ಒಳಗೂ- ಹೊರಗೂ ಸಕ್ರಿಯ ವಿರೋಧ ಪಕ್ಷವಾಗಿ ಕೆಲಸ ಮಾಡೋಣಪಕ್ಷ ಸಂಘಟನೆ ಮಾಡಿ , ಪಕ್ಷವನ್ನು ಬೆಳೆಸೋಣಕಾಂಗ್ರೆಸ್ ನ ಜನವಿರೋಧಿ, ಭ್ರಷ್ಟಾಚಾರದ ವಿರುದ್ಧ ಸಮರ ಸಾರೋಣ ಎಂದು ಕರೆ ಕೊಟ್ಟರು.