Friday, October 18, 2024
Homeಮನರಂಜನೆಮಲಯಾಳಂ ನಟ ಬೈಜು ಸಂತೋಷ್ ಬಂಧನ

ಮಲಯಾಳಂ ನಟ ಬೈಜು ಸಂತೋಷ್ ಬಂಧನ

Baiju Santhosh arrested for rash and drunken driving

ತಿರುವನಂತಪುರಂ , ಅ. 14 (ಪಿಟಿಐ) – ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಆರೋಪದ ಮೇಲೆ ಮಲಯಾಳಂ ಚಲನಚಿತ್ರ ನಟ ಬೈಜು ಸಂತೋಷ್ ಅವರನ್ನು ಇಂದು ಮುಂಜಾನೆ ಪೊಲೀಸರು ಬಂಧಿಸಿದ್ದಾರೆ.

ನಗರದ ಮ್ಯೂಸಿಯಂ ಪೊಲೀಸ್ ಠಾಣೆ ವ್ಯಾಪ್ತಿಯ ಕೌಡಿಯಾರ್-ವೆಲ್ಲಯಂಬಲಂ ರಸ್ತೆಯಲ್ಲಿ ರಾತ್ರಿ 11.45ಕ್ಕೆ ಈ ಘಟನೆ ನಡೆದಿದೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೈಜು ಅವರನ್ನು ವಶಕ್ಕೆ ಪಡೆದು ಇಂದು ಮುಂಜಾನೆ ಅವರನ್ನು ಬಂಧಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ ಎಸ್ ) (ಸಾರ್ವಜನಿಕ ಮಾರ್ಗದಲ್ಲಿ ದುಡುಕಿನ ಚಾಲನೆ) ಮತ್ತು 1988 ರ ಮೋಟಾರು ವಾಹನಗಳ ಕಾಯ್ದೆಯ ಸೆಕ್ಷನ್ 185 (ಮದ್ಯದ ಅಮಲಿನಲ್ಲಿ ಚಾಲನೆ) ಸೆಕ್ಷನ್ 281 ರ ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಗಿದೆ.


ನಂತರ ಬೈಜು ಅವರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಭೀರ ಗಾಯಗಳಾಗದ ಸ್ಕೂಟರ್ ಪ್ರಯಾಣಿಕರು ಪೊಲೀಸರಿಗೆ ದೂರು ನೀಡಿಲ್ಲ

RELATED ARTICLES

Latest News