Sunday, April 20, 2025
Homeಮನರಂಜನೆಕಾರಿನ ಫ್ಯಾನ್ಸಿ ನಂಬರ್‌ಗೆ 7.75 ಲಕ್ಷ ಖರ್ಚು ಮಾಡಿದ ಬಾಲಯ್ಯ

ಕಾರಿನ ಫ್ಯಾನ್ಸಿ ನಂಬರ್‌ಗೆ 7.75 ಲಕ್ಷ ಖರ್ಚು ಮಾಡಿದ ಬಾಲಯ್ಯ

Balakrishna Spends ₹7.75 Lakh on Fancy Car Number!

ಹೈದ್ರಾಬಾದ್, ಏ.20- ಸಾರ್ವಜನಿಕರಲ್ಲ, ಸ್ಟಾರ್ ನಟರುಗಳು ಕೂಡ ತಮ್ಮ ನೆಚ್ಚಿನ ವಾಹನಗಳ ಫ್ಯಾನ್ಸಿ ನಂಬರ್ ಪಡೆಯಲು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಲು ಸದಾ ಮುಂಚೂಣಿಯಲ್ಲಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಟಾಲಿವುಡ್‌ನ ಹಿರಿಯ ನಟ ಹಾಗೂ ಆಂಧ್ರಪ್ರದೇಶದ ಶಾಸಕ ಬಾಲಕೃಷ್ಣ.

ನಂದಮೂರಿ ಬಾಲಕೃಷ್ಣ ಅವರ ಬಳಿ ಈಗಾಗಲೇ ಸಾಕಷ್ಟು ಐಷಾರಾಮಿ ಕಾರುಗಳಿದ್ದು, ಈಗ ಅವರ ಮನೆಯ ಹೊಸ ಅತಿಥಿಯಾಗಿ ಐಷಾರಾಮಿ ಬಿಎಂಡಬ್ಲ್ಯು ಕಾರ್ ಆಗಮನವಾಗಿದೆ. ಇದಕ್ಕೆ ಫ್ಯಾನ್ಸಿ ನಂಬರ್ ಪಡೆಯಲು ಸ್ವತಃ ಸ್ಟಾರ್ ನಟನೇ ಹರಾಜಿನಲ್ಲಿ ಪಾಲ್ಗೊಂಡು ತಮ್ಮ ನೆಚ್ಚಿನ ಟಿಜಿ09 ಎಫ್ 0001 ನಂಬರ್ ಪಡೆಯಲು 7.75 ಲಕ್ಷ ರೂ.ಗಳನ್ನು ವ್ಯಯಿಸಿದ್ದು, ಈಗ ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಖೈರ್ತಾಬಾದ್ ಆರ್‌ಟಿಒ ವತಿಯಿಂದ ಹಮ್ಮಿಕೊಂಡಿದ್ದ ಈ ಹರಾಜಿನಲ್ಲಿ ತಮ್ಮ ವಾಹನಗಳಿಗೆ ಫ್ಯಾನ್ಸಿ ನಂಬರ್ ಖರೀದಿಸಲು ದೊಡ್ಡ ಮಟ್ಟದಲ್ಲಿ ಮಾಲೀಕರು ಆಗಮಿಸಿದ್ದು, ಒಂದೇ ದಿನದಲ್ಲಿ ದಾಖಲೆಯ 37.15 ಲಕ್ಷ ರೂ.ಗಳು ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ಈ ಹರಾಜಿನಲ್ಲಿ ಬಾಲಯ್ಯ ಅವರು ಪಾಲ್ಗೊಂಡು ತಮ್ಮ ಮನೆಯ ಹೊಸ ಅತಿಥಿ (ಬಿಎಂಡಬ್ಲ್ಯು)ಗೆ ನಾವು ಮೆಚ್ಚುಗೆ ಪಡೆದಿರುವ ನಂಬರ್ ಅನ್ನೇ ಖರೀದಿಸಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ವಾಹನಗಳ ನಂಬರ್ ಪ್ಲೇಟ್ ಗಳು ರ್ಆಟಿಒಗಳು ವಿತರಿಸುತ್ತವೆ. ಆದರೆ ಕೆಲವರು ತಮಗೆ ಮೆಚ್ಚಿನ ಫ್ಯಾನ್ಸಿ ನಂಬರ್ ಪಡೆಯಲು ಇಲಾಖೆಯು ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅದಕ್ಕಾಗಿ ದೊಡ್ಡ ಮಟ್ಟದ ಮೊತ್ತ ವ್ಯಯಿಸಿ ಖರೀದಿಸುವ ಕ್ರೇಜ್ ಬಹಳಷ್ಟು ಮಂದಿಯಲ್ಲಿದ್ದು, ಇದರಿಂದ ಸರ್ಕಾರಕ್ಕೆ ಅಪಾರ ಪ್ರಮಾಣದ ಲಾಭವು ಹರಿದುಬರಲಿದೆ.

RELATED ARTICLES

Latest News