ಇಸ್ಲಾಮಾಬಾದ್,ಮೇ 15– ಅಪರೇಷನ್ ಸಿಂಧೂರ ಕಾರ್ಯಾಚಾರಣೆಯ ಮೂಲಕ ಈಗಾಗಲೇ ಭಾರೀ ಹೊಡೆತ ತಿಂದಿರುವ ಪಾಕಿಸ್ತಾನಕ್ಕೆ ಮತ್ತೊಂದು ಮರ್ಮಾಘಾತ ಎದುರಾಗಿದೆ. ಪಾಕಿಸ್ತಾನದಿಂದ ಬಲೂಚಿಸ್ತಾನ್ ಸ್ವತಂತ್ರವಾಗಿದೆ ಎಂದು ಅಲ್ಲಿನ ಖ್ಯಾತ ಲೇಖಕ ಮಿರ್ ಯಾರ್ ಬಲೂಚ್ ಸೇರಿ ಕೆಲ ನಾಯಕರು ಎಕ್್ಸನಲ್ಲಿ ಘೋಷಿಸಿದ್ದು, ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ಪ್ರದೇಶದಲ್ಲಿ ದಶಕಗಳ ಹಿಂಸಾಚಾರ, ಬಲವಂತದ ಕಣರೆಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ತುಮ್ ಮಾರೋಗೆ ಹಮ್ ನೆಕ್ಲೆಂಗಿ, ಹಮ್ ನಸಲ್ ಬಚಾನಿ ನೆಕ್ಲಿ ಹೈ, ಆವೋ ಹಮಾರಾ ಸಾಥ್ ದೋ ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನ್ನಾದ್ಯಂತ ಸಾರ್ವಜನಿಕರು ಬೀದಿಗಿಳಿದಿದ್ದಾರೆ. ಇದು ಬಲೂಚಿಸ್ತಾನ್ ಪಾಕಿಸ್ತಾನವಲ್ಲ.
ಜಗತ್ತು ಇನ್ನು ಮುಂದೆ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ. ಭಾರತೀಯ ನಾಗರಿಕರು, ವಿಶೇಷವಾಗಿ ಮಾಧ್ಯಮಗಳು, ಯೂಟ್ಯೂಬರ್ಗಳು ಮತ್ತು ಬುದ್ಧಿಜೀವಿಗಳು ಬಲೂಚಿಸ್ತಾನ್ಗಳನ್ನು ಪಾಕಿಸ್ತಾನದ ಸ್ವಂತ ಜನರು ಎಂದು ಕರೆಯುವುದನ್ನು ನಿಲ್ಲಿಸುವಂತೆ ಅವರು ಇದೇ ವೇಳೆ ಒತ್ತಾಯಿಸಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ, ಅವರು ಹೇ ನಾ-ಪಾಕಿಸ್ತಾನ್. ನಿಮ ಬಳಿ ಸೈನ್ಯವಿದ್ದರೆ, ನಾವು ಬಲೂಚ್ನ ಸ್ವತಂತ್ರ ಯೋಧರಿದ್ದಾರೆ. ಈ ಯೋಧರು ನಿಮ ವಿರುದ್ಧ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆಯ ಬರಹ ಪೋಸ್ಟ್ ಮಾಡಿದ್ದಾರೆ. ಇತ್ತೀಚಿನ ಗಡಿಯಾಚೆಗಿನ ಮಿಲಿಟರಿ ಕಾರ್ಯಾಚರಣೆಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾದ ನಡುವೆ ಈ ಘೋಷಣೆ ಬಂದಿದೆ.
ಅಲ್ಲದೇ ನವದೆಹಲಿಯಲ್ಲಿ ಬಲೂಚಿಸ್ತಾನದ ರಾಯಭಾರ ಕಚೇರಿಗೆ ಅವಕಾಶ ನೀಡುವಂತೆ ಅವರು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪಾಕಿಸ್ತಾನಿ ಸೈನ್ಯವನ್ನು ಬಲೂಚಿಸ್ತಾನದಿಂದ ಕಳುಹಿಸಿ, ಶಾಂತಿಪಾಲನಾ ಪಡೆಗಳನ್ನು ಕಳುಹಿಸುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ. ಪಿಒಕೆ ಬಿಟ್ಟು ತೊಲಗುವಂತೆ ಪಾಕ್ಗೆ ಭಾರತ ತಾಕೀತು ಮಾಡಿರುವುದನ್ನು ಬಲೂಚಿಸ್ತಾನ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಪಾಕಿಸ್ತಾನವು ತಕ್ಷಣವೇ ಪಿಒಕೆ ತೊರೆಯುವಂತೆ ಅಂತರರಾಷ್ಟ್ರೀಯ ಸಮುದಾಯವು ಒತ್ತಾಯಿಸಬೇಕು. ಭಾರತಕ್ಕೆ ಪಾಕಿಸ್ತಾನದ ಸೈನ್ಯವನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಭಯೋತ್ಪಾದಕ ಪಾಕಿಸ್ತಾನದ ಪತನ ಸಮೀಪಿಸುತ್ತಿದೆ. ನಾವು ನಮ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದೇವೆ. ಅಲ್ಲದೇ ದೆಹಲಿಯಲ್ಲಿ ಬಲೂಚಿಸ್ತಾನದ ಅಧಿಕೃತ ಕಚೇರಿ ಮತ್ತು ರಾಯಭಾರ ಕಚೇರಿಯನ್ನು ಅನುಮತಿಸುವಂತೆ ನಾವು ಭಾರತವನ್ನು ವಿನಂತಿಸುತ್ತೇವೆ. ಜಿನ್ಹಾ ಹೌಸ್ ಅನ್ನು ಬಲೂಚಿಸ್ತಾನ ಹೌಸ್ ಎಂದು ಮರುನಾಮಕರಣ ಮಾಡಬೇಕು ಎಂದು ಬರೆದುಕೊಂಡಿದ್ದಾರೆ. ವಿಶ್ವಸಂಸ್ಥೆಯು ತಕ್ಷಣವೇ ಬಲೂಚಿಸ್ತಾನಕ್ಕೆ ಶಾಂತಿ ಪಡೆಗಳನ್ನು ಕಳುಹಿಸಬೇಕು. ಪಾಕ್ ಸೇನೆ, ಪೊಲೀಸ್ ಸಿಬ್ಬಂದಿ, ಮಿಲಿಟರಿ ಗುಪ್ತಚಾರ ಸೇರಿ ಶಸಾ್ತ್ರಸ್ತ್ರ ಸೇರಿ ಎಲ್ಲಾ ಯುದ್ಧ ಸಾಮಾಗ್ರಿಗಳನ್ನು ಬಿಟ್ಟು ತಕ್ಷಣವೇ ಬಲೂಚಿಸ್ತಾನವನ್ನು ತೊರೆಯವಂತೆ ಆಗ್ರಹಿಸಬೇಕು ಎಂದಿದ್ದಾರೆ.
ಬಲೂಚಿಸ್ತಾನ್ನ ಸ್ವಾತಂತ್ರ್ಯ ಸರ್ಕಾರದ ರಾಜ್ಯೋತ್ಸವ ಶೀಘ್ರದಲ್ಲೇ ನಡೆಯಲಿದೆ. ಬಲೂಚಿಸ್ತಾನದ ನಿಯಂತ್ರಣವನ್ನು ಹೊಸ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯತೆ ನೀಡಲಾಗಿರುವುದು. ನಮ ಮಿತ್ರ ರಾಷ್ಟ್ರಗಳನ್ನು ಬಲೂಚಿಸ್ತಾನದ ಸರ್ಕಾರ ರಚನೆಯಂದು ಆಹ್ವಾನಿಸಲಾಗುವುದು ಎಂದಿದ್ದಾರೆ.
ಮಿರ್ ಯಾರ್ ಹೇಳಿದ್ದೇನು :
15 ಮೇ 2025 – ಪಾಕಿಸ್ತಾನವು ಪಿಒಕೆ ಖಾಲಿ ಮಾಡುವಂತೆ ಕೇಳುವ ಭಾರತದ ನಿರ್ಧಾರವನ್ನು ಬಲೂಚಿಸ್ತಾನ್ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಢಾಕಾದಲ್ಲಿ ತನ್ನ 93,000 ಸೇನಾ ಸಿಬ್ಬಂದಿಗೆ ಶರಣಾದಂತೆ ಮತ್ತೊಂದು ಅವಮಾನವನ್ನು ತಪ್ಪಿಸಲು ಪಾಕಿಸ್ತಾನವು ತಕ್ಷಣವೇ ಪಿಒಕೆಯನ್ನು ತೊರೆಯುವಂತೆ ಅಂತಾರಾಷ್ಟ್ರೀಯ ಸಮುದಾಯವು ಒತ್ತಾಯಿಸಬೇಕು.
ಭಾರತವು ಪಾಕಿಸ್ತಾನ ಸೇನೆಯನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ. ಪಾಕಿಸ್ತಾನದ ಸೇನಾ ಜನರಲ್ಗಳನ್ನು ರಕ್ತಪಾತಕ್ಕೆ ಹೊಣೆಗಾರರನ್ನಾಗಿ ಮಾಡಬೇಕು. ಏಕೆಂದರೆ ಇಸ್ಲಾಮಾಬಾದ್ ಪಿಒಕೆ ಜನರನ್ನು ಮಾನವ ಗುರಾಣಿಗಳಾಗಿ ಬಳಸುತ್ತಿದೆ ಎಂದು ಮಿರ್ ಯಾರ್ ಹೇಳಿದ್ದಾರೆ.
ಬಲೂಚಿಸ್ತಾನವು ಬಹಳ ಹಿಂದಿನಿಂದಲೂ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಗೆ ಸಾಕ್ಷಿಯಾಗಿದೆ. ಇವುಗಳಲ್ಲಿ ಬಲವಂತದ ಕಣರೆಗಳು, ಕಾನೂನುಬಾಹಿರ ಹತ್ಯೆಗಳು ಮತ್ತು ಭಿನ್ನಾಭಿಪ್ರಾಯದ ಮೌನ ಸೇರಿವೆ. ಪಾಕಿಸ್ತಾನಿ ಭದ್ರತಾ ಪಡೆಗಳು ಮತ್ತು ಸಶಸ್ತ್ರ ಗುಂಪುಗಳೆರಡರ ಮೇಲೂ ದುರುಪಯೋಗದ ಆರೋಪಗಳಿವೆ ಎಂದು ಅವರು ಹೇಳಿದ್ದಾರೆ.