Tuesday, March 18, 2025
Homeಜಿಲ್ಲಾ ಸುದ್ದಿಗಳು | District Newsವಿಶ್ವದಾಖಲೆಯ ಸಾಧನೆಗೈದ ಬಂಡೆ ಸಹೋದರಿಯರು

ವಿಶ್ವದಾಖಲೆಯ ಸಾಧನೆಗೈದ ಬಂಡೆ ಸಹೋದರಿಯರು

Bande sisters set world record

ವಿಜಯಪುರ,ಮಾ.17– ಆಟವಾಡುವ ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಈ ಸಾಧನೆ ಅದ್ವಿತೀಯವಾದುದು. ದೃಢಸಂಕಲ್ಪದಿಂದ ಮುನ್ನುಗ್ಗಿದಾಗ ಸಾಧನೆ ಸಾಧ್ಯ ಎಂಬುದನ್ನು ತಾಲೂಕಿನ ನಾಗಠಾಣ ಗ್ರಾಮದ ಈ ಅವಳಿ ಸಹೋದರಿಯರು ಸಾಬೀತುಪಡಿಸಿದ್ದಾರೆ.

ಶಿಕ್ಷಕ ಸಂತೋಷ ಬಂಡೆ ಹಾಗೂ ಸುರೇಖಾ ಬಂಡೆ ಅವರ ಅವಳಿ ಹೆಣ್ಣು ಮಕ್ಕಳಾದ ಅನುಶ್ರೀ ಹಾಗೂ ಶ್ರೀನಿಧಿ ಬಂಡೆ ಅವರು ಸದ್ಯ ಯುಕೆಜಿ ತರಗತಿಯಲ್ಲಿ ಓದುತ್ತಿದ್ದು, ಅವರು ಕೇವಲ 47 ಸೆಕೆಂಡುಗಳಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಹೇಳಿ ನೂತನ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.

ಹೈ-ವೈಬ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಸ್ನವರು ಚಿಕ್ಕ ಮಕ್ಕಳ ಈ ಅಪರೂಪದ ಗ್ರಹಿಕಾ ಶಕ್ತಿ, ಬುದ್ಧಿಶಕ್ತಿಯ ಸಾಧನೆಯನ್ನು ಪರಿಗಣಿಸಿ, ರೆಕಾರ್ಡ್ ಟೈಟಲ್ ಸರ್ಟಿಫಿಕೇಟ್, ಟ್ರೋಫಿ, ಬ್ಯಾಡ್ಜ್, ಮೆಡಲ್ ನೀಡುವ ಮೂಲಕ ನೂತನ ವಿಶ್ವದಾಖಲೆಯ ಹೆಮ್ಮೆಯೊಂದಿಗೆ ಗೌರವಿಸಿದ್ದಾರೆ.

47 ಸೆಕೆಂಡುಗಳಲ್ಲಿ ಭಾರತದ ಸಂವಿಧಾನ ಪೀಠಿಕೆ ಹೇಳಿದ ಯುಕೆಜಿ ಅವಳಿ ಸಹೋದರಿಯರು- ಎಂಬ ತಲೆಬರಹದ ಮೂಲಕ ಬುದ್ದಿಶಕ್ತಿ ವಿಭಾಗದಲ್ಲಿ ಇದೊಂದು ನೂತನ ವಿಶ್ವದಾಖಲೆಯ ಸಾಧನೆ ಎಂದು ಹೈ-ವೈಬ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಸ್ ನವರು ಘೋಷಿಸಿ, ಗೌರವಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಮಕ್ಕಳ ಈ ಸಾಧನೆಗಾಗಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೇಕಾರ್ಡ್ಸ್ನವರು ನ್ಯಾಷನಲ್ ರೆಕಾರ್ಡ್ ದಾಖಲೆಯೊಂದಿಗೆ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿಯೊಂದು ಮಗುವು ಪ್ರತಿಭಾನ್ವಿತ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸುವ ಜತೆಗೆ ಚಿಕ್ಕಂದಿನಿಂದಲೇ ಪತ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹಿಸಿದರೆ ಒಳಿತಾಗುತ್ತದೆ. ಮಕ್ಕಳ ಈ ವಿಶ್ವದಾಖಲೆಯ ಸಾಧನೆ ಸಂತಸ ತಂದಿದೆ ಎಂದು ಮಕ್ಕಳ ತಂದೆ ಸಂತೋಷ ಬಂಡೆ ಖುಷಿ ಹಂಚಿ ಕೊಂಡರು.

RELATED ARTICLES

Latest News