ದಾಬಸ್‍ಪೇಟೆ,ಸೆ.25- ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದು ಖಂಡನೀಯ. ಯಾವ ಸರ್ಕಾರಗಳು ರೈತರಪರ ನಿಲ್ಲುವುದಿಲ್ಲ. ನೀರಿನ ವಿಷಯ ಬಂದಾಗ ದೂರವೇ ಉಳಿಯುತ್ತವೆ. ಅನ್ಯಾಯದ ವಿರುದ್ದ ನಾವೆಲ್ಲರೂ ಪ್ರಾಮಾಣಿಕವಾಗಿ ಹೋರಾಟ ಮಾಡಬೇಕಿದೆ ಎಂದು ರಾಜ್ಯ ರೈತ ಸಂಘಗಳ ಒಕ್ಕೂಟದ ರಾಜ್ಯಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ರಾಜ್ಯ ಪಟ್ಟಣದಲ್ಲಿ ರೈತ ಸಂಘಟನೆಗಳ ಓಕ್ಕೂಟ, ರಾಜ್ಯ ಕಬ್ಬು ಬೇಳೇಗಾರರ ಸಂಘ ಕರ್ನಾಟಕದಿಂದ ನೆಲಮಂಗಲ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ನಾಳೆ ಬೆಂಗಳೂರು ಬಂದ್ ಮಾಡುತ್ತಿದ್ದೇವೆ. ಹಲವಾರು ಕನ್ನಡಪರ ಸಂಘಟನೆಗಳು ಒಗ್ಗೂಡಿ ಟೌನ್‍ಹಾಲಿನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೂ ಶಾಂತಿಯುತ ಬಂದ್ ಮಾಡುತ್ತಿದ್ದೇವೆ ಎಂದರು.
ಕೆನಡಾ ಬಿಟ್ಟು ಬೇರೆ ದೇಶಗಳತ್ತ ಮುಖಮಾಡಿದ ಭಾರತೀಯ ವಿದ್ಯಾರ್ಥಿಗಳು
ಕರ್ನಾಟಕ ಕೈಗಾರಿಕಾ ಪ್ರದೇಶದವರೂ ನಿಮ್ಮ ಭೂಮಿಯನ್ನು ಸ್ವಾೀಧಿನ ಮಾಡಿ ಅದಕ್ಕೆ ತಕ್ಕದಾದ ಬೆಲೆಯನ್ನು ನೀಡಬೇಕು ಇಲ್ಲಾವಾದರೆ ಅದರ ಬಗ್ಗೆ ನಮ್ಮ ತಾಲೂಕು ಘಟಕ ಉಗ್ರವಾಗಿ ಹೋರಾಡುತ್ತದೆ, ಸೋಂಪುರ ಹೋಬಳಿಯಲ್ಲಿ ಅಕ್ರಮ ಕ್ಷೇಷರ್ ನಿಂದ, ರಿಯಲ್ ಏಸ್ಟೆಟ್ ನಿಂದ ಮಾಫಿಯಾ ಹೆಚ್ಚಾಗಿದೆ ಎಂದರು.
ಕಾವೇರಿ ನೀರು ಬಿಡುತ್ತಿರುವುದರಿಂದ ಕಾವೇರಿ ನ್ಯಾಯಾೀಧಿಕರಣ ಹಾಗೂ ಸುಪ್ರೀಂಕೋರ್ಟ್ ತಿರ್ಪೀನಿಂದ 26ನೇ ತಾರಿಖು ಬೆಂಗಳೂರು ಬಂದ್ ಮಾಡುತ್ತಿದ್ದೇವೆ ಇದಕ್ಕೇ ಹಲವಾರು ಕನ್ನಡ ಪರ ಸಂಘಟನೆಗಳು, ಎಲ್ಲರೂ ಬಂದ ಮಾಡಲು ತೀರ್ಮಾನಿಸಿದ್ದು ಅಂದು ನಾವು ಟೋನ್ ಹಾಲಿನಿಂದ ಮೈಸೂರು ಭ್ಯಾಂಕ್ ನವರೆವಿಗೂ ಶಾಂತಿಯುತ ಬಂದ್ ಮಾಡಿ ಯಶಸ್ವಿಗೊಳಿಸುತ್ತೇವೆ ಎಂದರು.
ಅಧ್ಯಕ್ಷತೆಯನ್ನು ಭಾಬಾ ಸಾಹೇಬ್ ಜನಾರಾಳಕರನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯದೀಶರು, ಮುಖ್ಯ ಅಥೀತಿಗಳಾದ ಟಿ.ಎನ್.ಶ್ರೀನಿವಾಸಯ್ಯ, ಕಾನೂನು ಸಲಹಗಾರರಾದ ಡಾ.ಕಿಶನ್ ರಾವ್ ಉಪಸ್ತೀತರಿದ್ದರು.
ನೂತನ ಪದಾದಿಕಾರಿಗಳಾದ ನೆಲಮಂಗಳ ತಾಲೂಕು ಅಧ್ಯಕ್ಷ ಶ್ರೀಪತಿಹಳ್ಳಿ ರಾಜೇಶ್, ಪ್ರಧಾನ ಕಾರ್ಯಧರ್ಶಿ ಹಳೇನಿಜಗಲ್ ಗುರುಮೂರ್ತಿ , ಉಪಾಧ್ಯಕ್ಷರಾದ ಎನ್.ಶಿವಕುಮಾರ, ಎಂ.ಸಿ.ನೀಲಕಂಟಯ್ಯ, ಎಚ್.ಪಿ.ಸುರೇಶ, ದಾಬಸ್‍ಪೇಟೆ ಪಂಚಾಕ್ಷರಿ ಸಂಘಟನಾ ಕಾರ್ಯಧರ್ಶಿ ಶಿವಶಂಕರಯ್ಯ, ದಾಬಸ್ ಪೇಟೆ ಜಗದೀಶ್, ಕಾಂತರಾಜು, ಗೌರಾಪುರ ಲೋಕೇಶ್ ಇದ್ದರು.