ಇಂದಿನ ಬೆಂಗಳೂರಿನ ಕ್ರೈಂ ಸುದ್ದಿಗಳು

Social Share

ಸೈಬರ್ ವಂಚಕರಿಗೆ ನಕಲಿ ಸಿಮ್‍ಕಾರ್ಡ್ ರವಾನೆ; ಇಬ್ಬರು ಸೇಲ್ಸ್ ಎಕ್ಸಿಕ್ಯೂಟಿವ್ ಸೆರೆ
ಬೆಂಗಳೂರು,ಮಾ.4- ಸೈಬರ್ ವಂಚಕರಿಗೆ ನಕಲಿ ಸಿಮ್‍ಕಾರ್ಡ್‍ಗಳನ್ನು ನೀಡಿ ಸಹಕರಿಸುತ್ತಿದ್ದ ಇಬ್ಬರನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಏರ್‍ಟೇಲ್‍ನ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಯಲಹಂಕದ ಹರ್ಷ(24) ಮತ್ತು ಚಿಕ್ಕಬ್ಯಾಲಕೆರೆ ನಿವಾಸಿ ಚೇತನ್(27) ಬಂಧಿತ ಆರೋಪಿಗಳು. ಬಂಧಿತರಿಂದ 7 ಲಕ್ಷ ನಗದು ಹಾಗೂ 120 ಗ್ರಾಂ ತೂಕದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.
# ಘಟನೆ ವಿವರ:
ರೆವಾ ಕಾಲೇಜಿನಲ್ಲಿ ಇಂಜಿನಿಯರ್ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿಗೆ ಇ.ಸಿ.ಎಮ್ ಬ್ರಾಂಚ್ ಸಿಕ್ಕಿದ್ದು ಆದರೆ ಅವರಿಗೆ ಕಂಪ್ಯೂಟರ್ ಬ್ರಾಂಚ್ ಸೀಟ್ ಬೇಕಾಗಿತ್ತು. ಜ.8ರಂದು ರೆವಾ ಕಾಲೇಜಿನಲ್ಲಿ ಕಂಪ್ಯೂಟರ್‍ಸೈನ್ಸ್ ಬ್ರಾಂಚ್‍ಗೆ ಸೀಟ್ ಕೊಡಿಸುವುದಾಗಿ ಎಸ್‍ಎಮ್‍ಎಸ್ ಬಂದಿದೆ. ಇದನ್ನು ನಂಬಿ ಯುವತಿಯ ತಂದೆ, ಎಸ್.ಎಮ್.ಎಸ್‍ನಲ್ಲಿ ಕಳುಹಿಸಿದ್ದ ಮೊಬೈಲ್ ನಂಬರ್ ಸಂಪರ್ಕಿಸಿ ಆ ವ್ಯಕ್ತಿ ಹೇಳಿದಂತೆ 1.27 ಲಕ್ಷ ರೂ.ಗಳನ್ನು ನೀಡಿದ್ದಾರೆ.
ನಂತರ ಆ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇದರಿಂದ ಅನುಮಾನಗೊಂಡ ಅವರು ತಕ್ಷಣ ಕಾಲೇಜಿಗೆ ಹೊಗಿ ಎಸ್.ಎಮ್.ಎಸ್ ಬಗ್ಗೆ ವಿಚಾರ ಮಾಡಿದಾಗ ತಾವು ಮೋಸ ಹೊಗಿರುವುದು ಗೊತ್ತಾಗಿದೆ. ತಕ್ಷಣ ಈ ಬಗ್ಗೆ ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸ್‍ರು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಜ.28ರಂದು ಪ್ರಮುಖ ಆರೋಪಿ ರಾಜೇಶ್ವರ್ ನನ್ನು ಪತ್ತೆಮಾಡಿ ಬಂಧಿಸಿ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಇದೇ ರೀತಿಯಾಗಿ ಹಲವರಿಗೆ ಮೋಸ ಮಾಡಿ ಹಣ ಸಂಪಾದನೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಪೈಕಿ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ದು ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ. ಈ ಆರೋಪಿಯಿಂದ 120 ಗ್ರಾಂ ತೂಕದಷ್ಟು ಒಡವೆ ಹಾಗೂ 7ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಇಷ್ಟೇ ಅಲ್ಲದೇ ಸಾರ್ವಜನಿಕರನ್ನು ವಂಚಿಸಲು ಆರೋಪಿಗೆ ಸಿಮ್ ಕಾರ್ಡ್ ನೀಡುತ್ತಿದ್ದವರ ಬೆನ್ನು ಹತ್ತಿದ ಪೊಲೀಸರು, ಆರೋಪಿಗಳ ಮಾಹಿತಿ ಕಲೆ ಹಾಕಿ ಇಂದು ಇಬ್ಬರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಈ ಆರೋಪಿಗಳು ಏರ್‍ಟೆಲ್‍ನ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದು ಇವರ ಬಳಿ ಗ್ರಾಹಕರು ಸಿಮ್ ಖರೀದಿಗೆ ಬಂದಾಗ ಒಂದು ಫಾರಂಗಿಂತ ಹೆಚ್ಚು ಫಾರಂಗಳಿಗೆ ಸಹಿ ಹಾಕಿಸಿಕೊಂಡು ಹೆಚ್ಚು ಪೊಟೋಗಳನ್ನು ಪಡೆದುಕೊಳ್ಳುತ್ತಿದ್ದರು. ಅಲ್ಲದೆ ಒಂದಕ್ಕಿಂತ ಹೆಚ್ಚು ಬೆರಳು ಮುದ್ರೆಗಳನ್ನು ಪಡೆದು ಒಂದು ಸಿಮ್‍ಕಾರ್ಡ್‍ನ್ನು ಗ್ರಾಹಕರಿಗೆ ನೀಡಿ ಉಳಿದ ಸಿಮ್ ಕಾರ್ಡ್‍ಗಳನ್ನು ಸೈಬರ್ ವಂಚಕರಿಗೆ ನೀಡುತ್ತಿದ್ದು ತಿಳಿದು ಬಂದಿದೆ.
ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತ ಡಾ. ಅನೂಪ್ ಎ ಶೆಟ್ಟಿ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟ್‍ರ್, ಸಂತೋಷ್ ರಾಮ್.ಆರ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡು ವಂಚಕರನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
# ಮೋಜಿನ ಜೀವನಕ್ಕಾಗಿ ಕಳ್ಳತನ: ಆರೋಪಿ ಸೆರೆ; 8 ಲಕ್ಷ ಮೌಲ್ಯದ ಆಭರಣ ವಶ
ಬೆಂಗಳೂರು,ಮಾ.4-ಮೋಜಿನ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿ 8 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಿಟಿಎಂ ಒಂದನೇ ಹಂತ ನಿಮ್ಹಾನ್ಸ್ ಲೇಔಟ್ 8ನೇ ಬಿ ಮುಖ್ಯರಸ್ತೆ ಮನೆಯೊಂದರ ಬೀಗ ಮುರಿದು ಕಳ್ಳರು ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದ ಬಗ್ಗೆ ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಆಗ್ನೇಯ ವಿಭಾಗದ ಉಪಪೊಲೀಸ್ ಆಯುಕ್ತರಾದ ಶ್ರೀನಾಥ್ ಮಹದೇವ ಜೋಷಿ, ಮೈಕೋಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕರಿಬಸವನಗೌಡ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ನಟರಾಜ್, ಪಿಎಸ್‍ಐ ಸುರೇಂದ್ರ ಆಚಾರ್ ಮತ್ತು ಸಿಬ್ಬಂದಿಗಳ ತಂಡವನ್ನು ಆರೋಪಿಗಳ ಪತ್ತೆಗಾಗಿ ರಚಿಸಲಾಗಿತ್ತು.
ಈ ತಂಡವು ಕಳ್ಳತನ ನಡೆದ ಪ್ರದೇಶದಲ್ಲಿನ ಎಲ್ಲ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾದ ವಿಡಿಯೋ ಪುಟೇಜ್‍ಗಳನ್ನು ಪರಿಶೀಲಿಸಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಒಬ್ಬ ಆರೋಪಿಯನ್ನು ಬಂಧಿಸಿ 8 ಲಕ್ಷ ರೂ. ಬೆಲೆ ಬಾಳುವ 162 ಗ್ರಾಂ ಚಿನ್ನಾಭರಣ ಮತ್ತು 5 ಸಾವಿರ ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರೋಪಿಯ ಬಂಧನದಿಂದ ಸುದ್ದಗುಂಟೆಪಾಳ್ಯ ಮತ್ತು ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳು ಪತ್ತೆಯಾಗಿವೆ.
ಈ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರು ಪ್ರಶಂಸಿಸಿದ್ದಾರೆ.
# ಮಾದಕ ವಸ್ತು ಮಾರಾಟ: ಡ್ರಗ್ ಪೆಡ್ಲರ್ ಬಂಧನ
ಬೆಂಗಳೂರು,ಮಾ.4- ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ, ಸಾಫ್ಟ್‍ವೇರ್ ಉದ್ಯೋಗಿಗಳಿಗೆ ಮತ್ತು ಪರಿಚಯವಿರುವ ಗಿರಾಕಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಡ್ರಗ್ ಪೆಡ್ಲರ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿ 1.5 ಲಕ್ಷ ಬೆಲೆಯ ಎಂಡಿಎಂಎ ಕ್ರಿಸ್ಟಲ್ ಮತ್ತು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ವಾಸಿಸುತ್ತಿದ್ದ ಕೇರಳ ಮೂಲದ ನಿವಾಸಿಯೊಬ್ಬನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಶೋಧ ಮುಂದುವರೆದಿದೆ.
ಬಂಧಿತ ಆರೋಪಿಯು ಕೇರಳದ ಕಾರಸಗೋಡು ಜಿಲ್ಲೆಯವನಾಗಿದ್ದಾನೆ. ಈತನ ವಿರುದ್ದ ಎನ್.ಡಿ.ಪಿ.ಎಸ್, ದರೋಡೆ, ಕೊಲೆಗೆ ಯತ್ನ, ಹೊಡೆದಾಟ, ಶಸ್ತ್ರಾಸ್ತ್ರ ಕಾಯ್ದೆ ಅಡಿ ಹಲವಾರು ಪ್ರಕರಣಗಳು ದಾಖಲಾಗಿದ್ದು ಹಾಲಿ ಜÁಮೀನನ ಮೇಲೆ ಹೊರಗೆ ಬಂದಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
ಆರೋಪಿಯು ಬೆಂಗಳೂರಿನಲ್ಲಿ ವಾಸವಿರುವ ಆಫ್ರಿಕಾ ಮೂಲದ ಪ್ರಜೆಯಿಂದ ನಿಷೇದಿತ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್ ಕಡಿಮೆ ಬೆಲೆಗೆ ಖರೀದಿಸಿ ಆತ ತನ್ನ ವಶದಲ್ಲಿ ಇಟ್ಟುಕೊಂಡು ನಗರ ಮತ್ತು ಕೇರಳದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ, ಸಾಫ್ಟ್‍ವೇರ್ ಉದ್ಯೋಗಿಗಳಿಗೆ ಮತ್ತು ಪರಿಚಯವಿರುವ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದನು.
ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೇಂದ್ರ ಅಪರಾಧ ವಿಭಾಗದ ಮಾದಕದ್ರವ್ಯ ನಿಗ್ರಹದಳದ ಅಕಾರಿ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ, ಕೇರಳದ ಡ್ರಗ್ ಪೆಡ್ಲರ್‍ನನ್ನು ಬಂಧಿಸಿ ಸುಮಾರು 1.5 ಲಕ್ಷ ಬೆಲೆಯ 25 ಗ್ರಾಂ ಮಾದಕವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್, ಕೃತ್ಯಕ್ಕೆ ಬಳಸಿದ್ದ 1 ಮೊಬೈಲ್ ಪೆÇೀನು, ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಆರೋಪಿ ವಿರುದ್ದ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಜಂಟಿ ಪೊಲೀಸ್ ಆಯುಕ್ತರು ಮತ್ತು ಉಪಪೊಲೀಸ್ ಆಯುಕ್ತರು (ಅಪರಾಧ-2) ರವರ ಮಾರ್ಗದರ್ಶನದಲ್ಲಿ ಕೇಂದ್ರ ಅಪರಾಧ ವಿಭಾಗದ ಮಾದಕದ್ರವ್ಯ ನಿಗ್ರಹ ದಳದ ಎಸಿಪಿ ಮತ್ತು ಅವರ ಸಿಬ್ಬಂದಿ ತಂಡ ಯಶಸ್ವಿಯಾಗಿ ನಿರ್ವಹಿಸಿದೆ.
# ಜೂಜು: 1 ಲಕ್ಷ ಜಪ್ತಿ
ಬೆಂಗಳೂರು,ಮಾ.4- ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ 1.10 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿನಗರ 11ನೇ ಮುಖ್ಯರಸ್ತೆಯ ಮನೆಯೊಂದರ 2ನೇ ಮಹಡಿಯಲ್ಲಿ ಅಂದರ್‍ಬಾಹರ್ ಜೂಜಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣ ಕಾರ್ಯ ಪ್ರವೃತ್ತರಾದ ಸಿಸಿಬಿ ಅಕಾರಿಗಳು ಹಾಗೂ ಸಿಬ್ಬಂದಿ ಆ ಮನೆ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಸಿ ಜೂಜಾಟಕ್ಕೆ ಸಂಬಂಧಿಸಿದಂತೆ ಪಣಕ್ಕಿಟ್ಟಿದ್ದ 1.10 ಲಕ್ಷ ಹಣ, ಇಸ್ಪೀಟ್ ಎಲೆಗಳು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
# ಕಾಂಗ್ರೆಸ್ ಮುಖಂಡರ ಜೇಬಿಗೆ ಕತ್ತರಿ
ಬೆಂಗಳೂರು,ಮಾ.4- ಮೇಕೆದಾಟು ಪಾದಯಾತ್ರೆ ಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡರೊಬ್ಬರ ಜೇಬಿಗೆ ಕಳ್ಳರು ಬ್ಲೇಡ್ ಹಾಕಿ ಬರೋಬ್ಬರಿ 68 ಸಾವಿರ ಹಣ ಪಿಕ್‍ಪಾಕೆಟ್ ಮಾಡಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಮುಖಂಡರು ಕರ್ನಾಟಕ ಕಾಂಪೋಸ್ಟ್ ಡೆವಲಪ್‍ಮೆಂಟ್ ಕಾಪೆಪೋರೇಷನ್ ಮಾಜಿ ಅಧ್ಯಕ್ಷರಾದ ಡಾ.ಆನಂದ್‍ಕುಮಾರ್ ಅವರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿನ್ನೆ ಬೆಳಗ್ಗೆ ಪಾದಯಾತ್ರೆಯು ಗಾಯಿತ್ರಿ ವಿಹಾರದಿಂದ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಮುಖ್ಯ ಗೇಟಿನ ಬಳಿ ಪಿಕ್‍ಪಾಕೆಟ್ ಮಾಡಿದ್ದು, ಹಣದ ಜೊತೆಗೆ ಕ್ರೆಡಿಕ್ ಕಾರ್ಡ್, ಡೆಬಿಟ್ ಕಾರ್ಡ್ ಕಳ್ಳತನ ಆಗಿದೆ ಎಂದು ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Articles You Might Like

Share This Article