ಬೆಂಗಳೂರು,ಜು.29- ಶಿರಾಡಿ ಘಾಟ್ ಬಳಿಯ ಎಡಕುಮೇರಿ-ಕಡವಗರಳ್ಳಿ ಮಧ್ಯೆ ಭೂ ಕುಸಿತವಾಗಿ ಬೆಂಗಳೂರು-ಮಂಗಳೂರು ರೈಲು ಸಂಚಾರ ಒಂದು ವಾರಗಳ ಕಾಲ ರದ್ದಾಗಿದ್ದು, ಖಾಸಗಿ ಬಸ್ಗಳ ಟಿಕೆಟ್ ದರ ದುಪ್ಪಟ್ಟಾಗಿದೆ.
ವಿಮಾನ ಪ್ರಯಾಣ ದರವೂ ಕೂಡ ಏರಿಕೆಯಾಗಿದೆ. ಭೂ ಕುಸಿತದ ಹಿನ್ನೆಲೆಯಲ್ಲಿ ಒಂದು ವಾರ ರೈಲುಗಳ ಸಂಚಾರ ರದ್ದಾಗಿದ್ದು, 700 ಮಂದಿಯಿಂದ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಆ.4ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ರೈಲು ಸಂಚಾರ ರದ್ದಾದ ಬೆನ್ನಲ್ಲೇ ಬೆಂಗಳೂರು-ಮಂಗಳೂರು ನಡುವಿನ ಖಾಸಗಿ ಬಸ್ಗಳ ಪ್ರಯಾಣದರ ದುಪ್ಪಟ್ಟಾಗಿದೆ. ಜೊತೆಗೆ ವಿಮಾನ ಪ್ರಯಾಣದರವೂ ಕೂಡ ಏರಿಕೆಯಾಗಿದೆ. ಸಾಮಾನ್ಯವಾಗಿ ರೂ. 2,000 ದಿಂದ ರೂ. 3,000 ವರೆಗೆ ಇದ್ದ ವಿಮಾನ ಪ್ರಯಾಣ ದರ ಈಗ ಏಕಾಏಕಿ ರೂ. 10000ಕ್ಕೆ ಏರಿಕೆಯಾಗಿದೆ.
ಕಣ್ಣೂರು-ಬೆಂಗಳೂರು ಎಕ್‌್ಸಪ್ರೆಸ್, ಮಂಗಳೂರು ಸೆಂಟ್ರಲ್-ವಿಜಯಪುರ ಸ್ಪೆಷಲ್ ಎಕ್‌್ಸಪ್ರೆಸ್, ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್, ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಮುರುಡೇಶ್ವರ ಎಕ್ಸ್ ಪ್ರೆಸ್, ಬೆಂಗಳೂರು-ಕಾರವಾರ-ಪಂಚಗಂಗ ಎಕ್‌್ಸಪ್ರೆಸ್ಗಳ ಪ್ರಯಾಣವನ್ನು ಆ.4ರವರೆಗೆ ರದ್ದು ಮಾಡಲಾಗಿದೆ.