Monday, April 7, 2025
Homeರಾಜ್ಯಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚಾರ ಶುಲ್ಕ ಮತ್ತೆ ಏರಿಕೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚಾರ ಶುಲ್ಕ ಮತ್ತೆ ಏರಿಕೆ

Bangalore-Mysore Expressway toll hiked again

ಬೆಂಗಳೂರು,ಏ.6– ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್‌‍ವೇಯಲ್ಲಿನ ಸಂಚಾರ ಶುಲ್ಕ ಮತ್ತೆ ಏರಿಕೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಶುಲ್ಕವನ್ನು ಶೇಕಡಾ 5ರಷ್ಟು ಹೆಚ್ಚಳ ಮಾಡುವ ಮೂಲಕ ವಾಹನ ಸವಾರರಿಗೆ ಶಾಕ್‌ ನೀಡಿದೆ.

ಎಕ್‌್ಸಪ್ರೆಸ್‌‍ವೇ ಸಂಚಾರಕ್ಕೆ ಪ್ರತಿ ವರ್ಷವೂ ಶೇ.5ರಷ್ಟು ಟೋಲ್‌ ದರ ಏರಿಕೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿಧರಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹೆದ್ದಾರಿ ಸಂಖ್ಯೆ 275ರ ಬೆಂಗಳೂರು – ನಿಡಘಟ್ಟ ವಿಭಾಗದಲ್ಲಿ ಸಂಚಾರಕ್ಕೆ ಎಲ್ಲಾ ರೀತಿಯ ವಾಹನಗಳಿಗೂ ಹಿಂದಿನ ದರಕ್ಕಿಂತ ಶೇ.5ರಷ್ಟು ವಿಧಿಸಲಾಗಿದೆ.

2023ರ ಏಪ್ರಿಲ್‌ 01ರಿಂದ ಎಕ್‌್ಸಪ್ರೆಸ್‌‍ವೇ ಸಂಚಾರಕ್ಕೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಟೋಲ್‌ ದರ ನಿಗದಿ ಮಾಡಿತ್ತು. ನಂತರ ಎರಡು ತಿಂಗಳ ಅವಧಿಯಲ್ಲೇ 2023ರ ಜೂನ್‌ 1ರಿಂದ ಏಕಾಏಕಿ ಶೇ.22ರಷ್ಟು ಏರಿಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು.

ಬಳಿಕ ಪ್ರಾಧಿಕಾರದ ನಿಯಮದ ಪ್ರಕಾರ, ಪ್ರತಿ ವರ್ಷ ಏಪ್ರಿಲ್‌ 1ರಿಂದ ವಾರ್ಷಿಕ ಶೇ.5ರಷ್ಟು ಟೋಲ್‌ ದರ ಹೆಚ್ಚಿಸುವ ನಿರ್ಧಾರ ಮಾಡಲಾಗಿತ್ತು. ಇದೀಗ ಮತ್ತೆ ಟೋಲ್‌ ದರ ಪರಿಷ್ಕರಣೆಯಾಗಿದೆ.

ದರ ಏರಿಕೆ ವಿವರ:
ಕಾರು, ವ್ಯಾನ್‌, ಜೀಪುಗಳ ಏಕಮುಖ ಸಂಚಾರಕ್ಕೆ 180 ರೂ. ಎರಡು ಕಡೆ ಸಂಚಾರಕ್ಕೆ (ವಾಪಸ್‌‍ ಪ್ರಯಾಣ) 270 ರೂ. (10 ರೂ. ಹೆಚ್ಚಳ), ಫಾಸ್ಟ್‌ ಟ್ಯಾಗ್‌ ಹೊಂದಿಲ್ಲದ ವಾಹನಕ್ಕೆ 360 ರೂ. ಹಾಗೂ ಮಾಸಿಕ ಪಾಸ್‌‍ಗೆ 5,945 ರೂ.

ಲಘು ವಾಹನಗಳು, ಮಿನಿ ಬಸ್‌‍ಗಳ ಏಕಮುಖ ಶುಲ್ಕ 290 ರೂ., ಎರಡು ಕಡೆ ಸಂಚಾರ 430 ರೂ., ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳಿಗೆ 580 ರೂ. ಹಾಗೂ ಮಾಸಿಕ ಪಾಸ್‌‍ 9,605 ರೂ.
ಟ್ರಕ್‌, ಬಸ್‌‍, 2 ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ 605 ರೂ., ಎರಡು ಕಡೆ ಸಂಚಾರಕ್ಕೆ 905 ರೂ., ಫಾಸ್ಟ್‌ಟ್ಯಾಗ್‌ ಹೊಂದಿಲ್ಲದ ವಾಹನಕ್ಕೆ 1,219 ರೂ. ಹಾಗೂ ಮಾಸಿಕ ಪಾಸ್‌‍ 20,130 ರೂ.

3 ಆಕ್ಸೆಲ್‌ ವಾಣಿಜ್ಯ ವಾಹನಗಳ ಏಕಮುಖ ಸಂಚಾರಕ್ಕೆ 660 ರೂ., ಎರಡು ಕಡೆ ಸಂಚಾರಕ್ಕೆ 990 ರೂ., ಫಾಸ್ಟ್‌ ಟ್ಯಾಗ್‌ ಇಲ್ಲದ ವಾಹನಕ್ಕೆ 1,320 ರೂ. ಹಾಗೂ ಮಾಸಿಕ ಪಾಸ್‌‍ 21,960 ರೂ.

ಭಾರಿ ವಾಹನಗಳ ಏಕಮುಖ ಸಂಚಾರಕ್ಕೆ 945 ರೂ., ಎರಡೂ ಕಡೆ ಸಂಚಾರಕ್ಕೆ 1,420 ರೂ., ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಕ್ಕೆ 1,890 ರೂ. ಹಾಗೂ ಮಾಸಿಕ ಪಾಸ್‌‍ 31,565 ರೂ.
7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ 1,145 ರೂ., ಎರಡೂ ಕಡೆ ಸಂಚಾರಕ್ಕೆ 1,730 ರೂ., ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಕ್ಕೆ 2,290 ರೂ, ಮಾಸಿಕ ಪಾಸ್‌‍ 38,430 ರೂ. ನಿಗದಿಪಡಿಸಲಾಗಿದೆ. ಸ್ಥಳೀಯ ವಾಹನಗಳಿಗೆ ಮಾಸಿಕ ಪಾಸ್‌‍ 350 ರೂ.ನಿಗದಿಯಾಗಿದೆ.

RELATED ARTICLES

Latest News