ಬೆಂಗಳೂರು, ಜ.3-ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನೀಡಲಾಗುವ 2024ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಪ್ರಕಟಿಸಲಾಗಿದೆ. ಈ ಸಂಜೆ ಪತ್ರಿಕೆಯ ಹಿರಿಯ ವರದಿಗಾರರಾದ ಎ.ಉಮೇಶ್, ರಮೇಶ್ ಎಂ. ಸೇರಿದಂತೆ 50 ಮಂದಿ ಹಿರಿಯ ಪತ್ರಕರ್ತರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಿರಿಯ ಪತ್ರಕರ್ತರಾದ ಜಾಣಗೆರೆ ವೆಂಕಟರಾಮಯ್ಯ, ಇಂದೂಧರ ಹೊನ್ನಾಪುರ, ಸುಭಾಶ್ ಕೆವಿನ್ ರೈ, ಜಿ.ಎಸ್.ಕೃಷ್ಣಮೂರ್ತಿ, ಡಾ.ನಾಗೇಶ್ ಬಸವರಾಜು ಅವರಿಗೆ ಪ್ರೆಸ್‌ಕ್ಲಬ್ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಲು ಆಯ್ಕೆ ಮಾಡಲಾಗಿದೆ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ ಮತ್ತು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ತಿಳಿಸಿದ್ದಾರೆ.
ಈ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಗೆ ರಾಜ್ಯ ಕೈಗಾರಿಕೆ ವಲಯಕ್ಕೆ ನೀಡುತ್ತಿರುವ ಉತ್ತೇಜನವನ್ನು ಪರಿಗಣಿಸಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜ.12ರಂದು ಸಂಜೆ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಉದಯ ಕುಮಾರ್.ಎನ್., ಸಾಂಬಸದಾಶಿವರೆಡ್ಡಿ .ಆರ್.ಪಿ., ತ್ಯಾಗರಾಜ್ ಟಿ.ಕೆ., ಲೋಕೇಶ್ ಕಾಯರ್ಗ, ಸೋಮಶೇಖರ್ ಕೆ.ಎಸ್., ಆಲ್ಫೋನ್‌್ಸ .ವಿ.ರಾಜ್, ನಾಗೇಶ್ ಪ್ರಭು, ಜಿ.ಆರ್.ಎನ್. ಸೋಮಶೇಖರ್, ಆಲ್ಫ್ರೆಡ್ ಟೆನ್ನಿಸನ್, ಡಿ., ಎಂಪಿ. ಸುಶೀಲಾ, ಪಂಕಜ. ಕೆ.ಬಿ., ರಮೇಶ್ ಬಾಬು. ಬಿ., ರಾಘವನ್. ಟಿ., ಶಿವರಾಮ, ರಾಜೇಶ್ ರೈ ಚಟ್ಲ, ವಿನೋದ್ ಕುಮಾರ್.ಬಿ.ನಾಯಕ್, ಮನುಜಾ ವೀರಪ್ಪ, ರಘುನಾಥ್. ಸಿ.ಹೆಚ್., ಪ್ರಕಾಶ್ ಸಿ., ಶ್ರೀಕಾಂತ್ ಹುಣಸವಾಡಿ, ಜಗದೀಶ್ ಬೆಳ್ಳಿಯಪ್ಪ, ಗಣೇಶ್. ಕೆ.ಎಸ್., ಸತೀಶ್. ಎಸ್., ಜಯಶ್ರೀ. ಸಿ.ಬಿ., ಸಿದ್ದಪ್ಪ ಕಾಳೋಜಿ ಅವರನ್ನು ಆಯ್ಕೆ ಮಾಡಲಾಗಿದೆ.
ಸಿದ್ದೇಗೌಡ. ಎನ್., ಶ್ರೀಕಾಂತ. ಎಂ., ಯತಿರಾಜು, ಪುಣ್ಯವತಿ.ಹೆಚ್.ಪಿ., ಜಗನ್ನಾಥ್. ಕೆ.ಎಸ್., ದೇವಿಪ್ರಸಾದ್ ರೈ. ಕೆ.ಎಚ್., ದಯಾಶಂಕರ ಮೈಲಿ, ಮೊಹಮದ್ ಇಸಾಯಿಲ್ ಎನ್.ಎ., ರಾಜು ಮಳವಳ್ಳಿ. ಎಸ್., ಕಾಂತರಾಜೇ ಅರಸ್, ಅನಿಸ್ ನಿಸಾರ್ ಅಹದ್, ಉಮೇಶ.ಎ., ಕೆಂಚೇಗೌಡ, ರಮೇಶ್ ಸಿ.ಜಿ., ಲಕ್ಷ್ಮೀ ಪ್ರಸನ್ನ. ಆರ್.ಎಚ್., ಶಿವಕುಮಾರ್.ಕೆ., ರಮೇಶ್ ಎಂ.(ಪಾಳ್ಯ), ಎಂ.ಆರ್.ಸುರೇಶ್, ಶಿವಕುಮಾರ್ ಮೆಣಸಿನಕಾಯಿ, ಸುಂದರ ಕೆ., ಸತೀಶ್ ಕುಮಾರ್. ಎಂ., ಗಂಗಾಧರ್. ಜಿ.ಎಸ್., ಹರಿಪ್ರಸಾದ್, ಶೈಲೇಂದ್ರ ಬೋಜಕ್ ಹಾಗೂ ಜಯಪ್ರಕಾಶ್ ಆರ್.ಎಚ್. ಅವರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.