Saturday, August 9, 2025
Homeಬೆಂಗಳೂರುಬೆಂಗಳೂರು : ಸ್ನೇಹಿತರಿಂದಲೇ ರೌಡಿಶೀಟರ್‌ ಕೊಲೆ

ಬೆಂಗಳೂರು : ಸ್ನೇಹಿತರಿಂದಲೇ ರೌಡಿಶೀಟರ್‌ ಕೊಲೆ

Bangalore: Rowdy-sheeter murdered by friends

ಬೆಂಗಳೂರು,ಆ.9-ಸ್ನೇಹಿತರುಗಳ ನಡುವೆ ಗಲಾಟೆ ನಡೆದು ರೌಡಿಶೀಟರ್‌ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.ಚಿಕ್ಕಬಾಣವಾರದ ನಿವಾಸಿ ಪ್ರತಾಪ್‌ (29) ಕೊಲೆಯಾದ ರೌಡಿ. ಈತ ಗಂಗಮಗುಡಿ ಪೊಲೀಸ್‌‍ ಠಾಣೆಯ ರೌಡಿಶೀಟರ್‌.

ತಡರಾತ್ರಿ 12.30 ರ ಸುಮಾರಿನಲ್ಲಿ ಪ್ರತಾಪ್‌ ಸ್ನೇಹಿತರೊಂದಿಗೆ ಮಾರುತಿನಗರದ ಬಾರ್‌ವೊಂದಕ್ಕೆ ಹೋಗಿ ಮದ್ಯಪಾನ ಮಾಡಿದ್ದಾನೆ.ನಂತರ ಹೊರಬಂದು ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ ಅವರುಗಳ ಮಧ್ಯೆಯೇ ಯಾವುದೋ ವಿಚಾರಕ್ಕೆ ಗಲಾಟೆಯಾಗಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

ಆ ವೇಳೆ ಜಗಳ ವಿಕೋಪಕ್ಕೆ ತಿರುಗಿದ್ದು, ಜೊತೆಯಲ್ಲಿದ್ದ ಸ್ನೇಹಿತನೇ ಚಾಕುವಿನಿಂದ ಪ್ರತಾಪನಿಗೆ ಇರಿದಿದ್ದಾನೆ.ತೀವ್ರರಕ್ತಸ್ರಾವದಿಂದ ಗಂಭೀರ ಗಾಯಗೊಂಡಿದ್ದ ಪ್ರತಾಪ್‌ನನ್ನು ಸಪ್ತಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿ ತಿಳಿದು ಸೋಲದೇವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮೂವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News