Sunday, June 23, 2024
Homeರಾಜ್ಯಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನಾಳೆ ಗೌರವ ಡಾಕ್ಟರೇಟ್ ಪ್ರದಾನ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನಾಳೆ ಗೌರವ ಡಾಕ್ಟರೇಟ್ ಪ್ರದಾನ

ಬೆಂಗಳೂರು,ಅ.16-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಇಸ್ರೋ ಅಧ್ಯಕ್ಷ ಹಾಗೂ ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಸೋಮನಾಥ್.ಎಸ್ ಅವರಿಗೆ ಬೆಂಗಳೂರು ವಿವಿಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ. ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವವು ನಾಳೆ ಬೆಳಗ್ಗೆ 10.30ಕ್ಕೆ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದ್ದು, ಈ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.

ಘಟಿಕೋತ್ಸವದಲ್ಲಿ ಒಟ್ಟು 299 ಚಿನ್ನದ ಪದಕ ಹಾಗೂ 113 ನಗದು ಬಹುಮಾನಗಳನ್ನು ಒಟ್ಟು 193 ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ವಿವಿಯ ಕುಲಪತಿ ಪ್ರೊ.ಜಯಕರ.ಎಚ್.ಎಂ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

204 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪದವಿ ಪ್ರದಾನ ಮಾಡಲಿದ್ದು, ಚಿನ್ನದ ಪದಕಗಳನ್ನು 25 ಗ್ರಾಂ ಬೆಳ್ಳಿಯ ನಾಣ್ಯಕ್ಕೆ 18 ಕ್ಯಾರೆಟ್‍ನ 1.3 ಗ್ರಾಂ ಚಿನ್ನದ ಎಂಬೋಜ್ ಮಾಡಲಾಗಿದೆ. ಚಿನ್ನಪದಕ ವಿಜೇತ ವಿದ್ಯಾರ್ಥಿಗಳಿಗೆ ಈ ಪದಕಗಳನ್ನು ಈ ಬಾರಿ ನೀಡಲಾಗುವುದು ಎಂದರು.

ಘಟಿಕೋತ್ಸವದಲ್ಲಿ 28,881 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು, ಅವರಲ್ಲಿ 13,707 ವಿದ್ಯಾರ್ಥಿಗಳು ಹಾಗೂ 15,164 ವಿದ್ಯಾರ್ಥಿನಿಯರಿದ್ದಾರೆ ಎಂದು ಹೇಳಿದರು. ವಿಶ್ವವಿದ್ಯಾಲಯದ ಕುಲಾದಿಪತಿಗಳಾದ ರಾಜ್ಯಪಾಲ ಥಾವರ್‍ಚಂದ್ ಗೆಲ್ಹೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಉದ್ಯಮಿ ಘೆರಾದ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್ ಕಾಮತ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

ರಾಜ್ಯದ ಕರಾವಳಿ, ಒಳನಾಡಿನಲ್ಲಿ 2 ದಿನ ಮಳೆ ಸಾಧ್ಯತೆ

ವಿನೂತರಿಗೆ 8 ಚಿನ್ನದ ಪದಕ:
ಸ್ನಾತಕೋತ್ತರ ವಿಭಾಗದಲ್ಲಿ ಆಕ್ಸಫರ್ಡ್ ವಿಜ್ಞಾನ ಮತ್ತು ಕಲಾ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ವಿನೂತ.ಕೆ 8 ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನ ಪಡೆಯಲಿದ್ದಾರೆ. ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶ್ವೇತ ಉದಯಕುಮಾರ ಮುರಗೋಡ ಅವರು 8 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.

ಬೆಂಗಳೂರು ವಿವಿಯ ಭೌತಶಾಸ್ತ್ರ ವಿಭಾಗದ ಅಸೀನಬಾನು.ಡಬ್ಲ್ಯು, ಗಣಿತ ಶಾಸ್ತ್ರ ವಿಭಾಗದ ದಿವ್ಯಾ.ಟಿ.ಎಂ, ಪ್ರಾಣಿಶಾಸ್ತ್ರ ಶಾಸ್ತ್ರ ವಿಭಾಗದ ನರ್ಮತಾ.ಎ, ಸಂಸ್ಕøತ ಶಾಸ್ತ್ರ ವಿಭಾಗದ ಭವಿಷ್ಯ ತಲಾ ಆರು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸ್ನಾತಕ ವಿಭಾಗದಲ್ಲಿ ಎಎಸ್‍ಪಿ ಪದವಿ ಕಾಲೇಜಿನ ದೀಕ್ಷಿತ.ಆರ್ ನಾಯಕ್ ಹಾಗೂ ವಿಶ್ವಚೇತನ ಪದವಿ ಕಾಲೇಜಿನ ರವಿಕುಮಾರ.ಎಸ್.ಎಂ, ಯುವಿಸಿಯ ಮೆಕಾನಿಕಲ್ ಇಂಜಿನಿಯರ್ ವಿಭಾಗದ ಯೋಗೇಶ್ವರನ್ ಪಡೆದುಕೊಂಡಿದ್ದಾರೆ.

ಜಿಂದಾಲ್ ಮಹಿಳಾ ಕಾಲೇಜಿನ ಚೈತ್ರ.ಎಸ್, ಬೆಂಗಳೂರು ವಿವಿ ಗಣಿತ ಶಾಸ್ತ್ರ ವಿಭಾಗದ ದಿವ್ಯಾ.ಟಿ.ಎಂ, ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶ್ವೇತ ಉದಯಕುಮಾರ ಮುರಗೋಡ ಅವರು ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಈ ಬಾರಿ ಪದವಿ ಪ್ರಮಾಣಪತ್ರವನ್ನು ವಿದ್ಯಾರ್ಥಿಗಳು ಡಿಜಿ ಲಾಕರ್ ಮತ್ತು ಮ್ಯಾಡ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ವಿವಿಯು ಸಂಪೂರ್ಣ ಡಿಜಟಲೀಕರಣಗೊಂಡಿದ್ದು, ಪರೀಕ್ಷೆ ಮುಗಿದ ಒಂದು ವಾರದೊಳಗೆ ಫಲಿತಾಂಶ ನೀಡಿ ಸ್ನಾತಕೋತ್ತರ ಪ್ರವೇಶ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಕುಲಪತಿ ಹೇಳಿದರು. 26,056 ಪ್ರಥಮ ಶ್ರೇಣಿ, 4807 ಪ್ರಥರ್ಮ ದರ್ಜೆ, 874 ದ್ವಿತೀಯ ದರ್ಜೆ ಹಾಗೂ 137 ಪದವಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಇಸ್ರೇಲ್ ಪಡೆಗಳಿಗೆ ಅಂತಿಮ ಎಚ್ಚರಿಕೆ ನೀಡಿದ ಇರಾನ್

ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಶೇಖ್ ಲತೀಫ್, ಪ್ರೊ.ಸಿ.ಶ್ರೀನಿವಾಸ್ (ಮೌಲ್ಯಮಾಪನ), ವಿತ್ತಾಕಾರಿ ಡಾ.ಎಂ.ಸುನಿತ ಉಪಸ್ಥಿತರಿದ್ದರು.

RELATED ARTICLES

Latest News