Friday, July 19, 2024
Homeರಾಜ್ಯಜೆಡಿಎಸ್ ಸಮಾನಮನಸ್ಕರ ಸಭೆಯ ಬ್ಯಾನರ್‌ನಲ್ಲಿ ಹೆಚ್‌ಡಿಕೆ ಫೋಟೋಗೆ ಕೊಕ್

ಜೆಡಿಎಸ್ ಸಮಾನಮನಸ್ಕರ ಸಭೆಯ ಬ್ಯಾನರ್‌ನಲ್ಲಿ ಹೆಚ್‌ಡಿಕೆ ಫೋಟೋಗೆ ಕೊಕ್

ಬೆಂಗಳೂರು,ಅ.16- ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಪಟೇಲ್ ಪಾಲ್ಗೊಂಡಿದ್ದರು. ಮಹಿಮ ಪಾಟೀಲ್ ಪಾಲ್ಗೊಂಡಿರುವುದರಿಂದ ಇಬ್ರಾಹಿಂ ಮುಂದಿನ ನಡೆ ಏನು ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಬಿಜೆಪಿಯೊಂದಿಗಿನ ಮೈತ್ರಿಯ ಬಗ್ಗೆ ಅಸಮಾಧನ ವ್ಯಕ್ತಪಡಿಸಿ ಸಮಾನ ಮನಸ್ಕರ ಅಭಿಪ್ರಾಯ ಸಂಗ್ರಹಿಸಲು ಇಬ್ರಾಹಿಂ ಚಿಂತನ-ಮಂಥನ ಸಭೆ ಕರೆದಿದ್ದರು. ಸಭೆಯ ಬ್ಯಾನರ್‍ನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಸಿ.ಎಂ.ಇಬ್ರಾಹಿಂ ಫೋಟೋ ಮಾತ್ರ ಇತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬೇರೆ ಯಾವ ನಾಯಕರ ಫೋಟೋವು ಕೂಡ ಇರಲಿಲ್ಲ.

ಬಿಜೆಪಿ ಪ್ರತಿಭಟನೆಗಳನ್ನು ಜನ ನಂಬುವುದಿಲ್ಲ : ಸಿಎಂ ಸಿದ್ದರಾಮಯ್ಯ

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಯದ್ ಸಬಿವುಲ್ಲಾ ಸಾಹೇಬ್ ಸೇರಿದಂತೆ ಅಲ್ಪಸಂಖ್ಯಾತ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು. ಮಹಿಮ ಪಟೇಲ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ, ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಬಿಜೆಪಿಗೆ ಸೇರಿದ್ದರು. ಆಗ ಫರ್ನಾಂಡಿಸ್ ಅವರು ಪ್ರಧಾನಿಯಾಗಲಿದ್ದಾರೆ ಸಹಕಾರ ಕೊಡಿ ಎಂದು ನಮ್ಮ ತಂದೆ ಜೆ.ಎಚ್.ಪಟೇಲ್ ಅವರು ಸಮ್ಮತಿಸಿದ್ದರು ಎಂದರು.

ಸಿದ್ದಾಂತದ ಮೂಲಕ ಮತ ಯಾಚಿಸಬೇಕೇ ಹೊರತು ಹಣ, ಜಾತಿ ಆಧಾರದ ಮೇಲೆ ಕೇಳಿದರೆ ಅದು ದಂಧೆಯಾಗಲಿದೆ. ಈಗಾಗಲೇ ರಾಜಕಾರಣಿಗಳ ಬಗ್ಗೆ ಗೌರವ ಕಡಿಮೆಯಾಗಿದೆ. 2004ರಲ್ಲಿ ಜೆಡಿಎಸ್‍ನಿಂದ ಚೆನ್ನಗಿರಿ ಕ್ಷೇತ್ರದಿಂದ ಚುನಾಯಿತನಾಗಿದ್ದೆ. ಆಗ ಇಬ್ರಾಹಿಂ ಹಾಗೂ ಸಿದ್ದರಾಮಯ್ಯನವರು ನಾವು ಯಾರ ಜೊತೆಯೂ ಹೋಗುವುದಿಲ್ಲ ಎಂದಿದ್ದರು. ನಮ್ಮ ಅಭಿಪ್ರಾಯವನ್ನು ಯಾರೂ ಕೇಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಸ್ರೇಲ್ ಪಡೆಗಳಿಗೆ ಅಂತಿಮ ಎಚ್ಚರಿಕೆ ನೀಡಿದ ಇರಾನ್

ಅಮೆರಿಕ ಪ್ರವಾಸದಲ್ಲಿದ್ದಾಗ ದೇವೇಗೌಡರು ಫೋನ್ ಮಾಡಿ ಮಾನ ಮರ್ಯಾದೆ ಹೋಗಿದೆ ಎಂದರು. ಅಲ್ಲಿಂದ ಬರುವಷ್ಟರಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದರು.
ಹೊಸ ಹಾದಿಯ ಬಗ್ಗೆ ಇಬ್ರಾಹಿಂ ಹಾಗೂ ನಾಡಗೌಡರು ಯೋಚಿಸುತ್ತಿದ್ದಾರೆ. ಮತ್ತೆ ಜನತಾದಳದವರು ಸೇರುವ ಸಮಯ ಬಂದಿದೆ. ಇಬ್ರಾಹಿಂ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಮುಂದಿನ ವಿಧಾನಸಭೆ ಚುನಾವಣೆ ನೇತೃತ್ವವನ್ನು ಇಬ್ರಾಹಿಂ ಅವರೇ ವಹಿಸಬೇಕು ಎಂದರು.

RELATED ARTICLES

Latest News