Tuesday, February 11, 2025
Homeರಾಜ್ಯವಿದ್ಯುತ್ ದರ ಏರಿಕೆ ಕುರಿತು ಸ್ಪಷ್ಟನೆ ಕೊಟ್ಟ ಬೆಸ್ಕಾಂ

ವಿದ್ಯುತ್ ದರ ಏರಿಕೆ ಕುರಿತು ಸ್ಪಷ್ಟನೆ ಕೊಟ್ಟ ಬೆಸ್ಕಾಂ

ಬೆಂಗಳೂರು, ಅ.16- ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ದರದಲ್ಲಿ ಮೊದಲಿಗಿಂತಲೂ ಶೇ. 14 ಪೈಸೆಯಷ್ಟು ಕಡಿತವಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಈ ಮೊದಲು ಆಗಸ್ಟ್‍ನಲ್ಲಿ ಪ್ರತಿ ಯುನಿಟ್‍ಗೆ 1.15 ರೂಪಾಯಿ ವಿದ್ಯುತ್ ಮತ್ತು ಇಂಧನ ಖರೀದಿ ಹೊಂದಾಣಿಕೆ ವೆಚ್ಚ ನಿಗದಿಯಾಗಿತ್ತು. ಸೆಪ್ಟೆಂಬರ್‍ನಲ್ಲಿ ಅದನ್ನು ಕೆಇಆರ್‌ಸಿ ಪರಿಷ್ಕರಣೆ ಮಾಡಿದ್ದು, 14 ಪೈಸೆ ಕಡಿಮೆ ಮಾಡಿದೆ. ಹೀಗಾಗಿ ಪ್ರತಿ ಯುನಿಟ್‍ಗೆ ಪ್ರಸ್ತುತ 1.1 ಪೈಸೆ ನಿಗದಿಯಾಗಿದೆ. ಇದರ ಲಾಭವನ್ನು ಬೆಸ್ಕಾಂಗಳು ಗ್ರಾಹಕರಿಗೆ ತಲುಪಿಸುತ್ತಿವೆ.

ಪ್ರತಿಯೊಂದು ಬಿಲ್‍ನಲ್ಲೂ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ದರದ ಮೇಲೆ ಶುಲ್ಕ ನಿಗದಿಯಾಗುತ್ತದೆ. ಇದನ್ನು ಗ್ರಾಹಕರಿಂದಲೇ ಸಂಗ್ರಹಿಸಬೇಕೆಂಬುದು ಕೇಂದ್ರ ಸರ್ಕಾರದ ಅಧಿಸೂಚನೆಯಾಗಿದೆ.
ಇತ್ತೀಚೆಗೆ ಕಲ್ಲಿದ್ದಲ ಸಾಗಾಣಿಕೆ ಹಾಗೂ ಇತರ ವೆಚ್ಚಗಳು ತಗ್ಗಿದ್ದರಿಂದಾಗಿ ವಿದ್ಯುತ್ ಖರೀದಿ ದರ ಕಡಿಮೆಯಾಗಿದೆ. ಇದನ್ನು ಪರಿಗಣಿಸಿರುವ ಕೆಇಆರ್‍ಸಿ ಹೊಂದಾಣಿಕೆ ದರವನ್ನೂ ಕಡಿಮೆಗೊಳಿಸುವಂತೆ ಆದೇಶಸಿದೆ.

ಬಿಜೆಪಿ ಪ್ರತಿಭಟನೆಗಳನ್ನು ಜನ ನಂಬುವುದಿಲ್ಲ : ಸಿಎಂ ಸಿದ್ದರಾಮಯ್ಯ

ಇದರ ಲಾಭ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಯಾವುದೇ ರೀತಿಯ ವಿದ್ಯುತ್ ಶುಲ್ಕ ಏರಿಕೆಯಾಗಿಲ್ಲ ಎಂದು ಬೆಸ್ಕಾಂ ಮೂಲಗಳು ಸ್ಪಷ್ಟಪಡಿಸಿವೆ. ಪ್ರತಿ ಮೂರು ತಿಂಗಳಿಗೊಮ್ಮೆ ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ಶುಲ್ಕ ಪರಿಷ್ಕರಣೆಯಾಗುತ್ತದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿಗದಿಯಾಗಿರುವ 1.1 ರೂ.ಗಳ ದರ ಮುಂದಿನ ಜನವರಿಯ ವೇಳೆ ಮತ್ತೊಮ್ಮೆ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

RELATED ARTICLES

Latest News