Thursday, May 16, 2024
Homeರಾಜಕೀಯಬಿಜೆಪಿ ಪ್ರತಿಭಟನೆಗಳನ್ನು ಜನ ನಂಬುವುದಿಲ್ಲ : ಸಿಎಂ ಸಿದ್ದರಾಮಯ್ಯ

ಬಿಜೆಪಿ ಪ್ರತಿಭಟನೆಗಳನ್ನು ಜನ ನಂಬುವುದಿಲ್ಲ : ಸಿಎಂ ಸಿದ್ದರಾಮಯ್ಯ

ಮೈಸೂರು, ಅ.16- ಆದಾಯ ತೆರಿಗೆ ದಾಳಿಗೂ, ನಮ್ಮ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜಕೀಯ ಪ್ರೇರಿತ ಹೇಳಿಕೆಗಳು, ಆರೋಪಗಳು, ಪ್ರತಿಭಟನೆಗಳನ್ನು ಜನ ನಂಬುವುದಿಲ್ಲ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆದಾಯ ತೆರಿಗೆ ದಾಳಿಯನ್ನು ನೆಪ ಮಾಡಿಕೊಂಡು ಬಿಜೆಪಿಯವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಯಾರದೋ ಮನೆಯಲ್ಲಿ ಹಣ ಸಿಕ್ಕರೆ ಅದನ್ನು ರಾಜಕೀಯಕ್ಕೆ ಸಂಪರ್ಕಿಸುವುದು ಉಚಿತವಲ್ಲ ಎಂದರು.

ಗುತ್ತಿಗೆದಾರರಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯವರು ಎಂಬ ವರ್ಗಗಳಿರುವುದಿಲ್ಲ. ಆದಾಯ ತೆರಿಗೆ ದಾಳಿಗೊಳಗಾದವರನ್ನು ಕಾಂಗ್ರೆಸ್ ಗುತ್ತಿಗೆದಾರರು ಎಂದು ಬಿಜೆಪಿಯವರು ಹೇಳುವುದಾದರೆ, ನಾನು ಅವರನ್ನು ಬಿಜೆಪಿಯ ಗುತ್ತಿಗೆದಾರರು ಎಂದು ಹೇಳುತ್ತೇನೆ, ಅದನ್ನು ಒಪ್ಪುತ್ತಾರಾ ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿಯ ದಾಳಿಗಳು ನಡೆಯುತ್ತಿವೆ. ಬಿಜೆಪಿಯವರು ಇದನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಜನರಿಗೆ ಎಲ್ಲವೂ ಅರ್ಥವಾಗುತ್ತಿದೆ ಎಂದರು.

ಆದಾಯ ತೆರಿಗೆ ದಾಳಿ ಮಾಡಿದ ಅಕಾರಿಗಳೇ ತನಿಖೆ ಮಾಡುತ್ತಾರೆ. ರಾಜ್ಯಸರ್ಕಾರ ಅದರಲ್ಲಿ ಪ್ರತ್ಯೇಕವಾಗಿ ತನಿಖೆ ಮಾಡುವುದೇನಿದೆ. ಜೆಡಿಎಸ್, ಬಿಜೆಪಿಯವರ ಆಗ್ರಹಗಳಿಗೆ ಏನಾದರೂ ಅರ್ಥವಿದೆಯೇ. ಬಿಜೆಪಿ ಹೇಳಿದಾಕ್ಷಣಕ್ಕೆ ತನಿಖೆ ಮಾಡಬೇಕೆ. ಆದಾಯ ತೆರಿಗೆ ತನಿಖೆ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ತಲಾ ಒಂದು ಸಾವಿರ ಕೋಟಿ ರೂ. ಸಂಗ್ರಹ ಮಾಡಲು ಕಾಂಗ್ರೆಸ್ ಹೈಕಮಾಂಡ್ ಗುರಿ ನೀಡಲಾಗಿದೆ ಎಂದು ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಇದು ಎಲ್ಲಾದರೂ ಸಾಧ್ಯವೇ, ಸಾವಿರ ಕೋಟಿ ರೂ. ಕೊಡಿ ಎಂದು ಹೈಕಮಾಂಡ್ ಕೇಳುತ್ತದೆಯೇ, ಸಿ.ಟಿ.ರವಿ ಬರೀ ಸುಳ್ಳು ಹೇಳುತ್ತಲೇ ರಾಜಕಾರಣ ಮಾಡುತ್ತಾರೆ. ಹೈಕಮಾಂಡ್ ಈವರೆಗೂ ನಮಗೆ 5 ಪೈಸೆಯನ್ನೂ ಕೊಡಿ ಎಂದು ಕೇಳಿಲ್ಲ.

ಬಿಜೆಪಿ ಆರೋಪ ಆಧಾರರಹಿತ. ಈ ಹಿಂದೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಾಗ ನಾವು ಯಾರ ಬಳಿಯೂ ದುಡ್ಡು ಕೇಳುವುದಿಲ್ಲ. ಹಾಗೆ ಪಂಚರಾಜ್ಯಗಳ ಚುನಾವಣೆಯಲ್ಲೂ ಯಾರೂ ನಮ್ಮ ಬಳಿ ದುಡ್ಡು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

2 ಸಾವಿರ ಮೆಗಾವ್ಯಾಟ್ ಕೊರತೆ :
ಐದು ವರ್ಷ ಆಡಳಿತ ನಡೆಸಿದ ಜೆಡಿಎಸ್, ಬಿಜೆಪಿ ಸರ್ಕಾರಗಳು ಒಂದೇ ಒಂದು ಯುನಿಟ್ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಿರಲಿಲ್ಲ. ಈ ಹಿಂದೆ ನಮ್ಮ ಸರ್ಕಾರ ಮಾಡಿದಂತಹ ಯೋಜನೆಗಳಷ್ಟೇ ಉಳಿದಿವೆ. ಇತ್ತೀಚೆಗೆ ಬರ ಹಾಗೂ ಮಳೆ ಕೊರತೆಯಿಂದ ವಿದ್ಯುತ್ ಬೇಡಿಕೆ ತೀವ್ರವಾಗಿದೆ. ಹಿಂದೆಲ್ಲಾ 10 ಸಾವಿರ ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗುತ್ತಿತ್ತು. ಈಗ ಅದು 16 ಸಾವಿರ ಮೆಗಾವ್ಯಾಟ್‍ಗೆ ಹೆಚ್ಚಾಗಿದೆ. ಏಕಾಏಕಿ 6 ಸಾವಿರ ಮೆಗಾವ್ಯಾಟ್ ಹೆಚ್ಚಾಗಿದ್ದುದ್ದರಿಂದ ಸಮಸ್ಯೆ ತೀವ್ರವಾಗಿದೆ ಎಂದರು.

ಕಾಂಗ್ರೆಸ್ ಕೇವಲ ‘ಲೂಟಿ ಗ್ಯಾರಂಟಿ’ ಮಾತ್ರ ನೀಡಬಲ್ಲದು : ನಡ್ಡಾ

ತಾವು ಇತ್ತೀಚೆಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ರೈತರಿಗೆ ಐದು ಗಂಟೆ ತ್ರಿಫೇಸ್‍ನಲ್ಲಿ ವಿದ್ಯುತ್ ಪೂರೈಸುವಂತೆ ಸೂಚಿಸಿದ್ದೇನೆ. ಕೊರತೆ ಇರುವ ವಿದ್ಯುತ್ ಅನ್ನು ಬೇರೆ ಕಡೆಯಿಂದ ಖರೀದಿಸಿ ಪಾಳಿ ಆಧಾರದ ಮೇಲೆ ವಿದ್ಯುತ್ ಪೂರೈಕೆ ಮಾಡಿ ಎಂದು ತಾಕೀತು ಮಾಡಿರುವುದಾಗಿ ತಿಳಿಸಿದರು.

ಕಬ್ಬು ಅರೆಯುವಿಕೆ ಆರಂಭವಾದರೆ ಉಪ ಉತ್ಪಾದನೆಯಾಗಿ ವಿದ್ಯುತ್ ಲಭ್ಯವಾಗುತ್ತದೆ. ಅದನ್ನು ರಾಜ್ಯದಲ್ಲಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಸಂಕಷ್ಟದ ಪರಿಸ್ಥಿತಿ ರೈತರಿಗೆ ಗೊತ್ತಿದೆ. ಕನಿಷ್ಟ 4 ಗಂಟೆ ವಿದ್ಯುತ್ ಪೂರೈಸಿದರೂ ಒಪ್ಪಿಕೊಳ್ಳುತ್ತಾರೆ. ನಾವು 5 ಗಂಟೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಸುಮಾರು 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆಯಿದೆ ಎಂದರು.

ಗೃಹಲಕ್ಷ್ಮಿ ಯೋಜನೆಯ 2 ನೇ ಕಂತು ಬಿಡುಗಡೆಯಾಗಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾಹಿತಿ. ಬಿಜೆಪಿಯವರು ಹೇಳಿದ್ದಕ್ಕೆಲ್ಲಾ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ 216 ತಾಲೂಕುಗಳಲ್ಲಿ ಬರ ಘೋಷಣೆಯಾಗಿದೆ. ಸದ್ಯಕ್ಕೆ ಮೇವಿನ ಕೊರತೆಯಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗದಂತೆ ಮೇವು ಪೂರೈಕೆಗೆ ಬೆಂಬಲ ನೀಡಲಾಗುತ್ತಿದೆ. 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, 32 ಸಾವಿರ ಕೋಟಿ ರೂ. ನಷ್ಟವಾಗಿದೆ. ಕೇಂದ್ರ ಸರ್ಕಾರಕ್ಕೆ 4,800 ಕೋಟಿ ರೂ. ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿರುವ ಕಡೆ ಪೈಪ್‍ಲೈನ್ ಅಳವಡಿಸುವುದು, ಹೊಸ ಬೋರೆವೆಲ್ ಕೊರೆಯುವುದು, ಖಾಸಗಿ ಬೋರೆವೆಲ್‍ಗಳನ್ನು ಬಳಸಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳ ಮೂಲಕ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮೇವು, ಜನರಿಗೆ ಉದ್ಯೋಗಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಸ್ಲಾಮಿಕ್ ರಾಷ್ಟ್ರಗಳ ವಿರುದ್ಧ ಹರಿಹಾಯ್ದ ನಿಕ್ಕಿ ಹ್ಯಾಲೆ

ಚಾಮುಂಡಿ ಬೆಟ್ಟಕ್ಕೆ ಶಾಶ್ವತವಾದ ದೀಪಾಲಂಕಾರ ಮಾಡುವಂತೆ ದಸರಾ ಉದ್ಘಾಟಕರಾದ ಹಂಸಲೇಖನವರು ನೀಡಿರುವ ಮನವಿಯನ್ನು ಪರಿಶೀಲಿಸುವುದಾಗಿ ತಿಳಿಸಿದರು.

RELATED ARTICLES

Latest News