Sunday, July 7, 2024
Homeಬೆಂಗಳೂರುಬೆಂಗಳೂರಿನ ಕಸ ವಿಲೇವಾರಿಗೆ ರಚನೆಯಾಯ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ

ಬೆಂಗಳೂರಿನ ಕಸ ವಿಲೇವಾರಿಗೆ ರಚನೆಯಾಯ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ

ಬೆಂಗಳೂರು,ಮೇ.24- ನಗರದ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮನಸು ಮಾಡಿದೆ. ಹೀಗಾಗಿ ನಗರದ ಕಸ ವಿಲೇವಾರಿ ಹೊಣೆಯನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತಕ್ಕೆ ವಹಿಸಲು ತೀರ್ಮಾನಿಸಿದೆ.

ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಂಸ್ಥೆ ಜೂ.1ರಿಂದಲೇ ನಗರದಲ್ಲಿ ಕಸ ವಿಲೇವಾರಿ ಕಾರ್ಯವನ್ನು ಆರಂಭಿಸಲಿದೆ ಎಂದು ತಿಳಿದುಬಂದಿದೆ.

ಇನ್ನೂ ಮುಂದೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯೇ ನಗರದಲ್ಲಿ ಕಸ ಸಂಗ್ರಹಣೆ, ಸಾಗಾಣಿಕೆ ಹಾಗೂ ವಿಲೇವಾರಿ ಕಾರ್ಯ ನಡೆಸಲಿದೆ. ಜೂನ್‌ 1 ರಿಂದ ಮನೆ..ಮನೆಯಿಂದ ಅಟೋದಲ್ಲಿ ಕಸ ಸಂಗ್ರಹಣೆಯನ್ನು ಸಂಸ್ಥೆಯೇ ಮಾಡಲಿದೆ.

ಸಂಗ್ರಹಣೆ ಮಾಡಿದ ಕಸವನ್ನು ಟೆಪ್ಪರ್‌ ಲಾರಿಗಳ ಮೂಲಕ ಕಸದ ಸಂಸ್ಕರಣಾ ಘಟಕ ಅಥವಾ ಕ್ಯಾರಿ ಗಳಿಗೆ ಸಾಗಾಣಿಕೆ ಮಾಡಲಾಗುವುದು. ಬಿಬಿಎಂಪಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರೋ ಅಟೋ. ಟಿಪ್ಪರ್‌ ..ಕಾಂಪ್ಯಾಕ್ಟರ್‌, ಚಾಲಕರು ಹಾಗೂ ಸಹಾಯಕರು ಕಂಪನಿ ವ್ಯಾಪ್ತಿಗೆ ಒಳಪಡಲಿದ್ದಾರೆ.

ಇನ್ನೂ ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರೋ ಅಧಿಕಾರಿಗಳು. ವಾರ್ಡ್‌ ಮಟ್ಟದ ಇಂಜಿನಿಯರ್‌ ಗಳು, ಸಿಬ್ಬಂದಿಗಳು ಹಾಗೂ ಮಾರ್ಷಲ್‌ ಗಳು ಕಂಪನಿ ಅಧೀನದಲ್ಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ಗಾರ್ಬೇಜ್‌ ಸಿಟಿ ಕಳಂಕ ಕಳಚಲು ರಾಜ್ಯ ಸರ್ಕಾರ ಈ ಮಾಸ್ಟರ್‌ ಪ್ಲಾನ್‌ ಮಾಡಿರುವುದರಿಂದ ಇನ್ನು ಮುಂದೆ ಬಿಬಿಎಂಪಿಯವರಿಗೆ ಕಸದ ಸಮಸ್ಯೆ ಕಾಡುವುದಿಲ್ಲ.

ಸಂಸ್ಥೆಯಡಿ ಕಾರ್ಯ ನಿರ್ವಹಿಸುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳ ವೇತನ ಕಂಪನಿಯಿಂದಲೇ ಪಾವತಿ ಮಾಡಲಾಗುವುದು. ಇನ್ನೂ ನಗರದಲ್ಲಿ ಇರೋ 7 ಕಸ ಸಂಸ್ಕರಣಾ ಘಟಕಗಳು ಕಂಪನಿ ವ್ಯಾಪ್ತಿಗೆ ಬರಲಿವೆ. ಕಂಪನಿ ನಿರ್ವಹಣೆಗೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಪ್ರತಿ ವರ್ಷಅನುದಾನ ನೀಡಲಿದೆಯಂತೆ.

ಆದರೆ, ಪೌರ ಕಾರ್ಮಿಕರು, ಗುತ್ತಿಗೆ ಪೌರಕಾರ್ಮಿಕರು ಮಾತ್ರ ಬಿಬಿಎಂಪಿ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದ್ದು, ಅವರಿಗೆ ಪಾಲಿಕೆ ವತಿಯಿಂದಲೇ ವೇತನ ಪಾವತಿ ಮಾಡಲಾಗುವುದು.ಇನ್ನೂ.. ಘನತ್ಯಾಜ್ಯ ಇಲಾಖೆಯನ್ನು ಅರೋಗ್ಯ ಇಲಾಖೆ ಜೊತೆ ವಿಲೀನ ಮಾಡಿ ಅರೋಗ್ಯ ಮತ್ತು ನೈರ್ಮಲ್ಯ ಶಾಖೆ ಅಂತ ಮಾರ್ಪಾಡು ಮಾಡಲಾಗಿದೆ.

RELATED ARTICLES

Latest News