ಇಸ್ಲಾಮಾಬಾದ್,ಅ. 5 (ಪಿಟಿಐ)– ಬಾಂಗ್ಲಾ ದೇಶದ ಮಾದರಿಯಲ್ಲೇ ಪಾಕಿಸ್ತಾನದಲ್ಲೂ ಜನರು ದಂಗೆ ಏಳುವ ಸಾಧ್ಯತೆಗಳು ಹೆಚ್ಚಾಗಿವೆ. ಭ್ರಷ್ಟಾಚಾರದ ಆರೋಪದಲ್ಲಿ ಜೈಲಿನಲ್ಲಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲು ತೀರ್ಮಾನಿಸಿರುವುದರಿಂದ ಪಾಕಿಸ್ತಾನದಾದ್ಯಂತ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ಸಂವಿಧಾನದ 245 ನೇ ವಿಧಿಯ ಅಡಿಯಲ್ಲಿ ಸಜ್ಜುಗೊಳಿಸಲಾಗಿದ್ದು, ಮುಂಬರುವ ಶಾಂಘೈ ಸಹಕಾರ ಸಂಸ್ಥೆ ಶಂಗಸಭೆಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೈನ್ಯವು ಇಂದಿನಿಂದ ಅ.17 ರವರೆಗೆ ನಗರದಲ್ಲಿ ಉಳಿಯುತ್ತದೆ. ಪಾಕಿಸ್ತಾನವು ಅಕ್ಟೋಬರ್ 15 ಮತ್ತು 16 ರಂದು ಈ ಶಂಗಸಭೆಯನ್ನು ಆಯೋಜಿಸುತ್ತಿದೆ.
ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಬೆಂಬಲಿಗರು, ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ನೇತತ್ವದಲ್ಲಿ ಪ್ರತಿಭಟನೆಯನ್ನು ನಡೆಸಲು ಇಲ್ಲಿನ ಡಿ-ಚೌಕ್ ತಲುಪಲು ಮುಂದಾದ ಕಾರಣ ಸೇನೆ ನಿಯೋಜನೆಯಾಗಿದೆ.
ಪಿಟಿಐ ತನ್ನ ಸಂಸ್ಥಾಪಕ ಖಾನ್ ಬಿಡುಗಡೆಗಾಗಿ ಪ್ರತಿಭಟನೆ ನಡೆಸುತ್ತಿದ್ದು, ನ್ಯಾಯಾಂಗಕ್ಕೆ ಒಗ್ಗಟ್ಟು ವ್ಯಕ್ತಪಡಿಸುತ್ತಿದೆ. 72ರ ಹರೆಯದ ಮಾಜಿ ಕ್ರಿಕೆಟಿಗ-ರಾಜಕಾರಣಿಯಾಗಿರುವ ಖಾನ್ ಸರ್ಕಾರದ ಕರೆಗಳ ಹೊರತಾಗಿಯೂ ಪ್ರತಿಭಟನೆಯನ್ನು ಮುಂದೂಡಲು ನಿರಾಕರಿಸಿರುವುದರಿಂದ ಪರಿಸ್ಥಿತಿ ಬಿಗಾಡಯಿಸುವ ಸಾಧ್ಯತೆಗಳಿವೆ.
ರಾಜಧಾನಿಯಲ್ಲಿ ನಡೆಯುತ್ತಿರುವ ಪಿಟಿಐ ಪ್ರತಿಭಟನೆಯನ್ನು ಎದುರಿಸಲು ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿಯ ಮಾಹಿತಿ ಸಲಹೆಗಾರ ಮುಹಮದ್ ಅಲಿ ಸೈಫ್ ಜಿಯೋ ನ್ಯೂಸ್‌ಗೆ ತಿಳಿಸಿದ್ದಾರೆ. ಮುಂಬರುವ ಶಾಂಘೈ ಶಂಗಸಭೆಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸೇನೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಅವರು ಹೇಳಿದರು. ನಾವು ಪಾಕಿಸ್ತಾನ ಸೇನೆಯನ್ನು ಗೌರವಿಸುತ್ತೇವೆ ಎಂದ ಅವರು, ಸೇನೆಯೊಂದಿಗೆ ಪಕ್ಷಕ್ಕೆ ಯಾವುದೇ ಸಂಘರ್ಷವಿಲ್ಲ ಎಂದು ಪ್ರತಿಪಾದಿಸಿದರು.
ಏತನಧ್ಯೆ, ಶುಕ್ರವಾರ ಖೈಬರ್ ಪಖ್ತುಂಖ್ವಾದ ಸ್ವಾಬಿ ಪ್ರದೇಶದಿಂದ ಪ್ರಯಾಣ ಆರಂಭಿಸಿದ ಗಂಡಾಪುರ ನೇತತ್ವದ ಪ್ರತಿಭಟನಾ ರ್ಯಾಲಿ ಮಧ್ಯರಾತ್ರಿಯ ಹೊತ್ತಿಗೆ ಪಂಜಾಬ್‌ನ ಅಟಾಕ್ ಪ್ರದೇಶದ ಬುಹ್ರಾನ್‌ಗೆ ತಲುಪಿತು.ಸೈಫ್ ಪ್ರಕಾರ, ಗಂಡಾಪುರ ರಾತ್ರಿ ಉಳಿಯುತ್ತದೆ ಮತ್ತು ಅವರ ಬೆಂಗಾವಲು ಶನಿವಾರ ಡಿ-ಚೌಕ್‌ಗೆ ಪ್ರಯಾಣವನ್ನು ಪುನರಾರಂಭಿಸುತ್ತದೆ ಏನೇ ಪರಿಸ್ಥಿತಿ ಎದುರಾದರೂ ನಾವು ಅದನ್ನು ಎದುರಿಸಲು ಸಿದ್ದ ಎಂದು ಅವರು ಘೋಷಿಸಿದ್ದಾರೆ.