Friday, December 20, 2024
Homeಅಂತಾರಾಷ್ಟ್ರೀಯ | Internationalನೋಟುಗಳಲ್ಲಿರುವ ಮುಜಿಬುರ್‌ ರೆಹಮಾನ್‌ ಫೋಟೋ ತೆರವಿಗೆ ಮುಂದಾದ ಬಾಂಗ್ಲಾ

ನೋಟುಗಳಲ್ಲಿರುವ ಮುಜಿಬುರ್‌ ರೆಹಮಾನ್‌ ಫೋಟೋ ತೆರವಿಗೆ ಮುಂದಾದ ಬಾಂಗ್ಲಾ

Bangladesh to remove Sheikh Mujibur Rahman's image from currency

ಢಾಕಾ,ಡಿ.6- ಶೇಖ್‌ ಹಸೀನಾ ಅವರನ್ನು ಪ್ರಧಾನ ಮಂತ್ರಿಯಾಗಿ ಪದಚ್ಯುತಗೊಳಿಸಿದ ತಿಂಗಳ ನಂತರ, ಬಾಂಗ್ಲಾದೇಶವು ತನ್ನ ಕರೆನ್ಸಿ ನೋಟುಗಳ ಮೇಲಿರುವ ಅವರ ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಫೋಟೋ ತೆರವುಗೊಳಿಸುವ ಕಾರ್ಯಕ್ಕೆ ಕೈ ಹಾಕಿದೆ.

ರೆಹಮಾನ್‌ ಅವರ ಭಾವಚಿತ್ರ ತೆರವುಗೊಳಿಸಿ ಬಾಂಗ್ಲಾದೇಶ ಬ್ಯಾಂಕ್‌ ಜುಲೈ ದಂಗೆಯ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಹೊಸ ನೋಟುಗಳನ್ನು ಮುದ್ರಿಸುತ್ತಿದೆ ಎಂದು ಢಾಕಾ ಟ್ರಿಬ್ಯೂನ್‌ ಸಂಸ್ಥೆ ವರದಿ ಮಾಡಿದೆ.

ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಯ ನಂತರ ಹಸೀನಾ ಅವರು ಭಾರತಕ್ಕೆ ಪಲಾಯನ ಮಾಡಿದ ನಂತರ ನೊಬೆಲ್‌ ಪ್ರಶಸ್ತಿ ವಿಜೇತ ಮುಹಮದ್‌ ಯೂನಸ್‌‍ ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕೇಂದ್ರೀಯ ಬ್ಯಾಂಕ್‌ ಪ್ರಕಾರ, ಮಧ್ಯಂತರ ಸರ್ಕಾರದ ಸೂಚನೆಗಳ ಮೇರೆಗೆ ಟಕಾ 20, 100, 500 ಮತ್ತು 1,000 ರ ನೋಟುಗಳನ್ನು ಮುದ್ರಿಸಲಾಗುತ್ತಿದೆ.ಹೊಸ ನೋಟುಗಳು ಬಂಗಬಂಧು ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಚಿತ್ರವನ್ನು ಒಳಗೊಂಡಿರುವುದಿಲ್ಲ ಎಂದು ಬ್ಯಾಂಕ್‌ ಅನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಧಾರ್ಮಿಕ ರಚನೆಗಳು, ಬಂಗಾಳಿ ಸಂಪ್ರದಾಯಗಳು ಮತ್ತು ಜುಲೈ ದಂಗೆಯ ಸಮಯದಲ್ಲಿ ಚಿತ್ರಿಸಿದ ಗೀಚುಬರಹ ಒಳಗೊಂಡಿರುತ್ತವೆ ಎಂದು ಅದು ಹೇಳಿದೆ.

ಮುಂದಿನ ಆರು ತಿಂಗಳೊಳಗೆ ಹೊಸ ನೋಟು ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂದು ನಾನು ಭಾವಿಸುತ್ತೇನೆ ಎಂದು ಬಾಂಗ್ಲಾದೇಶ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕ ಹುಸ್ನೇರಾ ಶಿಖಾ ಹೇಳಿದ್ದಾರೆ.

RELATED ARTICLES

Latest News