Tuesday, November 18, 2025
Homeಅಂತಾರಾಷ್ಟ್ರೀಯ | Internationalಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಮರಣದಂಡನೆ ಶಿಕ್ಷೆ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಮರಣದಂಡನೆ ಶಿಕ್ಷೆ

Bangladesh tribunal to deliver verdict against Sheikh Hasina

ಡಾಕಾ,ನ.17-ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಮತ್ತು ಮಾಜಿ ಗೃಹ ಸಚಿವ ಅಸಾದುಜ್ಜಮಾನ್‌ ಖಾನ್‌ ಕಮಲ್‌ ಅವರಿಗೆ ಮರಣದಂಡನೆ ವಿಧಿಸಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳ ನೇತೃತ್ವದ ಹಿಂಸಾಚಾರ ಪ್ರತಿಭಟನೆಯ ಸಂದರ್ಭದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದು ಇದು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಹೇಳಿದೆ. ಇದಲ್ಲದೆ ಮಾಜಿ ಪೊಲೀಸ್‌‍ ಮುಖ್ಯಸ್ಥ ಚೌಧರಿ ಅಬ್ದುಲ್ಲಾ ಅಲ್‌‍-ಮಾಮುನ್‌ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಭಾವನಾತ್ಮಕ ಸಂದೇಶ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರು ತಮ ಪಕ್ಷದ ಬೆಂಬಲಿಗರಿಗೆ ಭಯಪಡಬೇಡಿ, ನಾನು ಜೀವಂತವಾಗಿದ್ದೇನೆ, ನಾನು ನಿಮೊಂದಿಗೆ ನಿಲ್ಲುತ್ತೇನೆ ಎಂದು ಭಾವನಾತಾಕ ಸಂದೇಶ ರವಾನಿಸಿದ್ದಾರೆ.

ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಹಸೀನಾ ಅವರ ವಿಚಾರಣೆ ಪೂರ್ಣಗೊಂಡಿದ್ದು, ಇಂದು ತೀರ್ಪು ಪ್ರಕಟವಾಗಲಿದೆ. ಅದಕ್ಕೂ ಮುನ್ನ ದೇಶದಲ್ಲಿ ಮತ್ತೆ ಹಿಂಸಾಚಾರಗಳು ಭುಗಿಲೆದ್ದಿವೆ. ಈ ಕಾರಣದಿಂದಾಗಿ ಬಾಂಗ್ಲಾದೇಶದಾದ್ಯಂತ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಕಳೆದ ವರ್ಷ ತಮ್ಮ ದೇಶದಿಂದ ಪಲಾಯನ ಮಾಡಿ ಭಾರತದಲ್ಲಿ ತಲೆಮರೆಸಿಕೊಂಡಿರುವ ಹಸೀನಾ ಅವರು ತಮ ವಿರುದ್ಧ ನ್ಯಾಯಾಲಯದ ತೀರ್ಪು ಬರುವ ಕೆಲವು ಗಂಟೆಗಳ ಮೊದಲು, ಅವರು ಅವಾಮಿ ಲೀಗ್‌ನ ಫೇಸ್‌‍ಬುಕ್‌ ಪುಟದಲ್ಲಿ ಭಾವನಾತ್ಮಕ ಆಡಿಯೋ ಸಂದೇಶವನ್ನು ಪೋಸ್ಟ್‌ ಮಾಡಿದ್ದಾರೆ.

ಅವರು ತಮ್ಮ ಪಕ್ಷದ ಬೆಂಬಲಿಗರಿಗೆ, ಭಯಪಡಬೇಡಿ ಏನೂ ಇಲ್ಲ, ನಾನು ಜೀವಂತವಾಗಿದ್ದೇನೆ, ನಾನು ಜೀವಂತವಾಗಿರುತ್ತೇನೆ. ನಾನು ದೇಶದ ಜನರೊಂದಿಗೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಹಿಂಸಾಚಾರ ಮತ್ತು ಅಸ್ಥಿರತೆ ತೀವ್ರಗೊಂಡಿದೆ. ರಾಜಧಾನಿ ಢಾಕಾ ಸೇರಿದಂತೆ ಹಲವಾರು ನಗರಗಳಲ್ಲಿ ಸ್ಫೋಟಗಳು ಮತ್ತು ಬೆಂಕಿ ಹಚ್ಚುವಿಕೆಗಳು ಸಂಭವಿಸಿವೆ. ಇದು ವಿಶೇಷವಾಗಿ ಢಾಕಾದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಅಂತಾರಾಷ್ಟ್ರೀಯ ಕ್ರಿಮಿನಲ್‌ ನ್ಯಾಯಮಂಡಳಿ (ಐಸಿಟಿ) ಶೇಖ್‌ ಹಸೀನಾ ಪ್ರಕರಣದ ತೀರ್ಪು ನೀಡಲು ಸಿದ್ಧವಾಗುತ್ತಿದ್ದಂತೆ ಈ ಬೆಳವಣಿಗೆ ಸಂಭವಿಸಿದೆ. ಕಳೆದ ವರ್ಷದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಅವರ ಪಾತ್ರಕ್ಕಾಗಿ ಅವರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ.ಅಪರಾಧ ಸಾಬೀತಾದರೆ, ಅವರು ಮರಣದಂಡನೆಯನ್ನು ಎದುರಿಸಬೇಕಾಗುತ್ತದೆ.

ತೀರ್ಪಿಗೆ ಮುಂಚಿತವಾಗಿ, ಮೊಹಮ್ಮದ್‌ ಯೂನಸ್‌‍ ಸರ್ಕಾರವು ದೇಶಾದ್ಯಂತ ಭದ್ರತಾ ಪಡೆಗಳನ್ನು ಕಟ್ಟೆಚ್ಚರದಲ್ಲಿರಿಸಿದೆ, ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಆದೇಶಗಳನ್ನು ನೀಡಿದೆ. ಕಳೆದ ಜುಲೈನಲ್ಲಿ ಢಾಕಾದಲ್ಲಿ ನಡೆದ ಅಶಾಂತಿಯ ಸಂದರ್ಭದಲ್ಲಿ ಯಾರ ಮೇಲೂ ಗುಂಡು ಹಾರಿಸಲು ಅಥವಾ ಕೊಲ್ಲಲು ತಾನು ಆದೇಶಿಸಿಲ್ಲ ಎಂದು ಶೇಖ್‌ ಹಸೀನಾ ನಿರಂತರವಾಗಿ ಸಮರ್ಥಿಸಿಕೊಂಡಿದ್ದಾರೆ.

ಬದಲಾಗಿ, ಹಿಂಸಾಚಾರವನ್ನು ಯೂನಸ್‌‍ಗೆ ನಿಷ್ಠರಾಗಿರುವ ಭದ್ರತಾ ಪಡೆಗಳು ಆಯೋಜಿಸಿದ್ದವು. ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ಇತರ ನಗರಗಳು ಕಳೆದ ಕೆಲವು ದಿನಗಳಿಂದ ಸರಣಿ ಬಾಂಬ್‌ ಸ್ಫೋಟಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚುವಿಕೆಯಿಂದ ನಲುಗಿಹೋಗಿವೆ. ಮಧ್ಯಂತರ ಸರ್ಕಾರಿ ಸಲಹೆಗಾರರಾದ ಸೈದಾ ರಿಜ್ವಾನಾ ಹಸನ್‌ ಅವರ ನಿವಾಸದ ಹೊರಗೆ ತಡರಾತ್ರಿ ಎರಡು ಬಾಂಬ್‌ಗಳು ಸ್ಫೋಟಗೊಂಡಿವೆ. ಕ್ಯಾರವಾನ್‌ ಬಜಾರ್‌ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ಢಾಕಾದಲ್ಲಿ, ಪೊಲೀಸ್‌‍ ಠಾಣೆಯ ಕಾಂಪೌಂಡ್‌ ಮತ್ತು ಕಸ ಸುರಿಯುವ ಸ್ಥಳದಲ್ಲಿ ನಿಲ್ಲಿಸಿದ್ದ ಬಸ್‌‍ಗಳಿಗೆ ಬೆಂಕಿ ಹಚ್ಚಲಾಯಿತು. ಹಿಂಸಾತ್ಮಕ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವಂತೆ ಮೆಟ್ರೋಪಾಲಿಟನ್‌ ಪೊಲೀಸ್‌‍ ಆಯುಕ್ತ ಎಸ್‌‍ಎಂ ಸಜತ್‌ ಅಲಿ ಭದ್ರತಾ ಪಡೆಗಳಿಗೆ ಆದೇಶಿಸಿದ್ದಾರೆ. ಹಿಂಸಾಚಾರ ಮತ್ತು ಪೊಲೀಸರ ನಿಲುವು ಹಸೀನಾ ವಿರುದ್ಧದ ತೀರ್ಪು ದೇಶದಲ್ಲಿ ರಾಜಕೀಯ ಅಶಾಂತಿಯನ್ನು ಹೆಚ್ಚಿಸಬಹುದು ಎಂಬ ಕಳವಳವನ್ನು ಹುಟ್ಟುಹಾಕಿದೆ.

RELATED ARTICLES

Latest News