ವಾಷಿಂಗ್ಟನ್,ಡಿ.30- ಬಾಂಗ್ಲಾದೇಶದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವು ಇಸ್ಲಾಮಿಸ್ಟ್ ದುಷ್ಟಶಕ್ತಿಗಳಿಂದ ನಡೆಯುತ್ತಿದೆ ಎಂದು ಬಣ್ಣಿಸಿರುವ ಬಾಂಗ್ಲಾದೇಶಿ ಅಮೆರಿಕನ್ ಹಿಂದೂಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರ ಒಕ್ಕೂಟವು ಕೂಡಲೆ ನೂತನ ಅಧ್ಯಕ್ಷರಾಗಿತ್ತಿರುವ ಡೊನಾಲ್ಡ್ ಟ್ರಂಪ್ ಮದ್ಯಪ್ರವೇಶಿಸಿ ರಕ್ಷಿಸಬೇಕೆಂದುಒತ್ತಾಯಿಸಿದೆ.
ದೇಶದ್ರೋಹದ ಆರೋಪದ ಮೇಲೆ ತಪ್ಪಾಗಿ ಆನೇಕರನ್ನು ಜೈಲಿನಲ್ಲಿಡಲಾಗಿದೆ ಎಂದು ಹೇಳಿದ ಚಿನೋಯ್ ಕೃಷ್ಣ ದಾಸ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸುವಂತೆ ಟ್ರಂಪ್‌ಗೆ ಒತ್ತಾಯಿಸಿದ್ದಾರೆ.
ದುಷ್ಟ ಗುಂಪುಗಳಿಂದ ಬಾಂಗ್ಲಾದೇಶ ಮೂಲಭೂತೀಕರಣಕ್ಕೆ ಇಳಿಯುವ ಅಪಾಯವನ್ನು ಹೊಂದಿದೆ, ಇದು ದಕ್ಷಿಣ ಏಷ್ಯಾಕ್ಕೆ ಮಾತ್ರವಲ್ಲದೆ ಪ್ರಪಂಚದ ಉಳಿದ ಭಾಗಗಳು ಸಹ. ದೇಶಕ್ಕೂ ದೂರಗಾಮಿ ಪರಿಣಾಮಗಳನ್ನು ಬೀರಬಹುದು ಎಂದು ಹೇಳಿದ್ದಾರೆ.
ಇಸ್ಕಾನ್‌ನ ಮಾಜಿ ನಾಯಕ ದಾಸ್ ಅವರನ್ನು ಕಳೆದ ನ.25 ರಂದು ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತ. ಚಟ್ಟೋಗ್ರಾಮ್‌ನ ನ್ಯಾಯಾಲಯವು ಅವರನ್ನು ಜೈಲಿಗೆ ಕಳುಹಿಸಿತು, ದೇಶದ ಧ್ವಜವನ್ನು ಅಗೌರವಿಸಿದ ಆರೋಪದ ಮೇಲೆ ದೇಶದ್ರೋಹದ ಆರೋಪದ ಮೇಲೆ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಪ್ರಕರಣದ ವಿಚಾರಣೆಯು ಜನವರಿ 2 ರಂದು ನಡೆಯಲಿದೆ.
ಟ್ರಂಪ್‌ಗೆ ನೀಡಿದ ಜ್ಞಾಪಕ ಪತ್ರದಲ್ಲಿ, ಆಂತರಿಕ ಜನಾಂಗೀಯ ಮತ್ತು ಧಾರ್ಮಿಕ ಕಿರುಕುಳವನ್ನು ನಿಲ್ಲಿಸಲು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯನ್ನು
ಬಾಂಗ್ಲಾದೇಶಕ್ಕೆ ಕಳುಹಿಸಬೇಕು ಇದಕ್ಕೆ ಅನುಮತಿ ನೀಡಬೇಕು ಎಂದು ಸಲಹೆ ನೀಡಿಲಾಗಿದೆ
ಸಮಗ್ರ ಅಲ್ಪಸಂಖ್ಯಾತರ ಸಂರಕ್ಷಣಾ ಕಾಯ್ದೆ,ಸುರಕ್ಷಿತ ಪ್ರದೇಶ ಸ್ಥಾಪನೆ, ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮತದಾನ ಮತ್ತು ದ್ವೇಷದ ಅಪರಾಧಗಳು ಮತ್ತು ದ್ವೇಷದ ಭಾಷಣಗಳ ವಿರುದ್ಧ ಕಾನೂನುಗಳು ಮತ್ತು ಧಾರ್ಮಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಪ್ರಮುಖ ಶಿಫಾರಸುಗಳು ಸೇರಿವೆ.