ಮೈಸೂರು, ಫೆ16- ಕೇವಲ 1 ಗಂಟೆ ಅವಧಿಯಲ್ಲಿ ಎರಡು ಖಾತೆಗಳಿಂದ ಖದೀಮರು 19.30 ಲಕ್ಷ ಲಪಟಾಯಿಸಿ ವಂಚಿಸಿರುವ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶ್ರೀರಾಂಪುರ ನಿವಾಸಿ ಫಾರ್ಮಾಕ್ಯೂಟಿಕಲ್ಸ್ ಒಂದರಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದ ಮುರುಗೇಶ್ ಎಂಬುವರ ಖಾತೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ.
ಐಸಿಐಸಿಐ ಬ್ಯಾಂಕ್ ನಲ್ಲಿ ಹೊಂದಿದ್ದ ಒಂದು ಖಾತೆಯಿಂದ 17 ಲಕ್ಷ ಮತ್ತೊಂದು ಖಾತೆಯಿಂದ 2.30 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿದ್ದ ಮುರುಗೇಶ್ ರವರ ಖಾತೆ ವಿವರವನ್ನು ಹ್ಯಾಕ್ ಮಾಡಿರಬಹುದೆಂದು ಶಂಕಿಸಲಾಗಿದೆ.
ಕೇವಲ ಒಂದೇ ಗಂಟೆ ಅವಧಿಯಲ್ಲಿ ಖಾತೆಯಲ್ಲಿದ್ದ ಹಣ ಮಾಯವಾಗಿದೆ. ಹಣ ಕಳೆದುಕೊಂಡ ಮುರುಗೇಶ್ ಮೈಸೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.