Friday, September 20, 2024
Homeಅಂತಾರಾಷ್ಟ್ರೀಯ | Internationalನ್ಯೂಯಾರ್ಕ್‌ನಲ್ಲಿ BAPS ಸ್ವಾಮಿನಾರಾಯಣ ದೇಗುಲದ ಮೇಲೆ ದಾಳಿ : ಹಿಂದೂಗಳ ವ್ಯಾಪಕ ಆಕ್ರೋಶ

ನ್ಯೂಯಾರ್ಕ್‌ನಲ್ಲಿ BAPS ಸ್ವಾಮಿನಾರಾಯಣ ದೇಗುಲದ ಮೇಲೆ ದಾಳಿ : ಹಿಂದೂಗಳ ವ್ಯಾಪಕ ಆಕ್ರೋಶ

BAPS Swaminarayan Temple vandalised in New York

ನ್ಯೂಯಾರ್ಕ್‌(ಯುಎಸ್‌‍), ಸೆ.17- ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ BAPS ಸ್ವಾಮಿ ನಾರಾಯಣ ದೇಗುಲದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಭಾರತೀಯ ಕಾನ್ಸುಲೇಟ್‌ ಜನರಲ್‌ ಘಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ ಬಾಪ್ಸ್ ಸ್ವಾಮಿ ನಾರಾಯಣ ದೇಗುಲದ ಮೇಲಿನ ದಾಳಿ ಒಪ್ಪುವಂಥದ್ದಲ್ಲ. ಕಾನ್ಸುಲೇಟ್‌ ಕಚೇರಿ ಹಿಂದೂ ಸಮುದಾಯದ ಜೊತೆ ಸಂಪರ್ಕ ದಲ್ಲಿದೆ.

ಈ ವಿಷಯವನ್ನು ಯುಎಸ್‌‍ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇಂಥ ಹೇಯ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ಎಕ್‌್ಸನಲ್ಲಿ ಮಾಹಿತಿ ನೀಡಿದೆ. ಅಮೆರಿಕನ್‌ ಹಿಂದೂ ಫೌಂಡೇಷನ್‌ ದೇಗುಲದ ಮೇಲಿನ ದಾಳಿ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಯುಎಸ್‌‍ ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದೆ.

ಈ ವಾರಾಂತ್ಯದಲ್ಲಿ ಮೆಲ್ವಿಲ್ಲೆ ಸಮೀಪದ ನಾಸ್ಸೌ ಕೌಂಟಿಯಲ್ಲಿ ಹಿಂದೂ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಸೇರುವ ಕಾರ್ಯಕ್ರಮ ಇರುವುದರಿಂದ ಹಿಂದೂ ಸಂಸ್ಥೆಗಳ ಮೇಲೆ ದಾಳಿ ಬೆದರಿಕೆ ಆತಂಕ ವ್ಯಕ್ತವಾಗಿತ್ತು ಎಂದು ತಿಳಿಸಿದೆ.ಇದರ ಜೊತೆಗೆ ಖಲಿಸ್ತಾನಿ ಉಗ್ರ ಗುರು ಪತ್ವಂತ್‌ ಸಿಂಗ್‌ ಪನ್ನು ಇತ್ತೀಚೆಗೆ ವಿಡಿಯೋ ಮೂಲಕ ಹಿಂದೂಗಳು ಮತ್ತು ಹಿಂದೂ ಸಂಸ್ಥೆಗಳ ಮೇಲೆ ಬೆದರಿಕ ಹಾಕಿದ್ದ ಎಂದು ಹೇಳಿದೆ.

ನ್ಯೂಯಾರ್ಕ್‌ನಲ್ಲಿರುವ ದೇಗುಲದ ಮೇಲೆ ನಡೆದ ದಾಳಿಯು ಈ ಹಿಂದೆ ಕ್ಯಾಲಿಫೋರ್ನಿಯಾ ಮತ್ತು ಕೆನಡಾದಲ್ಲಿ ನಡೆದ ದಾಳಿಗಳೊಂದಿಗೆ ಸಾಮ್ಯತೆ ಹೊಂದಿದೆ ಎಂದು ತಿಳಿಸಿದೆ.ಕಳೆದ ಜುಲೈನಲ್ಲಿ ಕೆನಡಾದ ಎಡಾಂಟನ್‌ನಲ್ಲಿರುವ ಬಾಪ್‌್ಸ ಸ್ವಾಮಿ ನಾರಾಯಣ ಮಂದಿರದ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದು, ಭಾರತೀಯ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಅಮೆರಿಕದಲ್ಲಿ ದಾಳಿ ಮರುಕಳಿಸಿದೆ.

ಇದೇ ವರ್ಷ ಜನವರಿಯಲ್ಲಿ ಕ್ಯಾಲಿಫೋರ್ನಿ ಯಾದಲ್ಲಿರುವ ವಿಜಯ್‌ ಶೆರವಾಲಿ ದೇವಸ್ಥಾನದ ಮೇಲೆ ಸೆ್ಪ್ರೕ ಪೇಟಿಂಗ್‌ ಮಾಡಿದ್ದ ಖಲಿಸ್ತಾನ್‌ ಹೋರಾಟಗಾರರು ಭಾರತದ ವಿರುದ್ಧ ಅವಹೇಳನಕಾರಿ ವಾಕ್ಯಗಳನ್ನು ಬರೆದಿದ್ದರು. ಅಲ್ಲದೆ ಖಾಲಿಸ್ತಾನ್‌ ಜಿಂದಾಬಾದ್‌, ಮೋದಿ ಈಸ್‌‍ ಎ ಟೆರರಿಸ್ಟ್‌ ಎಂಬಿತ್ಯಾದಿ ವಾಕ್ಯಗಳನ್ನೂ ಬರೆಯಲಾಗಿತ್ತು.2023ರ ಡಿಸೆಂಬರ್‌ 22ರಂದು ಕ್ಯಾಲಿಫೋರ್ನಿ ಯಾದಲ್ಲಿರುವ ಸ್ವಾಮಿ ನಾರಾಯಣ್‌ ವಾಸನಾ ಸಂಸ್ಥಾ ದೇವಸ್ಥಾನದ ಮೇಲೆಯೂ ಭಾರತ ವಿರೋಧಿ ವಾಕ್ಯಗಳನ್ನು ಬರೆಯಲಾಗಿತ್ತು.

RELATED ARTICLES

Latest News