ಬೆಂಗಳೂರು, ಮಾ.22– ಬಾರ್‌ವೊಳಗೆ ನುಗ್ಗಿ ಇಬ್ಬರ ಮೇಲೆ ಬೀರುಬಾಟಲಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿ ಮೂವರು ರೌಡಿಗಳು ಪರಾರಿಯಾಗಿರುವ ಘಟನೆ ಮಹಾಲಕ್ಷ್ಮಿಲೇಔಟ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡಿರುವ ಮಂಜುನಾಥ ನಗರದ ನಿವಾಸಿಗಳಾದ ವಂಶಿಕೃಷ್ಣ ಹಾಗೂ ಪವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಸ್ವತಿಪುರ ಮುಖ್ಯ ರಸ್ತೆಯಲ್ಲಿರುವ ಸ್ಫೂರ್ತಿ ಬಾರ್‌ಗೆ ಈ ಇಬ್ಬರು ಸ್ನೇಹಿತರು ಹೋಗಿದ್ದು,
ರಾತ್ರಿ 11.15 ರ ಸುಮಾರಿಗೆ ಮದ್ಯಸೇವಿಸುತ್ತಾ ಯಾರಿಗೋ ಮೊಬೈಲ್ ಕರೆಮಾಡಿ ಧಮ್ಕಿ ಹಾಗಿದ್ದಾರೆ.ಮೊಬೈಲ್ ಕರೆ ಸ್ಥಗಿತಗೊಳಿಸಿದ ಕೆಲವೇ ನಿಮಿಷಗಳಲ್ಲಿ ಮೂವರು ರೌಡಿಗಳು ಬಾರ್‌ವೊಳಗೆ ನುಗ್ಗಿ ಅವರಿಬ್ಬರ ಮೇಲೆ ಬೀರು ಬಾಟಲಿಯಿಂದ ಹಲ್ಲೆನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿರುವ ಅವರಿಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಬಾರ್ ಸಿಬ್ಬಂದಿಗಳಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ಸಿಸಿ ಟಿವಿ ದೃಶ್ಯವಳಿ ಆಧರಿಸಿ ರೌಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.