Sunday, July 7, 2024
Homeರಾಜ್ಯಸಿಎಂ ಮಾಡಿ ಎಂದು ಹೇಳುವುದು ಮಠಾಧೀಶರ ಕೆಲಸವಲ್ಲ : ಬಸವ ಜಯಮೃತ್ಯುಂಜಯ ಸ್ವಾಮೀಜಿ

ಸಿಎಂ ಮಾಡಿ ಎಂದು ಹೇಳುವುದು ಮಠಾಧೀಶರ ಕೆಲಸವಲ್ಲ : ಬಸವ ಜಯಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ,ಜು.4- ಯಾವುದೇ ಸರ್ಕಾರದಲ್ಲಿ ಇವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಹೇಳುವುದು ಮಠಾಧೀಶರ ಕೆಲಸವಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮುಖ್ಯಮಂತ್ರಿ ಮಾಡುವುದು ಆಡಳಿತ ಪಕ್ಷದ ಶಾಸಕರ ಕೆಲಸ, ಸಲಹೆ ಕೇಳಿದರೆ ಸಮಾಜದ ಗುರುಗಳಾಗಿ ಸಲಹೆ ಕೊಡಬೇಕು, ಮೀಸಲಾತಿ ಪಾದಯಾತ್ರೆಯ ನಂತರ ಇವರನ್ನೇ ಮಂತ್ರಿ ಮಾಡಿ ಎಂದು ಹೇಳುವುದನ್ನು ಬಿಟ್ಟಿದ್ದೇವೆ. ನಮ ಗುರಿಯೇನಿದ್ದರೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸುವುದು ಎಂದರು.

ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಹೋರಾಟದಿಂದ ಸ್ಫೂರ್ತಿ ಪಡೆದು ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಪಂಚಮಸಾಲಿ ಸಮಾಜದ ಬೇಡಿಕೆಗೆ ಸ್ಪಂದಿಸಿ ಮೀಸಲಾತಿ ಕೊಡುತ್ತದೆ ಎನ್ನುವ ಭರವಸೆ ಇದೆ ಎಂದರು.

ರಾಜ್ಯ ಸರ್ಕಾರ ಮಳೆಗಾಲದ ಅಧಿವೇಶನದಲ್ಲಿ 2 ಎ ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸಿದ ಅವರು, ಅಧಿವೇಶನದಲ್ಲಿ ಮೀಸಲಾತಿ ಹಕ್ಕು ಪ್ರತಿಪಾದಿಸಲು ಪಂಚಮಸಾಲಿ ಸಮಾಜದ ಶಾಸಕರನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

ಜುಲೈ 6ರಂದು ಹುಬ್ಬಳ್ಳಿಯಲ್ಲಿ ಪತ್ರ ಚಳವಳಿ ನಡೆಯಲಿದ್ದು, ಶಾಸಕ ಎಮ್‌‍.ಆರ್‌. ಪಾಟೀಲ್‌‍, ಅರವಿಂದ ಬೆಲ್ಲದ್‌ ಮನೆಗೆ ಹೋಗಿ ಆಗ್ರಹ ಪತ್ರ ನೀಡಲಾಗುವುದು. ನಮ ಶಾಸಕರು ಅಧಿವೇಶನದಲ್ಲಿ ಮೀಸಲಾತಿಗೆ ಆಗ್ರಹಿಸದೆ ಇರುವುದು ಸಮಾಜಕ್ಕೆ ನಿರಾಸೆ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

RELATED ARTICLES

Latest News