Wednesday, April 30, 2025
Homeರಾಜ್ಯಸಮಾಜ ಪರಿವರ್ತನೆಯ ಇತಿಹಾಸ ಬರೆದ ಬಸವಣ್ಣ : ಸಿಎಂ ಸಿದ್ದರಾಮಯ್ಯ

ಸಮಾಜ ಪರಿವರ್ತನೆಯ ಇತಿಹಾಸ ಬರೆದ ಬಸವಣ್ಣ : ಸಿಎಂ ಸಿದ್ದರಾಮಯ್ಯ

Basavanna wrote the history of social transformation: CM Siddaramaiah

ಬೆಂಗಳೂರು, ಏ.30– ಬಸವಣ್ಣ ಸಾಮಾಜಿಕ ಕ್ರಾಂತಿ ಮಾಡಿದ್ದಷ್ಟೇ ಅಲ್ಲ, ಸಾಮಾಜಿಕ ಪರಿವರ್ತನೆಗೆ ಇತಿಹಾಸದಲ್ಲೇ ಶಾಶ್ವತವಾಗಿ ಉಳಿಯುವ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಬಸವ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಬಸವಣ್ಣ ವಿಶ್ವ ಗುರುಗಳು, ಅವರನ್ನು ಸಾಮಾಜಿಕ ಕ್ರಾಂತಿ ಮಾಡಿದರೂ ಎಂದು ಸೀಮಿತಗೊಳಿಸಬಾರದು. ಸಮಾಜದ ಪರಿವರ್ತನೆಗೆ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಕೆಲಸವನ್ನು ಬಸವಣ್ಣ ತಮ ಜೀವಿತ ಅವಧಿಯಲ್ಲಿ ಮಾಡಿದ್ದಾರೆ. ಅವರನ್ನು ನೆನೆಯುವುದು ಭಾರತದ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಎಂದರು.

ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಅವರ ಜಯಂತಿಯ ಸಂದರ್ಭದಲ್ಲಿ ನಾಡಿನ ಜನರಿಗೆ ಶುಭ ಹಾರೈಸುವುದಾಗಿ ಹೇಳಿದರು. ಸಚಿವ ಎಂ.ಬಿ.ಪಾಟೀಲ್‌, ಮಾಜಿ ಸಚಿವೆ ಲೀಲಾದೇವಿ ಆರ್‌ ಪ್ರಸಾದ್‌, ಬಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News