Saturday, August 2, 2025
Homeರಾಷ್ಟ್ರೀಯ | Nationalರಾಹುಲ್‌ ಗಾಂಧಿ ಆರೋಪಗಳು ಆಧಾರ ರಹಿತ : ಚುನಾವಣಾ ಆಯೋಗ

ರಾಹುಲ್‌ ಗಾಂಧಿ ಆರೋಪಗಳು ಆಧಾರ ರಹಿತ : ಚುನಾವಣಾ ಆಯೋಗ

'Baseless': ECI Rejects 'Voter Fraud' Claims By Rahul Gandhi

ನವದೆಹಲಿ, ಆ.1- ಬಿಜೆಪಿಗೆ ಮತ ಕಳ್ಳತನದಲ್ಲಿ ತೊಡಗಿದೆ ಎಂದು ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಮಾಡಿದ ಆರೋಪಗಳು ಆಧಾರರಹಿತ ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ನಿರ್ಲಕ್ಷಿಸುವಂತೆ ತನ್ನ ಅಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.

ಚುನಾವಣಾ ಆಯೋಗದ ವಿರುದ್ದ ಮುಚ್ಚಿದ ಪುರಾವೆಗಳಿವೆ ಎಂದು ರಾಹುಲ್‌ ಗಾಂಧಿ ಸರಣಿ ಹೇಳಿಕೆ ಮುಂದುವರೆಸುತ್ತಿರುವ ಹಿನ್ನಲೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಆಯೋಗ ಮರೆಮಾಡಲು ಯಾವುದೇ ಸ್ಥಳವಿಲ್ಲ ಎಂದು ಹೇಳಿದೆ.

ಚುನಾವಣಾ ಆಯೋಗದ ವಿರುದ್ದ ಪ್ರತಿದಿನವೂ ಮಾಡಲಾಗುತ್ತಿರುವ ಇಂತಹ ಆಧಾರರಹಿತ ಆರೋಪಗಳನ್ನು ನಿರ್ಲಕ್ಷಿಸುತ್ತದೆ ಮತ್ತು ದೈನಂದಿನ ಬೆದರಿಕೆಗಳನ್ನು ನೀಡಲಾಗುತ್ತಿದ್ದರೂ, ಎಲ್ಲಾ ಚುನಾವಣಾ ಅಧಿಕಾರಿಗಳು ಅಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನಿರ್ಲಕ್ಷಿಸಿ ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ಕೆಲಸ ಮಾಡುವಂತೆ ಹೇಳಿದೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಗಾಂಧಿ, ತಮ ಪಕ್ಷವು ಆಪಾದಿತ ಚುನಾವಣಾ ಅಕ್ರಮಗಳ ಕುರಿತು ಹೊಂದಿರುವ ಪುರಾವೆಗಳನ್ನು ಆಣು ಬಾಂಬ್‌‍ ಗೆ ಹೋಲಿಸಿದ್ದಾರೆ ಮತ್ತು ಅದು ಸ್ಫೋಟಗೊಂಡಾಗ ಚುನಾವಣಾ ಆಯೋಗಕ್ಕೆ ದೇಶದಲ್ಲಿ ಅಡಗಿಕೊಳ್ಳಲು ಯಾವುದೇ ಸ್ಥಳವಿರುವುದಿಲ್ಲ ಎಂದು ಹೇಳಿದರು.

RELATED ARTICLES

Latest News