Friday, November 22, 2024
Homeಬೆಂಗಳೂರುಬಸವನಗುಡಿ ವಾರ್ಡ್ ಹೆಸರು ಬದಲಾವಣೆಗೆ ಮುಂದುವರೆದ ವಿರೋಧ

ಬಸವನಗುಡಿ ವಾರ್ಡ್ ಹೆಸರು ಬದಲಾವಣೆಗೆ ಮುಂದುವರೆದ ವಿರೋಧ

ಬೆಂಗಳೂರು,ಅ.30-ಬಿಬಿಎಂಪಿ ವ್ಯಾಪ್ತಿಯ ವಾರ್ಡ್‍ಗಳ ಹೆಸರು ಬದಲಾವಣೆಗೆ ವ್ಯಕ್ತವಾಗುತ್ತಿರುವ ವಿರೋಧ ಮುಂದುವರೆದಿದೆ. ಬಸವನಗುಡಿ ವಾರ್ಡ್ ಹೆಸರನ್ನು ದೊಡ್ಡ ಗಣಪತಿ ವಾರ್ಡ್ ಎಂದು ಮರುನಾಮಕರಣಗೊಳಿಸುವ ಪ್ರಯತ್ನಕ್ಕೆ ಬಸವನಗುಡಿಯ ನಾಗರಿಕರು, ಸಂಘ-ಸಂಸ್ಥೆಗಳು ಸೇರಿ ಶಾಂತಿಯುತ ಬಸವಣ್ಣ ನಡಿಗೆ ಆಯೋಜಿಸಿ, ಗೂಳಿಯೊಡನೆ ಹೆಜ್ಜೆ ಹಾಕುವ ಮೂಲಕ ಪ್ರತಿಭಟಿಸಿದ್ದಾರೆ.

ನೆಟ್ಟಕಲ್ಲಪ್ಪ ಸರ್ಕಲ್‍ನ ಗಣೇಶ ದೇವಸ್ಥಾನಕ್ಕೆ ಕಾಯಿ ಒಡೆದು ನಡಿಗೆಗೆ ಚಾಲನೆ ನೀಡಲಾಯಿತು. ಬಸವನೊಂದಿಗೆ ಸ್ಥಳೀಯರು ಹಲವು ರಸ್ತೆಗಳಲ್ಲಿ ಸಂಚರಿಸಿ, ದೊಡ್ಡ ಬಸವನಗುಡಿಗೆ ನಡಿಗೆ ಸಾಗಿ, ಬಸವನಗುಡಿ ಉಳಿಸುವ ಘೋಷಣೆಗಳನ್ನು ಕೂಗಿದರು.

ನಡಿಗೆಯ ಅರ್ಧ ದಾರಿಗೆ ಶಾಸಕ ರವಿಸುಬ್ರಹ್ಮಣ್ಯ ಜೊತೆಯಾದರು. ಈವರೆಗೂ ಅವರು ಕಾಣಿಸಿರಲಿಲ್ಲ, ಈಗ ದಿಢೀರ್ ಎಂದು ಪ್ರತ್ಯಕ್ಷರಾಗಿರುವುದು ಪ್ರಚಾರಕ್ಕಾಗಿ ಮಾತ್ರ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಅಸಲಿಗೆ, ವಾರ್ಡ್ ಡಿಲಿಮಿಟೇಷನ್ ಪ್ರಕ್ರಿಯೆಯ ಹಂತದಲ್ಲಿ ಶಾಸಕ ರವಿಸುಬ್ರಹ್ಮಣ್ಯ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಕೂಡ ಸಹಿ ಹಾಕುವ ಮೂಲಕ ಒಪ್ಪಿಗೆ ಕೊಟ್ಟಿದ್ದಾರೆ, ಈಗ ಅದರ ವಿರೋಧದ ಪ್ರತಿಭಟನೆಯಲ್ಲೂ ಭಾಗಿಯಾಗಿರುವುದು ಏನನ್ನು ಸೂಚಿಸುತ್ತದೆ ಎಂಬುದು ಹಿರಿಯ ನಾಗರಿಕರ ಪ್ರಶ್ನೆಯಾಗಿದೆ.

ಸಾಲು ಸಾಲು ರೈಲು ದುರಂತ : ಮೋದಿ ಸರ್ಕಾರಕ್ಕೆ ಖರ್ಗೆ ತರಾಟೆ

ಮುಂದಿನ ದಿನಗಳಲ್ಲಿ ಈ ಹೋರಾಟ ತೀವ್ರಗೊಳ್ಳುತ್ತದೆ, ಕೋರ್ಟ್ ಮೆಟ್ಟಿಲು ಹತ್ತಿ ನ್ಯಾಯಕ್ಕಾಗಿ ಬೇಡಿಕೆಯನ್ನೂ ಸಲ್ಲಿಸಲಾಗುತ್ತದೆ ಎಂದು ಸತ್ಯಲಕ್ಷ್ಮಿರಾವ್, ನಿವಾಸಿಗಳ ಸಂಘಟಕರಾದ ಮಣಿ, ಶ್ರೀನಿವಾಸ್, ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ಕೆಎನ್‍ಸಿ ಸುರೇಶ್, ರಾಘವೇಂದ್ರ ರಾಜು, ಪತ್ರಕರ್ತ ಗುರುಪ್ರಸಾದ್ ತಿಳಿಸಿದ್ದಾರೆ.

RELATED ARTICLES

Latest News