ಬೆಂಗಳೂರು,ಏ.3- ಸರ್ಕಾರಿ ಕಟ್ಟಡಗಳ ಬಾಕಿ ಅಸ್ತಿ ತೆರಿಗೆ ವಸೂಲಿ ಮಾಡುವ ಮೂಲಕ ಬಿಬಿಎಂಪಿ ಇತಿಹಾಸ ನಿರ್ಮಿಸಿದೆ. ಸರ್ಕಾರಿ ಕಟ್ಟಡಗಳಿಂದ ಬರಬೇಕಿದ್ದ ಕೋಟಿ ಕೋಟಿ ಆಸ್ತಿ ತೆರಿಗೆಯಲ್ಲಿ ಬರೋಬ್ಬರಿ 65 ಕೋಟಿ ರೂ. ತೆರಿಗೆ ವಸೂಲಿ ಮಾಡಿ ಬಿಬಿಎಂಪಿ ಗಮನ ಸೆಳೆದಿದೆ.
ಕಳೆದ ಹಲವಾರು ವರ್ಷಗಳಿಂದ ಸರ್ಕಾರಿ ಇಲಾಖೆಗಳು ಬಾಕಿ ಅಸ್ತಿ ತೆರಿಗೆ ಪಾವತಿ ಮಾಡಿರಲ್ಲಿಲ್ಲ ಕೇಳಿದರೂ ಕ್ಯಾರೆ ಎನ್ನುತ್ತಿರಲಿಲ್ಲ. ಹೀಗಾಗಿ ಪಾಲಿಕೆ ಕೈಗೊಂಡ ಖಡಕ್ ನಿರ್ಧಾರದ ಪರಿಣಾಮ ಕೇವಲ ಎರಡೇ ದಿನಗಳಲ್ಲಿ ಸರ್ಕಾರಿ ಕಚೇರಿಗಳಿಂದ 65 ಕೋಟಿ ರೂ. ಬಾಕಿ ತೆರಿಗೆ ವಸೂಲಿಯಾಗಿದೆ. ಕಳೆದ ವರ್ಷ ಓಟಿಎಸ್ ಮೂಲಕ ತೆರಿಗೆ ಕಟ್ಟುವಂತೆ ವಿನಾಯಿತಿ ನೀಡಲಾಗಿತ್ತು.. ಅದ್ರು ಕೂಡ ಕ್ಯಾರೆ ಅನ್ನದ ಸರ್ಕಾರಿ ಕಟ್ಟಡಗಳು ನಿರ್ವಹಣೆ ಗಾರರು ಬಾಕಿ ಪಾವತಿಸದಿದ್ದರೆ ಕಟ್ಟಡ ಹರಾಜು ಹಾಕಲಾಗುವುದು ಎಂದ ತಕ್ಷಣ ಬಾಕಿ ಅಸ್ತಿ ತೆರಿಗೆ ಪಾವತಿ ಮಾಡಲು ಮುಂದಾಗಿವೆ.
ಕಳೆದ ವಾರ ಸರ್ಕಾರಿ ಕಟ್ಟಡಗಳಿಗೆ ನೋಟೀಸ್ ನೀಡಿ ವಾರ್ನಿಂಗ್ ಕೊಟ್ಟಿದ ಬಿಬಿಎಂಪಿ ಅಧಿಕಾರಿಗಳು. ಈ ವಾರ್ನಿಂಗ್ ಗೆ ಬೆಚ್ಚುಬಿದ್ದ ಸರ್ಕಾರಿ ಕಟ್ಟಡಗಳ ಇಲಾಖೆ ಮುಖ್ಯಸ್ಥರು ತೆರಿಗೆ ಪಾವತಿಗೆ ಮುಂದಾಗಿದ್ದಾರೆ.
ಅದರಲ್ಲೂ ಪ್ರಮುಖವಾಗಿ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸ ಸೌಧ, ರಾಜ ಭವನ ಸೇರಿದಂತೆ 30 ಕ್ಕೂ ಹೆಚ್ಚು ಸರ್ಕಾರಿ ಕಟ್ಟಡಗಳು ಬಾಕಿ ತೆರಿಗೆ ಪಾವತಿ ಮಾಡಿವೆ.
ಬಾಕಿ ಅಸ್ತಿ ತೆರಿಗೆ ಪಾವತಿ ಮಾಡಿದ ಸರ್ಕಾರಿ ಕಟ್ಟಡಗಳು: – ನಮ್ಮ ಮೆಟ್ರೋ… 18.90 ಕೋಟಿ, ಇಸ್ರೋ.. 15.55 ಕೋಟಿ. ವಿಧಾನಸೌಧ, ವಿಕಾಸ ಸೌಧ 6.64 ಕೋಟಿ. ಎಂಎಸ್ ಬಿಲ್ಡಿಂಗ್ 3.38 ಕೋಟಿ, ಪೊಲೀಸ್ ಇಲಾಖೆ.. 21.95 ಲಕ್ಷ, ರಾಜ್ಯ ಸಶಸ್ತ್ರ ಪೊಲೀಸ್ 22 ಲಕ್ಷ, ಬಿಎಸ್ ಎನ್ ಎಲ್ 1.43 ಕೋಟಿ, ಪಂಚಾಯತ್ ರಾಜ್ 3 ಲಕ್ಷ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ 4.08 ಕೋಟಿ, ಆಟೋಮಿಕ್ ಇನ್ಸಿಟ್ಯೂಟ್ 92.01 ಕೋಟಿ. ಸಿಬಿಇಸಿ 2.73 ಲಕ್ಷ, ಇಎಸ್ ಐಸಿ 1.64 ಕೋಟಿ, ಎಪಿಎಂಸಿ ಮಾರುಕಟ್ಟೆ 40.85 ಲಕ್ಷ, ವಾಣಿಜ್ಯ ತೆರಿಗೆ ಇಲಾಖೆ 54.24 ಲಕ್ಷ, ಅದಾಯ ತೆರಿಗೆ ಇಲಾಖೆ 1.22 ಕೋಟಿ, ಕೆಪಿಸಿಎಲ್ 3.78 ಕೋಟಿ, ಯುವಜನ ಸಬಲೀಕರಣ 1.33 ಕೋಟಿ, ಹಾಗೂ ವಿವಿ ಟವರ್ 1.18 ಕೋಟಿ ರೂ. ಗಳ ಬಾಕಿ ತೆರಿಗೆ ಪಾವತಿಸಿವೆ.
ಈ ರೀತಿಯ ಸರ್ಕಾರಿ ಕಛೇರಿಗಳು ಬಾಕಿ ಅಸ್ತಿ ತೆರಿಗೆ ಪಾವತಿ ಮಾಡಿದರೆ ಅದೊಂದು ಸಾಧನೆಯ ಮೈಲುಗಲ್ಲಾಗಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.