ಬೆಂಗಳೂರು, ಆ.2– ಗುಂಡಿ ಬಿದ್ದ ರಸ್ತೆಗಳಿಗೂ ಪ್ರಶಸ್ತಿ! ಅರೇ ಇದೇನಿದು ಗುಂಡಿ ಬಿದ್ದ ರಸ್ತೆಗಳಿಗೂ ಪ್ರಶಸ್ತಿ ಕೊಡ್ತಾರಾ ಎಂದು ನೀವು ತಲೆಕೆಡಿಸಿಕೊಳ್ಳಬೇಡಿ. ಇಂತಹ ಪ್ರಶಸ್ತಿ ನೀಡಿರುವುದು ಬೆಜವಾಬ್ದಾರಿ ಬಿಬಿಎಂಪಿ ಅಧಿಕಾರಿಗಳ ಕಾಲೆಳೆಯಲು ಕೆಲ ಪ್ರಜ್ಞಾವಂತ ನಾಗರೀಕರು ಮಾಡಿರುವ ಕುಚೋದ್ಯ.
ಹೌದು ಗುಂಡಿ ಬಿದ್ದ ರಸ್ತೆಗಳಿಗೆ ಕೆಲವರು ವಿನ್ನರ್ ಹಾಗೂ ರನ್ನರ್ ಅಪ್ ಪ್ರಶಸ್ತಿ ನೀಡಿದ್ದಾರೆ. ಈ ಎರಡು ಪ್ರಶಸ್ತಿಗಳು ಹೆಮಿಗೆಪುರ ವಾರ್ಡ್‌ನ ರಸ್ತೆಗಳಿಗೆ ಸಂದಿರುವುದು ವಿಶೇಷವಾಗಿದೆ.
ಗುಂಡಿ ಬಿದ್ದ ರಸ್ತೆಗಳಿಗೆ ಪ್ರಶಸ್ತಿ ನೀಡಿ ವಿಡಂಬನಾತ್ಮಕ ಪೋಸ್ಟ್ ಮಾಡಿ ಬಿಬಿಎಂಪಿಗೆ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಹೆಮಿಗೆಪುರದ ರಸ್ತೆ ಗುಂಡಿಗೆ ಮೊದಲ ಪ್ರಶಸ್ತಿ ಸಿಕ್ಕಿದ್ದರೆ, ರನ್ನರ್ ಅಪ್ ಪ್ರಶಸ್ತಿಯೂ ಅದೇ ಪ್ರದೇಶದ ರಸ್ತೆಗೆ ಎಂದು ಪೋಸ್ಟ್ ಮಾಡಲಾಗಿದೆ.ಇಲ್ಲಿನ ವಾಜರಹಳ್ಳಿ ರಸ್ತೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಗುಂಡಿಗಳ ರಸ್ತೆ ನಮ್ಮ ಏರಿಯಾದಲ್ಲಿ ಇರೋದಕ್ಕೆ ಹೆಮ್ಮೆ ಎಂದು ವ್ಯಂಗ್ಯವಾಡಿದ್ದಾರೆ.
ಈ ರೀತಿಯ ರಸ್ತೆಗಳಿಗೆ ಬಿಬಿಎಂಪಿ, ಜಲಮಂಡಳಿ, ಬಿಡಿಎ,ಬೆಸ್ಕಾಂ,ಕೆಪಿಟಿಸಿಎಲ್ ಕಾರಣ ಎಂದು ದೂಷಿಸಲಾಗಿದೆ. ವಾಜರಹಳ್ಳಿ 100 ಫೀಟ್ ರಸ್ತೆಯಲ್ಲಿರುವ ಎರಡು ಹಾಳುದ್ದ ಗುಂಡಿ ಫೋಟೋಗಳನ್ನ ಟ್ಯಾಗ್ ಮಾಡಿ ಫಸ್ಟ್ ಮತ್ತು ರನ್ನರ್ ಅಪ್ ಪ್ರಶಸ್ತಿ ನೀಡಿ ಬಿಬಿಎಂಪಿ ಮಾನ ಕಳೆಯಲಾಗಿದೆ.
- ಅಭಿವೃದ್ಧಿ ಕಾಣದ ದೇವರಾಜ ಅರಸ್ ಅವರ ಮನೆ
- ದಲಿತ ಅಥವಾ ಮುಸ್ಲಿಂ ಸಮುದಾಯಕ್ಕೆ ಸಿಎಂ ಸ್ಥಾನ ನೀಡಲು ಆಗ್ರಹ
- ಕುರ್ಚಿ ಕಿತ್ತಾಟದಲ್ಲಿ ರೈತರನ್ನು ಮರೆತ ಸರ್ಕಾರ : ಆರ್.ಅಶೋಕ್
- ಬಾಣಲಿ ಹೆಲ್ಮೆಟ್ ಸವಾರನಿಗಾಗಿ ಪೊಲೀಸರ ಶೋಧ
- ವೈದ್ಯೆ ಕೃತಿಕಾರೆಡ್ಡಿ ಕೊಲೆ ಪ್ರಕರಣ : ಪತಿಯ ಕರಾಳ ಮುಖ ಬಹಿರಂಗ
