ಬೆಂಗಳೂರು,ಡಿ.21- ನಗರದಲ್ಲಿರುವ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ಬಾರ್ ಅಂಡ್ ಪಬ್ಗೆ ಬಿಬಿಎಂಪಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.ನಿಯಮ ಉಲ್ಲಂಘನೆ ಆರೋಪದ ಮೇಲೆ ವಿರಾಟ್ ಕೊಹ್ಲಿ ಸಹಮಾಲೀಕತ್ವದ ಬಾರ್ ಅಂಡ್ ಪಬ್ ಗೆ ಬಿಬಿಎಂಪಿ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಇರೋ ಒನ್ 8 ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಫೈರ್ ಸೇಫ್ಟಿ ಅಳವಡಿಸಿಲ್ಲ ಎಂದು ಆರೋಪಿಸಿ ಕೋಹ್ಲಿ ಮಾಲಿಕತ್ವದ ಬಾರ್ಗೆ ನೋಟೀಸ್ ನೀಡಲಾಗಿದೆ.
ಫೈರ್ ಸೇಫ್ಟಿ ಕುರಿತಂತೆ ಅಗ್ನಿಶಾಮಕ ದಳದ ಎನ್ಒಸಿ ಪಡೆಯದ ಬಾರ್ ಓಪನ್ ಮಾಡಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ನೀಡಿದ ದೂರಿನ ಆಧಾರದ ಮೇಲೆ ನೋಟೀಸ್ ಜಾರಿ ಮಾಡಲಾಗಿದೆ.
ಈ ಹಿಂದೆ ಕೂಡ ಶಾಂತಿನಗರ ವ್ಯಾಪ್ತಿಯ ಬಿಬಿಎಂಪಿ ಅಧಿಕಾರಿಗಳು ನೋಟೀಸ್ ನೀಡಿದ್ದರೂ ಬಾರ್ನವರು ಕ್ಯಾರ ಎಂದಿರಲಿಲ್ಲ. ಹೀಗಾಗಿ ಮತ್ತೆ ನೋಟೀಸ್ ನೀಡಲಾಗಿದ್ದು, ಒಂದು ವಾರದೊಳಗೆ ಸಮಜಾಯಿಷಿ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ನೋಟೀಸ್ನಲ್ಲಿ ಎಚ್ಚರಿಸಲಾಗಿದೆ.