ಬೆಂಗಳೂರು,ಏ.17– ಅಪಘಾತದಲ್ಲಿ ಬಾಲಕ ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ಉದ್ರಿಕ್ತರಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬಿಬಿಎಂಪಿ ಕಸದ ಲಾರಿ ಚಾಲಕ ಚಿಕಿತ್ಸೆ ಲಿಸದೆ ಮೃತಪಟ್ಟಿದ್ದು, ಸಂಪಿಗೆಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.ವೈಟ್‌ಫೀಲ್‌್ಡ ನಿವಾಸಿ, ಬಿಬಿಎಂಪಿ ಕಸದ ಲಾರಿ ಚಾಲಕ ಕೊಂಡಯ್ಯ (59) ಮೃತಪಟ್ಟವರು.
ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದ ಹೆಗಡೆನಗರದಲ್ಲಿ ಮಾ.29 ರಂದು ಬೆಳಿಗ್ಗೆ ಬೈಕ್‌ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದ್ದರಿಂದ ತಂದೆ ಜೊತೆ ಹೋಗುತ್ತಿದ್ದ ಐಮಾನ್ (10) ಎಂಬ ಬಾಲಕ ಮೃತಪಟ್ಟಿದ್ದನು.
ಆ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ರೊಚ್ಚಿಗೆದ್ದು ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ,ಚಾಲಕ ಕೊಂಡಯ್ಯಅವರ ಮೇಲೆ ಮನಸೋಇಚ್ಚೆ ದೊಣ್ಣೆ,ಕಲ್ಲು,ಕೈಗಳಿಂದ ಹೊಡೆದಿದ್ದರಿಂದ ಗಂಭೀರ ಗಾಯಗೊಂಡಿದ್ದರು.
ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಕೊಂಡಯ್ಯನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಹಾಲಕ್ಷಿ ಲೇಔಟ್ ಖಾಸಗಿ ಆಸ್ಪತೆಗೆ ಸೇರಿಸಲಾಗಿತ್ತು.ಆದರೆ ಚಿಕಿತ್ಸೆ ಲಿಸಿದೆ ಮೊನ್ನೆ ರಾತ್ರಿ ಕೊಂಡಯ್ಯ ಮೃತಪಟ್ಟಿದ್ದಾರೆ.
ಮೂವರ ಬಂಧನ :
ಲಾರಿ ಚಾಲಕ ಕೊಂಡಯ್ಯ ಮೃತಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಅಪ್ರೋಜ್, ಅಕ್ರಂಖಾನ್ ಮತ್ತು ತಬರಕ್ ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ತನಿಖೆ ಮುಂದುವರೆಸಿರುವ ಉಳಿದವರಿಗಾಗಿ ಶೋಧ ಕೈಗೊಂಡಿದ್ದಾರೆ.