ಬೆಂಗಳೂರು, ಮೇ 6- ಪಿಜಿಗಳಲ್ಲಿ ವಾಸಿಸುತ್ತಿದ್ದ ಹೆಣ್ಣು ಮಕ್ಕಳ ಅಸಭ್ಯ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನಗರದಲ್ಲಿ ಅನಧಿಕೃತ ಪಿಜಿಗಳ ಮೇಲೆ ಬಿಬಿಎಂಪಿ ಸಮರ ಸಾರಿದೆ.
ನಗರದಲ್ಲಿ ಸಾವಿರಾರು ಪಿಜಿಗಳಿಂದ ನೆರೆಹೊರೆ ಸಾರ್ವಜನಿಕರಿಗೆ ಮುಜುಗರವಾಗುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಸುರಲ್ಕರ್ ಅವರು ತಿಳಿಸಿದ್ದಾರೆ.
ಹೆಚ್ ಎಸ್ ಅರ್ ಲೇಔಟ್ ಪಿಜಿ ಯಲ್ಲಿ ವಾಸ ಮಾಡೋ ಹೆಣ್ಣು ಮಕ್ಕಳು ಅಸಭ್ಯ ವರ್ತನೆ..ಯುವತಿ ಬೆತ್ತಲೆ ಓಡಾಟ ಪ್ರಕರಣಗಳಿಂದ ಸ್ಥಳೀಯ ಜನರು ಅಕ್ರೋಶಗೊಂಡಿರುವ ಹಿನ್ನೆಲೆಯಲ್ಲಿ ನಾವು ಅಕ್ರಮ ಪಿಜಿಗಳ ಮೇಲೆ ದಾಳಿ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಪಿಜಿ ಗೈಡ್ ಲೈನ್ಸ್‌ನಲ್ಲಿ ಹೊಸ ಮಾರ್ಗಸೂಚಿ ತರಲಾಗಿದೆ. ಪಿಜಿ ನಡೆಸೋರು ನೆರೆಹೊರೆಯವರಿಗೆ ಮುಜುಗರ.
ಅಗದಂತೆ ಪಿಜಿ ನಡೆಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಈಗಾಗಲೇ 1200 ಅನಧಿಕೃತ ಪಿಜಿಗಳನ್ನು ಗುರುತು ಮಾಡಲಾಗಿದೆ. ಇವುಗಳಲ್ಲಿ 200 ಪಿಜಿ ಗಳನ್ನು ಪಾಲಿಕೆ ಅರೋಗ್ಯ ಇಲಾಖೆ ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.