Friday, September 20, 2024
Homeಬೆಂಗಳೂರುಮಾಲ್‌ಗಳ ಪ್ರವೇಶಕ್ಕೆ ತಾರತಮ್ಯ ತೋರಿದರೆ ಪರವಾನಗಿ ರದ್ದು

ಮಾಲ್‌ಗಳ ಪ್ರವೇಶಕ್ಕೆ ತಾರತಮ್ಯ ತೋರಿದರೆ ಪರವಾನಗಿ ರದ್ದು

ಬೆಂಗಳೂರು,ಆ.2- ಮಾಲ್ಗಳ ಪ್ರವೇಶದ ಸಂದರ್ಭದಲ್ಲಿ ಭಾಷೆ, ಜಾತಿ, ಜನಾಂಗ, ಧರ್ಮ, ಉಡುಪು ಮತ್ತು ಜನಸ್ಥಳದ ಆಧಾರದ ಮೇಲೆ ತಾರತಮ್ಯ ತೋರುವುದು ಕಂಡುಬಂದರೆ ಅಂತಹ ಮಾಲ್ಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

ಇತ್ತಿಚೆಗೆ ಜಿಟಿ ಮಾಲ್ನಲ್ಲಿ ಪಂಚೆ ಉಟ್ಟುಕೊಂಡು ಮಾಲ್ ಪ್ರವೇಶಿಸಲು ಮುಂದಾದ ವ್ಯಕ್ತಿಯೊಬ್ಬರನ್ನು ಕಾವಲುಗಾರ ತಡೆದು ನಿಲ್ಲಿಸಿದ್ದು ಭಾರಿ ಸಂಚಲನ ಸೃಷ್ಟಿಸಿತ್ತು.ಮಾಲ್ನವರ ವರ್ತನೆಗೆ ಕನ್ನಡಿಗರು ಕಿಡಿ ಕಾರಿದ್ದರು ಮಾತ್ರವಲ್ಲ, ಕ್ಷಮೆ ಕೇಳುವಂತೆ ಪಟ್ಟು ಹಿಡಿದ ಕಾರಣ ಮಾಲ್ ಮಾಲೀಕರೇ ಅವಮಾನಿತ ವ್ಯಕ್ತಿಯನ್ನು ಕರೆದು ಸನಾನ ಮಾಡಿದ್ದರು.

ಅದರ ಹೊರತಾಗಿಯೂ ಆ ಘಟನೆಗೆ ಅಧಿವೇಶನದಲ್ಲಿ ಪಕ್ಷಭೇದ ಮರೆತು ಖಂಡನೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಒಂದೇರಡು ದಿನಗಳ ಕಾಲ್ ಮಾಲ್ ಬಂದ್ ಮಾಡಲಾಗಿತ್ತು.ಈ ಘಟನೆ ನಂತರ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಇದೀಗ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಸಮುಚ್ಚಯಗಳು ಹಾಗೂ ಇತರೆ ಅಂಗಡಿಗಳ ಮಾಲೀಕರಿಗೆ ಈ ಕೆಳಕಂಡಂತೆ ನಿರ್ದೇಶನ ನೀಡಲಾಗಿದೆ.

ಎಲ್ಲಾ ವಾಣಿಜ್ಯ ಸಮುಚ್ಚಯಗಳು ಹಾಗೂ ಇತರೆ ಅಂಗಡಿಗಳ ಮಾಲೀಕರುಗಳು ಸಾರ್ವಜನಿಕರಿಗೆ ಪ್ರವೇಶ ಸಂದರ್ಭದಲ್ಲಿ ಭಾಷೆ, ಜಾತಿ, ಜನಾಂಗ, ಧರ್ಮ, ಉಡುಪು ಮತ್ತು ಜನಸ್ಥಳದ ಆಧಾರದ ಮೇಲೆ ಮಾತ್ರ ತಾರತಮ್ಯ ಮಾಡಬಾರದು.

ಎಲ್ಲಾ ವಾಣಿಜ್ಯ ಸಮುಚ್ಚಯಗಳು ಹಾಗೂ ಇತರೆ ಅಂಗಡಿಗಳ ಮಾಲೀಕರುಗಳು ಸಾರ್ವಜನಿಕರು ಧರಿಸಿರುವ ಉಡುಪಿನ ಆಧಾರದ ಮೇಲೆ ಮಾತ್ರ ಪ್ರವೇಶವನ್ನು ನಿರಾಕರಿಸದಂತೆ ತಮ ಭದ್ರತಾ ಸಿಬ್ಬಂದಿಗಳಿಗೆ ಮೇಲೆ ಸೂಚಿಸಿರುವ ನಿರ್ದೇಶನದಂತೆ ಸೂಕ್ತ ಮಾರ್ಗದರ್ಶನ ನೀಡಲು ಸೂಚಿಸಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಯಾವುದೇ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸಲು ಎಲ್ಲಾ ವಾಣಿಜ್ಯ ಸಮುಚ್ಚಯಗಳು ಹಾಗೂ ಇತರೆ ಅಂಗಡಿಗಳ ಮಾಲೀಕರುಗಳಿಗೆ ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಿದೆ.

ಮುಂದಿನ ದಿನಗಳಲ್ಲಿ ಮೇಲ್ಕಂಡ ಅಂಶಗಳನ್ನು ಪಾಲಿಸದಿದ್ದಲ್ಲಿ ಅಂತಹ ವಾಣಿಜ್ಯ ಸಮುಚ್ಚಯಗಳ ಪರವಾನಿಗಿ ರದ್ದುಗೊಳಿಸುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Latest News