ಮುಂಬೈ, ಮೇ 11- ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ಪಂದ್ಯಗಳನ್ನು ಪುನರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ.
ಮುಂದಿನ ಟೂರ್ನಿಗಳಿಗೆ ಸಮಯ ಹೊಂದಿಸಬೇಕೆಂಬ ಉದ್ದೇಶದಿಂದ ಮೇ 25 ರಿಂದ 30ರೊಳಗೆ ಟೂರ್ನಿ ಮುಗಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹೀಗಾಗಿ ಮೇ 16ರಿಂದ ಐಪಿಎಲ್ ಪಂದ್ಯಗಳನ್ನ ಪುನರಾರಂಭಿಸುವ ಸಾಧ್ಯತೆಗಳಿವೆ. ಸ್ಥಗಿತಗೊಂಡಿದ್ದ ಪಂಜಾಬ್ ಕಿಂಗ್‌್ಸ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.
ಸ್ಥಗಿತಗೊಂಡಿದ್ದ ಪಂಜಾಬ್ ಕಿಂಗ್‌್ಸಮತ್ತು ಡೆಲ್ಲಿ ಕ್ಯಾಪಿಟಲ್‌್ಸ ನಡುವಿನ ಪಂದ್ಯ ಸೇರಿ 58 ಪಂದ್ಯಗಳು ನಡೆದಿವೆ. ಇನ್ನೂ ನಾಲ್ಕು ಪ್ಲೇ ಆಫ್ಸ್ ಪಂದ್ಯಗಳೂ ಸೇರಿ 16 ಪಂದ್ಯಗಳು ಬಾಕಿ ಇವೆ.
ಆಟಗಾರರು ಮತ್ತು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಉದ್ವಿಗ್ನತೆ ಶಮನವಾದ ಬಳಿಕ ಹೊಸ ದಿನಾಂಕಗಳನ್ನು ಬಿಸಿಸಿಐ ಪ್ರಕಟಿಸಲಿದೆ ಎಂದು ವರದಿಯಾಗಿದೆ.
ದಕ್ಷಿಣ ಭಾರತದ ನಗರಗಳಾದ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಐಪಿಎಲ್ ಪಂದ್ಯಾವಳಿ ಮುಂದುವರಿಸಲು ಯೋಜನೆ ರೂಪಿಸಲಾಗುತ್ತಿದೆ. ಒಂದು ವೇಳೆ ಕೇಂದ್ರ ಸರ್ಕಾರ ಈ ಯೋಜನೆ ಸಮ್ಮತಿ ನೀಡಿದರೆ ಐಪಿಎಲ್ ಇನ್ನು ಕೆಲವೇ ದಿನಗಳಲ್ಲಿ ಪುನರಾರಂಭ ಆಗಲಿದೆ ಎನ್ನಲಾಗಿದೆ.