ತಮ್ಮ ಎಟಿಎಂ ಕಾರ್ಡ್ ಬಳಸಿ ಹಣ ಕಬಳಿಕೆ
ಬೆಂಗಳೂರು, ಆ.6- ಎಟಿಎಂ ಸೆಂಟರ್‌ಗಳ ಬಳಿ ಹಣ ಡ್ರಾ ಮಾಡಲು ಬರುವ ಅಮಾಯಕರಿಗೆ ಹಣ ಡ್ರಾ ಮಾಡಿ ಕೊಡುವುದಾಗಿ ನಂಬಿಸಿ ಎಟಿಎಂ ಕಾರ್ಡ್‌ಗಳನ್ನು ಬದಲಾವಣೆ ಮಾಡಿ ವಂಚನೆ ಮಾಡುತ್ತಿದ್ದ ಬಿಹಾರ ಮೂಲದ ಇಬ್ಬರು ಸೇರಿದಂತೆ ಮೂವರನ್ನು ನಗರ ಪೊಲೀಸರು ಬಂಧಿಸಿ ವಿವಿಧ ಬ್ಯಾಂಕ್‌ಗಳ 69 ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆದು 11,500 ರೂ. ವಶಪಡಿಸಿಕೊಂಡಿದ್ದಾರೆ.
ಸುಬ್ರಮಣ್ಯಪುರ:
ಚಿಕ್ಕಲ್ಲಸಂದ್ರ ನಿವಾಸಿಯೊಬ್ಬರು ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಇರುವ ಕೆನರಾ ಬ್ಯಾಂಕ್‌ನಲ್ಲಿ 1.50 ಲಕ್ಷ ಹಣವನ್ನು ಜಮಾ ಮಾಡಿ ನಂತರ ಬ್ಯಾಂಕ್ ಪಕ್ಕದಲ್ಲಿದ್ದ ಎಟಿಎಂ ಸೆಂಟರ್‌ನಲ್ಲಿ ಪಿನ್ ನಂಬರ್ ಚೇಂಜ್ ಮಾಡಿಕೊಳ್ಳಲು ಹೋಗಿದ್ದಾರೆ.
ಪಿನ್ ನಂಬರ್ ಚೇಂಜ್ ಮಾಡಿಕೊಳ್ಳಲು ತಿಳಿಯದಿದ್ದಾಗ, ಅಲ್ಲಿಗೆ ಬಂದ ಇಬ್ಬರು ಅಪರಿಚಿತರ ನೆರವು ಕೇಳಿ ಅವರಿಗೆ ತಮ ಎಟಿಎಂ ಕಾರ್ಡ್‌ನ್ನು ನೀಡಿ, ಪಿನ್ ಕೋಡ್‌ನ್ನು ತಿಳಿಸಿರುತ್ತಾರೆ. ಆ ವೇಳೆ ಎ.ಟಿ.ಎಂ ಕಾರ್ಡ್‌ನ್ನು ಉಪಯೋಗಿಸಿ, ಪಿನ್ ನಂಬರ್ ಚೇಂಜ್ ಮಾಡಿ ನಂತರ ಅವರಿಗೆ ಬೇರೊಂದು ಎಟಿಎಂ ಕಾರ್ಡ್ ಕೊಟ್ಟು ಕಳುಹಿಸಿದ್ದಾರೆ.
ಆ ಇಬ್ಬರು ವಂಚಕರು ಪಕ್ಕದಲ್ಲಿದ್ದ ಇನ್ನೊಂದು ಎ.ಟಿ.ಎಂ ಸೆಂಟರ್‌ಗೆ ಹೋಗಿ ಹಲವಾರು ಬಾರಿ ಹಣವನ್ನು ಡ್ರಾ ಮಾಡಿಕೊಂಡಿರುವ ಬಗ್ಗೆ ಮೊಬೈಲ್‌ಗೆ ಮಾಹಿತಿ ಬಂದಿರುವುದು ಗಮನಿಸಿ ತಕ್ಷಣ ಎಚ್ಚೆತ್ತುಕೊಂಡು ಆ ವ್ಯಕ್ತಿ ಕೆನರಾ ಬ್ಯಾಂಕ್‌ಗೆ ಹೋಗಿ ಹಣ ಡ್ರಾ ಆಗುತ್ತಿರುವ ಬಗ್ಗೆ ವಿಚಾರಿಸಿದ್ದಾರೆ.ಬ್ಯಾಂಕ್ ಅಧಿಕಾರಿಗಳು ಆ ವ್ಯಕ್ತಿಯ ಖಾತೆಯನ್ನು ಪರಿಶೀಲಿಸಿದಾಗ ಆ ಖಾತೆಯಿಂದ 75 ಸಾವಿರ ಹಣ ಎ.ಟಿ.ಎಂ ನಿಂದ ಡ್ರಾ ಆಗಿರುವುದಾಗಿ ತಿಳಿಸಿದ್ದಾರೆ.
ನಂತರ ಬ್ಯಾಂಕ್ ಅಧಿಕಾರಿಗಳು ಖಾತೆಯಿಂದ ಯಾವುದೇ ರೀತಿಯ ಹಣ ವರ್ಗಾವಣೆಯಾಗದಂತೆ ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ. ಈ ಬಗ್ಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ವಂಚಕರ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚಿಸಿದ್ದು, ಆ ತಂಡವು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ತಾಂತ್ರಿಕ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ಉತ್ತರಹಳ್ಳಿ ಕೆನರಾ ಬ್ಯಾಂಕ್ ಎ.ಟಿ.ಎಂ ಸೆಂಟರ್‌ನ ಹತ್ತಿರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬಿಹಾರ ರಾಜ್ಯದ ಇಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಎಟಿಎಂ ಬಳಸಿ ಹಣ ಡ್ರಾ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಇಬ್ಬರು ವಂಚಕರಿಂದ ದೂರುದಾರರ ಎ.ಟಿ.ಎಂ ಕಾರ್ಡ್ ಒಳಗೊಂಡಂತೆ ಒಟ್ಟು 37 ವಿವಿಧ ಬ್ಯಾಂಕ್‌ಗಳ ಎ.ಟಿ.ಎಂ ಕಾರ್ಡ್‌ಗಳನ್ನು ಹಾಗೂ 7,500 ಹಣ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬೇಗೂರು ಪೊಲೀಸ್ ಠಾಣೆ:
ಎ.ಟಿ.ಎಂ ಸೆಂಟರ್‌ಗಳ ಬಳಿ ಹಣ ಡ್ರಾ ಮಾಡಲು ಬರುವ ಅಮಾಯಕರಿಗೆ, ಹಣ ಡ್ರಾ ಮಾಡಿ ಕೊಡುವುದಾಗಿ ನಂಬಿಸಿ, ಎ.ಟಿ.ಎಂ ಕಾರ್ಡ್‌ಗಳನ್ನು ಬದಲಾವಣೆ ಮಾಡಿ, ವಂಚನೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 32 ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆದು 4 ಸಾವಿರ ಹಣ ಜಪ್ತಿ ಮಾಡಿದ್ದಾರೆ.
ಬೇಗೂರು ಮುಖ್ಯರಸ್ತೆಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ಬಳಿ ಇರುವ ಎ.ಟಿ.ಎಂ ಸೆಂಟರ್‌ನಲ್ಲಿ ಹಣ ಡ್ರಾ ಮಾಡಿಕೊಳ್ಳಲು ವ್ಯಕ್ತಿಯೊಬ್ಬರು ಹೋಗಿದ್ದಾಗ ಎ.ಟಿ.ಎಂ ಮಿಷಿನ್‌ನಿಂದ ಹಣ ಡ್ರಾ ಮಾಡುವ ಬಗ್ಗೆ ತಿಳಿಯದೆ ಇದ್ದುದರಿಂದ ಪಕ್ಕದಲ್ಲೆ ಇದ್ದ ವ್ಯಕ್ತಿಗೆ ಹಣ ಡ್ರಾ ಮಾಡಿ ಕೊಡುವಂತೆ ಸಹಾಯ ಕೇಳಿದಾಗ ಆತ ಬೇರೊಂದು ಎ.ಟಿ.ಎಂ ಕಾರ್ಡ್‌ನ್ನು ಹಾಕಿ ಹಣ ಡ್ರಾ ಮಾಡುವಂತೆ ನಟಿಸಿದ್ದಾನೆ.
ನಿಮ ಎಟಿಎಂ ಕಾರ್ಡ್‌ನಿಂದ ಹಣ ಬರುತ್ತಿಲ್ಲ ಎಂದು ಹೇಳಿ ಬೇರೊಂದು ಎಟಿಎಂ ಕಾರ್ಡ್ ಕೊಟ್ಟು ಕಳುಹಿಸಿದ್ದಾರೆ.ಆ ವ್ಯಕ್ತಿ ಮಾಲೂರಿನ ಭಂಟಹಳ್ಳಿಗೆ ಹೋಗಿದ್ದು, ಇತ್ತ ವಂಚಕರು ಆ ವ್ಯಕ್ತಿಯ ಎಟಿಎಂ ಕಾರ್ಡ್ ಬಳಸಿ 61,500 ರೂ. ಡ್ರಾ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಎಟಿಎಂ ಕಾರ್ಡ್ ನೀಡಿದ್ದ ವ್ಯಕ್ತಿ ಗಮನಹರಿಸಿಲ್ಲ. ಕೆಲ ದಿನಗಳ ನಂತರ ಮಾಲೂರಿನ ಭಂಟಹಳ್ಳಿಯಲ್ಲಿರುವ ಬ್ಯಾಂಕಿಗೆ ಹೋದಾಗ ನಿಮ ಖಾತೆಯಿಂದ 61,500 ಡ್ರಾ ಆಗಿರುವ ಬಗ್ಗೆ ಬ್ಯಾಂಕಿನ ಸಿಬ್ಬಂದಿ ತಿಳಿಸಿದ್ದಾರೆ.
ಈ ಬಗ್ಗೆ ಗಾಬರಿಯಾಗಿ ಅವರು ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಬೇಗೂರು ಕೆರೆಯ ಆಸುಪಾಸಿನಲ್ಲಿರುವ ಎ.ಟಿ.ಎಂ ಸೆಂಟರ್‌ಗಳ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಒಟ್ಟು 32 ಎಟಿಎಂ ಕಾರ್ಡ್‌ಗಳನ್ನು ಹಾಗೂ 4 ಸಾವಿರ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಎಲೆಕ್ಟ್ರಾನಿಕ್ ಸಿಟಿ ಇನ್‌್ಸಪೆಕ್ಟರ್ ಕೃಷ್ಣಕುಮಾರ್ ಹಾಗೂ ಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.