Thursday, November 14, 2024
Homeಬೆಂಗಳೂರುಅಂತಾರಾಜ್ಯದವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಎಚ್ಚರಿಕೆಯಿಂದಿರಿ : ದಯಾನಂದ ಮನವಿ

ಅಂತಾರಾಜ್ಯದವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಎಚ್ಚರಿಕೆಯಿಂದಿರಿ : ದಯಾನಂದ ಮನವಿ

Be careful before hiring interstates: Dayananda

ಬೆಂಗಳೂರು,ನ.12- ಹೊರಗಿನವರನ್ನು ತಮ ಮನೆಗಳಲ್ಲಿ ಕೆಲಸಕ್ಕೆ ಹಾಗೂ ಸೆಕ್ಯೂರಿಟಿ ಗಾರ್ಡ್ಗಳಾಗಿ ಸೇರಿಸಿಕೊಳ್ಳುವಾಗ ಜಾಗ್ರತೆ ವಹಿಸಬೇಕೆಂದು ಸಾರ್ವಜನಿಕರಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮನವಿ ಮಾಡಿಕೊಂಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಕೆಲಸಕ್ಕಿರುವವರೇ ಹಣ, ಆಭರಣ ಕಳ್ಳತನ ಮಾಡುತ್ತಿರುವ ಪ್ರಕರಣ ಗಳು ಹೆಚ್ಚಾಗುತ್ತಿವೆ.ಕೆಲಸಕ್ಕೆ ನೇಮಿಸಿಕೊಳ್ಳುವ ಅಂತಾರಾಜ್ಯ , ಅಂತರ್ದೇಶದವರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದರು.

ಮನೆಗೆಲಸಕ್ಕೆ ಹಾಗೂ ಗಾರ್ಡನ್ ನೋಡಿಕೊಳ್ಳಲು ಸೇರಿದಂತೆ ವಿವಿಧ ಕೆಲಸಗಳಿಗೆ ಹೊರಗಿನವರನ್ನು ಸೇರಿಸಿಕೊಳ್ಳುವಾಗ ಜಾಗೃತಿ ವಹಿಸುವುದು ಅತಿಮುಖ್ಯ. ನಿಮ ಭದ್ರತೆ-ನಿಮ ರಕ್ಷಣೆ- ನಿಮ ಕೈಯಲ್ಲಿರಲಿ ಎಂದು ಆಯುಕ್ತರು ತಿಳಿಸಿದರು.

ಹೊರಗಿನವರನ್ನು ಮನೆಗೆಲಸಕ್ಕೆ, ಜ್ಯುವೆಲರಿ ಅಂಗಡಿಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಅವರ ಪೂರ್ವಪರಗಳನ್ನು ವಿಚಾರಿಸಿ ಅವರು ಯಾವ ರಾಜ್ಯ, ಯಾವ ದೇಶದವರು ಎಂಬ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳಿ ಅವರ ಆಧಾರ್ ಕಾರ್ಡ್ ಸೇರಿದಂತೆ ದಾಖಲಾತಿಗಳನ್ನು ಪಡೆದುಕೊಳ್ಳಬೇಕೆಂದು ಮಾಲೀಕರಿಗೆ ತಿಳಿಸಿದರು.

ಕೆಲಸಗಾರರ ಬಗ್ಗೆ ಮಾಹಿತಿ ಇಲ್ಲದಿದ್ದರೆ ಅವರನ್ನು ಹುಡುಕುವಷ್ಟರಲ್ಲಿ ಹಣ, ಆಭರಣದೊಂದಿಗೆ ಗಡಿದಾಟಿ ಹೋಗಿರುತ್ತಾರೆ. ಹಣವನ್ನು ಖರ್ಚು ಮಾಡಿಕೊಂಡಿರುತ್ತಾರೆ. ಆಭರಣವನ್ನು ಮಾರಿಬಿಡುತ್ತಾರೆ. ಹಾಗಾಗಿ ಕೆಲಸಗಾರರ ಹಾಗೂ ಸೆಕ್ಯೂರಿಟಿಗಾಡ್ಗಳ ಭಾವಚಿತ್ರ ಸೇರಿದಂತೆ ಅವರ ವಿಳಾಸದ ವಿವರ ಹಾಗೂ ದಾಖಲಾತಿಗಳನ್ನು ಪಡೆದುಕೊಂಡರೆ ಅವರಿಗೂ ಸಹ ಭಯವಿರುತ್ತದೆ. ಅಲ್ಲದೆ ಪೊಲೀಸರಿಗೂ ಸಹ ಅವರನ್ನು ಹುಡುಕಲು ಸುಲಭವಾಗುತ್ತದೆ ಎಂದರು.

ತಾವು ಹೊರಗೆ ಹೋಗುವಾಗ ಸೆಕ್ಯುರಿಟಿಗಾರ್ಡ್ ಹಾಗೂ ಮನೆಕೆಲಸದವರ ಮೇಲೆ ಸಂಪೂರ್ಣ ಅವಲಂಬಿತರಾಗಬೇಡಿ. ಮನೆ ಕೀ ಅಥವಾ ಅಂಗಡಿ ಕೀಯನ್ನು ಕೊಡದೆ ತಾವೆ ತೆಗೆದುಕೊಂಡು ಹೋಗಿ. ನೀವು ಬೀಗ ಹಾಕಿ ಹೊರಗೆ ಹೋಗುವಾಗ ಎಲ್ಲಿಗೆ ಹೋಗುತ್ತೇವೆ, ಯಾವಾಗ ಬರುತ್ತೇವೆಂದು ಅವರಿಗೆ ಹೇಳಬೇಡಿ ಎಂದು ಸಲಹೆ ನೀಡಿದರು.

ನಿಮ ವ್ಯಾಪಾರ-ವಹಿವಾಟುಗಳ ಬಗ್ಗೆ , ನಿಮಲ್ಲಿರುವ ಹಣ, ಆಭರಣದ ಬಗ್ಗೆ ಮನೆಗೆಲೆಸದವರಿಗೆ ಗೊತ್ತಾಗಬಾರದು. ನಿಮ ಬಳಿ ಇರುವ ಹಣ, ಆಭರಣದ ಬಗ್ಗೆ ತಿಳಿದುಕೊಂಡು ಕೆಲವೊಂದು ಬಾರಿ ನಿಮ ಜೀವಕ್ಕೆ ಕುತ್ತಾಗುವಂತಹ ಪ್ರಕರಣಗಳು ನಡೆಯಬಹುದು. ಹಾಗಾಗಿ ನೀವು ಕೆಲಸಗಾರರ ಮೇಲೆ ಅವಲಂಬಿತರಾಗಬೇಡಿ ಎಂದು ಆಯುಕ್ತರು ಹೇಳಿದರು.

ಒಂದು ವೇಳೆ ನೀವು ಎಲ್ಲಿಗೆ ಹೋಗುತ್ತೀರೆಂದು ತಿಳಿಸಿದರೆ ಅವರು ಸಂಚು ರೂಪಿಸಿಕೊಂಡು ಮನೆಯನ್ನು ದೋಚಬಹುದು. ಹಾಗಾಗಿ ಈ ಬಗ್ಗೆ ಜಾಗೃತರಾಗುವುದು ಒಳಿತು ಎಂದರು.

ಇತ್ತೀಚೆಗೆ ಜಯನಗರ, ವಿಜಯನಗರ, ಬೊಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮನೆ ಮಾಲೀಕರ ಮನೆಗಳಲ್ಲಿ ಸೆಕ್ಯೂರಿಟಿಗಾರ್ಡ್ ಹಾಗೂ ಮನೆ ಕೆಲಸಗಾರರೇ ಮನೆಯಲ್ಲಿದ್ದ ಭಾರೀ ಪ್ರಮಾಣದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಅವರು ವಿವರಿಸಿದರು.

RELATED ARTICLES

Latest News