ಮೈಸೂರು,ಫೆ.2- ಷೇರು ಟ್ರೇಡಿಂಗ್‌ನಲ್ಲಿ ಹೆಚ್ಚಿನ ಲಾಭ ಪಡೆಯಬಹುದೆಂದು ವೃದ್ಧರೊಬ್ಬರಿಗೆ ಸುಮಾರು 37 ಲಕ್ಷ ರೂ. ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.ಕುವೆಂಪು ನಗರದ ನಿವಾಸಿ ಶ್ರೀಕಾಂತಸ್ವಾಮಿ (63) ಹಣ ಕಳೆದುಕೊಂಡ ವೃದ್ಧ.
ವೃದ್ಧನಿಗೆ ಪರಿಚಿತರಾದ ವಂಚಕರು ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಷೇರು ವ್ಯವಹಾರ ನಡೆಸಿದರೆ ಶೇ.25 ರಷ್ಟು ಲಾಭ ಪಡೆಯಬಹುದೆಂದು ನಂಬಿಸಿದ್ದಾರೆ.ಇದನ್ನು ನಂಬಿದ ವೃದ್ಧ ಹೆಚ್ಚಿನ ಲಾಭದ ಆಸೆಗೆ ಬಿದ್ದು ಆ್ಯಪ್ ಮೂಲಕ ಹಂತಹಂತವಾಗಿ 37 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದಾರೆ.
ಆದರೆ ಅದು ನಕಲಿ ಆ್ಯಪ್ ಆಗಿದ್ದು, ಯಾವ ಲಾಭದ ಹಣವೂ ಕೂಡ ಖಾತೆಗೆ ಬಾರದಿದ್ದಾಗ ಆತಂಕಕ್ಕೊಳಗಾದ ವೃದ್ಧ ಮೊಬೈಲ್ ಹಾಗೂ ಸಂದೇಶದ ಮೂಲಕ ಸಂಪರ್ಕಕ್ಕೆ ಯತ್ನಿಸಿದರೂ ಕೂಡ ಪ್ರಯೋಜನವಾಗಲಿಲ್ಲ. ನಂತರ ಮೋಸ ಹೋಗಿರುವುದಾಗಿ ತಿಳಿದು ಬಂದಿದ್ದು, ಕೂಡಲೇ ಸೆನ್ ಠಾಣೆಗೆ ದೂರು ನೀಡಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.