Friday, November 22, 2024
Homeಜಿಲ್ಲಾ ಸುದ್ದಿಗಳು | District Newsಅಕ್ರಮವಾಗಿ ದಾಸ್ತಾನು ಮಾಡಿದ್ದ 98.52 ಕೋಟಿ ಮೌಲ್ಯದ ಬಿಯರ್ ಜಪ್ತಿ

ಅಕ್ರಮವಾಗಿ ದಾಸ್ತಾನು ಮಾಡಿದ್ದ 98.52 ಕೋಟಿ ಮೌಲ್ಯದ ಬಿಯರ್ ಜಪ್ತಿ

ಮೈಸೂರು, ಏ.4- ಜಿಲ್ಲೆಯ ನಂಜನಗೂಡು ತಾಲೂಕು ಇಮ್ಮಾವು ಗ್ರಾಮ ತಾಂಡ್ಯಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರೆವರೀಸ್ ಕಂಪೆನಿ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 98.52 ಕೋಟಿ ಮೊತ್ತದ ಬಿಯರ್ ಕಚ್ಚಾ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದ 17 ಮಂದಿ ಆರೋಪಿಗಳು ಪರಾರಿಯಾಗಿದ್ದಾರೆ.ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಾಗೂ ಮೈಸೂರು ಜಿಲ್ಲೆ ವ್ಯಾಪ್ತಿಯ ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರೆವರೀಸ್ ಕಂಪೆನಿಯಲ್ಲಿ ಅಕ್ರಮ ದಾಸ್ತಾನು ಪತ್ತೆಯಾಗಿದೆ.

ಚಾಮರಾಜನಗರ ಜಿಲ್ಲಾಧಿಕಾರಿಗಳು ಹಾಗೂ ಲೋಕಸಭಾ ಚುನಾವಣಾಧಿಕಾರಿಗಳ ಕಚೇರಿಗೆ ಬಂದ ಅನಾಮಧೇಯ ಕರೆ ಮೇರೆಗೆ ಅಬಕಾರಿ ಇಲಾಖೆ ಉಪ ಆಯುಕ್ತರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಲೆಕ್ಕಪುಸ್ತಕಗಳಿಗೂ ದಾಸ್ತಾನಿಗೆ ಹೋಲಿಕೆಯಾಗದ ಹಿನ್ನೆಲೆಯಲ್ಲಿ ಕಚ್ಚಾವಸ್ತುಗಳನ್ನು ಜಪ್ತಿ ಮಾಡಲಾಗಿದೆ.

7000 ವಿವಿಧ ಬ್ರಾಂಡಿನ ರಟ್ಟಿನ ಪೆಟ್ಟಿಗೆಗಳ ಬಿಯರ್ ದಾಸ್ತಾನು, 6,03,644 ರೆಟ್ಟಿನ ಪೆಟ್ಟಿಗೆಗಳು, ಕೆಗ್‍ಗಳಲ್ಲಿ 23,160 ಲೀಟರ್, ಬಿಬಿಟಿ ಟ್ಯಾಂಕ್‍ನಲ್ಲಿ 5,16,700 ಲೀಟರ್, ಯು.ಟಿ.ಟ್ಯಾಂಕ್‍ನಲ್ಲಿ 66,16,700 ಲೀಟರ್, ಸ್ಟೆಲೋಸ್ ಟ್ಯಾಂಕ್‍ನಲ್ಲಿ 6,50,458 ಕೆಜಿ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಜಪ್ತಿಯಾದ ಒಟ್ಟು ಪದಾರ್ಥಗಳ ಮೌಲ್ಯ 98.52 ಕೋಟಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ನಾಪತ್ತೆಯಾದ 17 ಆರೋಪಿಗಳ ಪತ್ತೆಗೆ ಚಾಮರಾಜನಗರ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅಬಕಾರಿ ಇಲಾಖೆಯ ಭರ್ಜರಿ ಬೇಟೆ ಇದಾಗಿದೆ.

RELATED ARTICLES

Latest News