Friday, November 22, 2024
Homeರಾಜ್ಯಅಧಿವೇಶನಕ್ಕೆ ಮಧುವಣಗಿತ್ತಿಯಂತೆ ಸಿಂಗಾರಗೊಂಡ ಕುಂದಾನಗರಿ

ಅಧಿವೇಶನಕ್ಕೆ ಮಧುವಣಗಿತ್ತಿಯಂತೆ ಸಿಂಗಾರಗೊಂಡ ಕುಂದಾನಗರಿ

ಬೆಳಗಾವಿ,ಡಿ.4- ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ ಬಹುನಿರೀಕ್ಷಿತ ವಿಧಾನಮಂಡಲ ಅಧಿವೇಶನ ಆರಂಭಗೊಂಡಿದ್ದು, ಕುಂದಾನಗರಿ ಅಧಿವೇಶನಕ್ಕಾಗಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಎರಡನೇ ಅವಧಿಯ ಸರ್ಕಾರದಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.

ಬಿಜೆಪಿ ಕಳೆದ ತಿಂಗಳಷ್ಟೇ ವಿಧಾನಸಭೆಯ ವಿರೋಧಪಕ್ಷದ ನಾಯಕನನ್ನು ನೇಮಕ ಮಾಡಿರುವುದರಿಂದ ಆರ್.ಅಶೋಕ್ ಕೇಸರಿ ಪಡೆಯನ್ನು ಮುನ್ನಡೆಸಲಿದ್ದಾರೆ. ವಿಧಾನಪರಿಷತ್‍ಗೆ ಈವರೆಗೂ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ಹತ್ತು ದಿನಗಳ ಕಾಲದ ಅವೇಶನ ಜಿದ್ದಾಜಿದ್ದಿನ ಕಣವಾಗಿರಲಿದೆ. ಸದನದ ಒಳಗೆ ಪ್ರಜಾಸತ್ತಾತ್ಮಕ ಚರ್ಚೆಗಳು ನಡೆಯುತ್ತಿದ್ದರೆ, ಸದನದ ಹೊರಗೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಗೊಂದಲಕ್ಕೆ ಆಸ್ಪದವಾಗದಂತೆ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿದೆ. ಭದ್ರತೆಯಿಂದ ಹಿಡಿದು ವಸತಿ, ಊಟ ಸೇರಿದಂತೆ ಹಲವು ಸೌಲಭ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಸದನದ ಆರಂಭದ ದಿನವಾದ ಇಂದು ವಿಧಾನಸೌಧದ ಮುಂದೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೂರು ರಾಜ್ಯಗಳ ಗೆಲುವಿಗೆ ನಡ್ಡಾ ಪರಿಶ್ರಮ ಕಾರಣ : ಮೋದಿ

ಬೆಳಗಾವಿಯ ರಸ್ತೆಗಳಲ್ಲೆಲ್ಲಾ ವಿವಿಧ ರಾಜಕೀಯ ನಾಯಕರುಗಳ ಫ್ಲೆಕ್ಸ್, ಪೋಸ್ಟರ್‍ಗಳು ರಾರಾಜಿಸುತ್ತಿದ್ದವು. ವಿಧಾನಪರಿಷತ್ ಹಾಗೂ ವಿಧಾನಸಭೆ ಸದಸ್ಯರು ಅತ್ಯುತ್ಸಾಹದಿಂದ ಕಲಾಪದಲ್ಲಿ ಭಾಗವಹಿಸಿದ್ದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಇಂದಿನ ಕಲಾಪಕ್ಕೆ ಗೈರುಹಾಜರಾಗಿದ್ದರು. ಉಳಿದಂತೆ ಎಲ್ಲಾ ಸಚಿವರು, ಶಾಸಕರು ಕಲಾಪದಲ್ಲಿ ಭಾಗವಹಿಸಿದ್ದರು. ಹೊಸ ಕ್ಯಾಪ್ಟನ್ ನೇಮಕದ ಬಳಿಕ ಬಿಜೆಪಿ ಪಾಳೆಯದಲ್ಲಿ ಅತ್ಯುತ್ಸಾಹ ಕಂಡುಬಂದಿತು.

RELATED ARTICLES

Latest News