ಬೆಂಗಳೂರು, ಅ.26 – ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿ ಸದಂತೆ ಕ್ರಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ ಇಲ್ಲಿನ ಜನಪ್ರತಿನಿಧಿಗಳ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲಾಗಿದೆ.
ಶಾಸಕರ ವಿರುದ್ಧ ದಾಖಲಾಗಿದ್ದ ಒಂದು ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ 6 ಕೋಟಿ ದಂಡ ಹಾಗೂ ಇತರೆ 6 ಪ್ರಕರಣಗಳಲ್ಲೂ ಅವರಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಪ್ರಕರಣದ ಆದೇಶ ಹೊರಡಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲೆ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿತ್ತು. ನಂತರ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗಿತ್ತು.
ನಿನ್ನೆಯೂ ಕೂಡ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಮಾಣ ಕುರಿತಂತೆ ಶಾಸಕ ಸತೀಶ್ ಸೈಲ್ ಅವರು ಕಣ್ಣೀರು ಹಾಕಿ ಕನಿಷ್ಠ ಶಿಕ್ಷೆ ನೀಡಬೇಕೆಂದು ಮನವಿ ಮಾಡಿದ್ದರು. ನಂತರ ನ್ಯಾಯಪೀಠ ಇಂದಿಗೆ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಮಧ್ಯಾಹ್ನ ತೀರ್ಪು ಪ್ರಕಟಗೊಂಡ ನಂತರ ಪುನ: ಸತೀಶ್ ಸೈಲ್ ಅವರು ಅಪರಾಧಿಯಾಗಿ ಜೈಲು ಸೇರಿದ್ದಾರೆ.
ಜನಪ್ರತಿನಿಧಯಾದರು ಅಪರಾಧಿಯಾಗಿ ಮೂರು ವರ್ಷ ಮೇಲ್ಪಟ್ಟು ಶಿಕ್ಷೆಗೆ ಗುರಿಯಾದರೆ ಅವರ ಆಯ್ಕೆಯಾದ ಸ್ಥಾನ ವಜಾಗೊಳ್ಳುತ್ತದೆ. ಪ್ರಸ್ತುಗತ ಸತೀಶ್ ಸೈಲ್ ಅವರು ಶಾಸಕ ಸ್ಥಾನ ಕಳೆದುಕೊಳ್ಳು ಸಾಧ್ಯತೆ ಇದ್ದು, ಜನಪ್ರತಿನಿಗಳ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ದಟ್ಟವಾಗಿದೆ.