Thursday, November 20, 2025
Homeರಾಜ್ಯಬೆಳಗಾವಿ : ಕೃಷ್ಣಮೃಗಗಳ ಸಾವಿಗೆ ಬ್ಯಾಕ್ಟೀರಿಯಾ ಕಾರಣ, ತನಿಖೆಯಿಂದ ದೃಢ

ಬೆಳಗಾವಿ : ಕೃಷ್ಣಮೃಗಗಳ ಸಾವಿಗೆ ಬ್ಯಾಕ್ಟೀರಿಯಾ ಕಾರಣ, ತನಿಖೆಯಿಂದ ದೃಢ

Belgaum: Investigation confirms bacteria as cause of death of blackbucks

ಬೆಂಗಳೂರು,ನ.19- ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಬೆಳಗಾವಿ ಜಿಲ್ಲೆಯ ರಾಣಿ ಚೆನ್ನಮ ಮೃಗಾಲಯದಲ್ಲಿ 31 ಕೃಷ್ಣಮೃಗಗಳ ದಾರುಣ ಸಾವಿಗೆ ಹೆಚ್‌ಎಸ್‌‍ ಬ್ಯಾಕ್ಟೀರಿಯಾ ಪ್ರಮುಖ ಕಾರಣ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಘಟನೆ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಸಚಿವ ಈಶ್ವರ್‌ ಖಂಡ್ರೆ ಅವರೇ ಖುದ್ದು ಇದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.

ಸಾವು ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ತಜ್ಞ ಡಾ.ಚಂದ್ರಶೇಖರ್‌ ಅವರನ್ನು ತಕ್ಷಣ ಬೆಳಗಾವಿಗೆ ಕಳುಹಿಸಲಾಗಿತ್ತು. ಅವರು ಮೃಗಾಲಯದ ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ನಡೆಸಿದ ಸಂಯುಕ್ತ ತನಿಖೆಯ ಬಳಿಕ, ಹೆಚ್‌ಎಸ್‌‍ ಎಂಬ ತೀವ್ರವಾಗಿ ಹರಡುವ ಬ್ಯಾಕ್ಟೀರಿಯಾ ಸೋಂಕು ಕೃಷ್ಣ ಮೃಗಗಳಲ್ಲಿ ವೇಗವಾಗಿ ವ್ಯಾಪಿಸಿರುವುದು ಸ್ಪಷ್ಟ ಎಂದು ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಮರಣೋತ್ತರ ಪರೀಕ್ಷೆ ಹಾಗೂ ತಜ್ಞರ ಪರಿಶೀಲನೆಗಳ ನಂತರ ಈ ಸಾವಿಗೆ(ಹೆಮರೇಜಿಕ್‌ ಸೆಪ್ಟಿಸಿಮಿಯಾ) ಬ್ಯಾಕ್ಟೀರಿಯಾ ಸೋಂಕೇ ಮುಖ್ಯ ಕಾರಣ ಎಂದು ವರದಿಗಳು ತಿಳಿಸಿವೆ.
31 ಕೃಷ್ಣಮೃಗಗಳ ಸಾವಿಗೆ (ಗಳಲೆ) ಹಿಮೋರೆಜಿಕ್‌ ಸೆಪ್ಟಿಸೆಮೀಯಾ ಕಾರಣ ಎನ್ನುವುದು ದೃಢಪಟ್ಟಿದೆ. ಅ.13ರಿಂದ 16ರವರೆಗೆ 31 ಕೃಷ್ಣಮೃಗಗಳು ಸಾವಿಗೀಡಗಿದ್ದವು. ಕೃಷ್ಣಮೃಗಗಳ ಸಾವು ಹಿನ್ನೆಲೆ ಬನ್ನೇರುಘಟ್ಟ, ಬೆಂಗಳೂರಿನ ತಜ್ಞ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವೈರಾಣು ತಜ್ಞ ಡಾ.ಚಂದ್ರಶೇಖರ ಅವರು ಮೃಗಾಲಯದ ಅಧಿಕಾರಿಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಮತ್ತೊಂದೆಡೆ ಹಠಾತ್‌ ತಾಪಮಾನ ಕುಸಿತ, ಒತ್ತಡದಿಂದಲೂ ಕೃಷ್ಣಮೃಗಗಳ ಮರಣಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಕೃಷ್ಣಮೃಗಗಳ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ. ಬದುಕುಳಿದ ಏಳು ಕೃಷ್ಣಮೃಗಗಳಿಗೆ ತೀವ್ರ ನಿಗಾದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಈಗಾಗಲೇ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಲಾಗಿದೆ. ಮೃಗಾಲಯದಲ್ಲಿರುವ ಹುಲಿ, ಸಿಂಹ, ಚಿರತೆ, ಕತ್ತೆಕಿರುಬಗಳು, ಕರಡಿಗಳು ವಿವಿಧ ಜಿಂಕೆ ಪ್ರಬೇಧಗಳಿವೆ. ತುರ್ತು ಪ್ರೋಟೋಕಾಲ್‌ ಜಾರಿಗೊಳಿಸುವಂತೆ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

ಉಳಿದಿರುವ ಕೃಷ್ಣ ಮೃಗಗಳಿಗೆ ಚಿಕಿತ್ಸೆ
ಮೃತ ಮೃಗಗಳ ಮೇಲೆ ಬನ್ನೇರುಘಟ್ಟದ ತಜ್ಞ ವೈದ್ಯರ ತಂಡ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿ ಕೂಡ ಕೃಷ್ಣಮೃಗಳ ವರದಿಗೆ ಎಚ್‌ಎಸ್‌‍ ಸೋಂಕೇ ಕಾರಣ ಎಂದು ದೃಢಪಡಿಸಿದೆ. ಇನ್ನು ಉಳಿದಿರುವ ಏಳು ಕೃಷ್ಣ ಮೃಗಗಳಿಗೂ ತಕ್ಷಣ ಚಿಕಿತ್ಸೆ ಆರಂಭಿಸಲಾಗಿದ್ದು, ಅವುಗಳಲ್ಲಿ ಹಲವಾರು ಮೃಗಗಳು ಚೇತರಿಕೆ ಲಕ್ಷಣಗಳನ್ನು ತೋರಲಾರಂಭಿಸಿವೆ. ಈಗಾಗಲೇ ಅವುಗಳನ್ನು ತೀವ್ರ ನಿಗಾದಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ತಂಡವು ಎಚ್ಚೆತ್ತು ಕಾರ್ಯ ನಿರ್ವಹಿಸುತ್ತವೆ ಎಂದು ಮೂಲಗಳು ತಿಳಿಸಿವೆ.

ಸಾಂಕ್ರಾಮಿಕ ರೋಗದ ಸ್ವಭಾವ ಗಮನಿಸಿದ ತಜ್ಞರು, ಮೃಗಾಲಯದಲ್ಲಿ ತುರ್ತು ಪ್ರೋಟೋಕಾಲ್‌ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೋಂಕು ಇತರ ಜಾತಿಯ ಪ್ರಾಣಿಗಳಿಗೆ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ, ತಕ್ಷಣವೇ ಪ್ರತ್ಯೇಕಣೆ, ನಿತ್ಯ ಸ್ನಾನ-ಶುಚಿಗೊಳಿಸುವಿಕೆ, ಸಾಕಾಣಿಕೆ ಪ್ರದೇಶಗಳ ಸ್ಯಾನಿಟೈಸೇಶನ್‌ ಹಾಗೂ ಸಿಬ್ಬಂದಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸುವಂತೆ ಸಲಹೆ ನೀಡಲಾಗಿದೆ.

ರಾಣಿ ಚನ್ನಮ ಮೃಗಾಲಯದಲ್ಲಿ ಕೃಷ್ಣ ಮೃಗಗಳ ಜೊತೆಗೆ ಹುಲಿ, ಸಿಂಹ, ಚಿರತೆ, ಕರಡಿ, ಕತ್ತೆ ಕಿರುಬಗಳು ಹಾಗೂ ವಿವಿಧ ಜಿಂಕೆ ಪ್ರಬೇಧಗಳು ವಾಸಿಸುತ್ತಿದ್ದು, ಯಾವುದೇ ಹೊಸ ಪ್ರಕರಣಗಳ ಆತಂಕವನ್ನು ತಪ್ಪಿಸಲು ಸಂಪೂರ್ಣ ಜಾಗೃತಿ ಮತ್ತು ಸಕಾಲಿಕ ಕ್ರಮಗಳು ಮುಂದುವರೆದಿವೆ.
ಈ ಘಟನೆ ಮೃಗಾಲಯದ ನಿರ್ವಹಣೆ, ಆರೋಗ್ಯ ನಿಗಾದ ವ್ಯವಸ್ಥೆ ಹಾಗೂ ತುರ್ತು ರೋಗ ನಿಯಂತ್ರಣ ಕ್ರಮಗಳ ಕಾರ್ಯಕ್ಷಮತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ. ಅಧಿಕಾರಿಗಳು ಮೃಗಾಲಯವನ್ನು ಸಂದರ್ಶಿಸುವ ನಾಗರಿಕರಿಗೆ ಆತಂಕ ಪಡುವ ಅಗತ್ಯವಿಲ್ಲವೆಂದು ತಿಳಿಸಿದರೂ, ಮೃಗಾಲಯದಲ್ಲಿ ಮುಂದಿನ ಕೆಲವು ದಿನಗಳು ಕಟ್ಟುನಿಟ್ಟಿನ ನಿಯಮಾವಳಿ ಜಾರಿಯಲ್ಲಿರಲಿದೆ ಎಂದು ಅಧಿಕಾರಿ ವಲಯ ತಿಳಿಸಿದೆ.

RELATED ARTICLES
- Advertisment -

Latest News