Tuesday, June 3, 2025
Homeಜಿಲ್ಲಾ ಸುದ್ದಿಗಳು | District Newsಬೆಳಗಾವಿ | Belagaviಬೆಳಗಾವಿ : ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಕಾಮುಕರ ಗ್ಯಾಂಗ್

ಬೆಳಗಾವಿ : ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಕಾಮುಕರ ಗ್ಯಾಂಗ್

Belgaum: Minor girl gang-raped

ಬೆಳಗಾವಿ, ಜೂನ್.01-ಕಾಮುಕರು ಗ್ಯಾಂಗ್ ಅಪ್ರಾಪ್ತ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಗಾವಿ ಹೊರ ವಲಯದ ಕಾಕತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

15 ವರ್ಷದ ಅಪ್ರಾಪ್ತ ಮೇಲೆ 6 ಮಂದಿ ದುರುಳರು 2 ಬಾರಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಕಳೆದ 6 ತಿಂಗಳ ಹಿಂದೆ ಬಾಲಕಿಯನ್ನ ಸ್ನೇಹಿತನೊಬ್ಬ ಪುಸಲಾಯಿಸಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿ, ಅದನ್ನು ವೀಡಿಯೊ ಮಾಡಿದ್ದ.

ಬಳಿಕ ಅದೇ ವೀಡಿಯೊ ಇಟ್ಟುಕೊಂಡು ಬ್ಯಾಕ್‌ಮೇಲ್ ಮಾಡಿ ಅಪ್ರಾಪ್ತಯ ಮೇಲೆ ಮತ್ತೊಮ್ಮೆ ರೇಪ್ ಮಾಡಿದ್ದರು. ಈ ಸಂದರ್ಭದಲ್ಲೂ ಆತನ ಸ್ನೇಹಿತರು ವೀಡಿಯೊ ಮಾಡಿಕೊಂಡಿದ್ದರು. ಈ ವೀಡಿಯೊ ಇಟ್ಟುಕೊಂಡು ಮತ್ತೆ ಮತ್ತೆ ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ದೂರಲಾಗಿದ್ದು 6 ಮಂದಿ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಫೋಕ್ಲೋಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಕರಣ ಗಂಭೀರತೆ ರ್ಅತು ಪೊಲೀಸರು ಕಾರ್ಯಾಚರಣೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮಿಖ ಆರೋಪಿಸೇರಿ ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಗ್ಯಾಂಗ್ ರೇಪ್ ಗಟನೆ ಮತ್ತೆ ಕುಂದಾ ನಗರಿಯನ್ನು ಬೆಚ್ಚಿಬೀಳಿಸಿದೆ.

RELATED ARTICLES

Latest News