Sunday, June 1, 2025
Homeಜಿಲ್ಲಾ ಸುದ್ದಿಗಳು | District Newsಬೆಳಗಾವಿ | Belagaviಬೆಳಗಾವಿ : ಪತ್ನಿ ಕಿರುಕುಳ ತಾಳಲಾರದೆ ಪತಿ ಆತ್ಮಹತ್ಯೆ

ಬೆಳಗಾವಿ : ಪತ್ನಿ ಕಿರುಕುಳ ತಾಳಲಾರದೆ ಪತಿ ಆತ್ಮಹತ್ಯೆ

Belgaum: wife harassment, husband committed suicide

ಬೆಳಗಾವಿ,ಮೇ.30– ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಆತಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ನಗರದ ಅನಗೋಳದ ದುರ್ಗಾ ಕಾಲೋನಿಯಲ್ಲಿ ನಡೆದಿದೆ.ಸುನೀಲ್‌ ಮೂಲಿಮನಿ (33) ಆತ್ಮಹತ್ಯೆ ಮಾಡಿಕೊಂಡ ಪತಿ.ಕಳೆದ 4 ವರ್ಷಗಳ ಹಿಂದೆ ಪೂಜಾ ಎಂಬುವ ವರನ್ನು ಸುನೀಲ್‌ ಮದುವೆ ಯಾಗಿದ್ದರು.

ಈಗ ದಂಪತಿಗೆ ಮೂರು ವರ್ಷದ ಮಗು ಇದೆ.ಚನ್ನಾಗಿದ್ದ ಕುಟುಂಬ ಇತ್ತೀಚೆಗೆ ಮೈಮನಸ್ಯ ಮೂಡಿತ್ತು.ಪತ್ನಿ ಎಲ್ಲರ ಬಳಿ ಪತಿ ವಿರುದ್ದ ಹೇಳಿ ಹಿಯಾಳಿಸುತ್ತಿದ್ದರು. ಅವಮಾನಿಸುತ್ತರಿದ್ದರು.ಇದರಿಂದ ಜಗಳ ಕೂಡ ನಡೆದಿತ್ತು. ನಗರದಲ್ಲಿ ಕಂಪ್ಯೂಟರ್‌ ಶಾಪ್‌ ನಡೆಸುತ್ತಿದ್ದ ಸುನೀಲ್‌ವೈಯರ್‌ನಿಂದ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಮೈ ವೈಫ್‌ ಈಸ್‌‍ ರಿಜನ್‌ ಫಾರ್‌ ಮೈ ಡೆತ್‌ ಅಂತ ಡೆತ್‌ನೋಟ್‌ ಬರೆದಿಟ್ಟಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಮ್ಸೌಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಉದ್ಯಮಬಾಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News