ಆನೇಕಲ್,ಮಾ.23-ಇಲ್ಲಿ ನಡೆದ ಐತಿಹಾಸಿಕ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ 150 ಅಡಿ ಎತ್ತರದ ತೇರು ಭಾರಿ ಗಾಳಿಗೆ ಏಕಾಏಕಿ ಧರೆಗುರುಳಿದ ಸಂದರ್ಭದಲ್ಲಿ ಅಧರಡಿ ಸಿಲುಗಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಎರಡಕ್ಕೆ ಏರಿದೆ.
ನಿನ್ನೆ ರಾರಿ ಲೋಹಿತ್ (28) ಎಂಬಯುವಕ ಸಾವನ್ನಪ್ಪಿದ್ದ. ಇಂದು ಬೆಳಿಗೆ ಜ್ಯೋತಿ ಎಂಬ ಯುವತಿ ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬ ಯುವಕ ರಾಕೇಶ್ ಸದ್ಯ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನೆನ ಜಾತ್ರೆಗೆ ಗ್ರಾಮಸ್ಥರು 150ಕ್ಕೂ ಹೆಚ್ಚು ಅಡಿ ಎತ್ತರದ ಕುರ್ಜುಗಳು ಆಗಮಿಸಿದ್ದವು. ತೇರು ಎಳೆದು ತರುವ ಸಂದರ್ಭದಲ್ಲಿ ಅವಘಡ ಸಂಭವಿಸಿತ್ತು. ಮದ್ದೂರಮ್ಮ ಜಾತ್ರೆಗೆ 200 ವರ್ಷಗಳ ಇತಿಹಾಸವಿದೆ. ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ ಮೂಲಕ ತೇರುಎಳೆಯಲಾಗುತ್ತೆ.
ಪ್ರತಿಷ್ಟೆಗೆ ಅತೀ ಎತ್ತರ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಸಾವಿರಾರು ಜನ ಆಗಮಿಸುತ್ತಿದ್ದರು. ಏಕಾಏಕಿ ಶುರುವಾದ ಗಾಳಿ ಸಹಿತ ಮಳೆಯಿಂದಾಗಿ ಆಯತಪ್ಪಿ ತೇರು ನೆಲಕ್ಕೆ ಬಿದ್ದಿದೆ. ಜಾತ್ರೆ ಸಂಭ್ರಮದ ದಿನ ಸೂತಕದ ಛಾಯೆ ಆವರಿಸಿದೆ. ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ