Wednesday, November 19, 2025
Homeಬೆಂಗಳೂರುಬೆಂಗಳೂರು : ಕಾರು ಡಿಕ್ಕಿಯಾಗಿ ಏರೋನಾಟಿಕಲ್‌ ಎಂಜಿನಿಯರ್‌ ದುರಂತ ಸಾವು

ಬೆಂಗಳೂರು : ಕಾರು ಡಿಕ್ಕಿಯಾಗಿ ಏರೋನಾಟಿಕಲ್‌ ಎಂಜಿನಿಯರ್‌ ದುರಂತ ಸಾವು

Bengaluru: Aeronautical engineer dies in car crash

ಬೆಂಗಳೂರು,ಜೂ.27- ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂದಿನಿ (24) ಮೃತಪಟ್ಟ ಯುವತಿ. ನೆಲಮಂಗಲದ ಹುಸ್ಕೂರು ಗ್ರಾಮದವರಾದ ನಂದಿನಿ ಬಾಗಲೂರಿನ ಪಿಜಿಯಲ್ಲಿ ನೆಲೆಸಿದ್ದರು.

ಯೂನಿಮಿಕ್‌ ಕಂಪನಿಯಲ್ಲಿ ಏರೋನಾಟಿಕಲ್‌ ಎಂಜಿನಿಯರ್‌ರಾಗಿ ಉದ್ಯೋಗ ಮಾಡುತ್ತಿದ್ದ ನಂದಿನಿಯವರು ನಿನ್ನೆ ಸಂಜೆ ದ್ವಿಚಕ್ರವಾಹದಲ್ಲಿ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದಾಗ ಬಾಗಲೂರು ರಸ್ತೆಯ ಕೆಐಎಡಿಬಿ ವೃತ್ತದಲ್ಲಿ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರಗಾಯಗೊಂಡು ಮೃತಪಟ್ಟಿದ್ದಾರೆ.ಸುದ್ದಿ ತಿಳಿದು ಚಿಕ್ಕಜಾಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

RELATED ARTICLES
- Advertisment -

Latest News