ಬೆಂಗಳೂರು,ಅ.27- ಸರಕು ಸಾಗಾಣಿಕೆ ಆಟೋದ ಚಾಲಕನೊಬ್ಬ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನವೀನ್‌ಕುಮಾರ್(25) ಮೃತ ಚಾಲಕ. ಭುವನೇಶ್ವರಿ ನಗರದಲ್ಲಿ ತಮ ಅಣ್ಣ ವಸಂತ್ ಅವರೊಂದಿಗೆ ನವೀನ್‌ಕುಮಾರ್ ವಾಸವಾಗಿದ್ದು ಟಾಟಾಏಸ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ಕಳೆದ ಎರಡು ದಿನಗಳ ಹಿಂದೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮನೆ ಹತ್ತಿರದ ಆಸ್ಪತ್ರೆಯೊಂದರಲ್ಲಿ ನವೀನ್ ಕುಮಾರ್ ಚಿಕಿತ್ಸೆ ಪಡೆದಿದ್ದರು. ಆದರೆ ಮುಂಜಾನೆ 4 ಗಂಟೆ ಸಂದರ್ಭದಲ್ಲಿ ಪುನಃ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಕಿಮ್ಸೌ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಮಾರ್ಗಮಧ್ಯೆ ಆತ ಕೊನೆಯುಸಿರೆಳೆದಿದ್ದಾರೆ. ಘಟನೆ ಕುರಿತಂತೆ ಈಗ ತಲಘಟ್ಟಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
