Friday, July 11, 2025
Homeಬೆಂಗಳೂರುಬೆಂಗಳೂರು : ಬೈಕ್‌ ಅಪಘಾತದಲ್ಲಿ ಬಿ.ಟೆಕ್‌ ವಿದ್ಯಾರ್ಥಿ ಸಾವು

ಬೆಂಗಳೂರು : ಬೈಕ್‌ ಅಪಘಾತದಲ್ಲಿ ಬಿ.ಟೆಕ್‌ ವಿದ್ಯಾರ್ಥಿ ಸಾವು

Bengaluru: B.Tech student dies in bike accident

ಬೆಂಗಳೂರು,ಜು.10- ಮುಂಜಾನೆ ಟೀ ಕುಡಿಯಲು ಬೈಕ್‌ನಲ್ಲಿ ಹೋಗಿ ವಾಪಸ್‌‍ ಬರುವಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಿ.ಟೆಕ್‌ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಚಿಕ್ಕಬಾಣಾವರ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಸಪ್ತಗಿರಿ ಕಾಲೇಜಿನ ಬಳಿ ಸಂಭವಿಸಿದೆ. ಉತ್ತರ ಪ್ರದೇಶದ ಲಖ್ನೋ ನಗರದ ನಿವಾಸಿ ಶಿವಂ ಯಾದವ್‌(22) ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ.

ಈತ ಸೌಂದರ್ಯ ಲೇಔಟ್‌ನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದು , ಎಂಎಸ್‌‍ ರಾಮಯ್ಯ ವಿಶ್ವವಿದ್ಯಾಲಯದಲ್ಲಿ 3 ನೇ ವರ್ಷದ ಬಿ.ಟೆಕ್‌ ಪದವಿ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಇಂದು ಮುಂಜಾನೆ ತನ್ನಬೈಕ್‌ನಲ್ಲಿ ಟೀ ಕುಡಿಯಲು ಚಿಕ್ಕಬಾಣಾವರಕ್ಕೆ ಹೋಗಿ ವಾಪಸ್‌‍ ಬರುವಾಗ ಸಪ್ತಗಿರಿ ಕಾಲೇಜಿನ ಬಳಿ ಇಂದು ಮುಂಜಾನೆ 5 ಗಂಟೆ ಸಮಯದಲ್ಲಿ ನಿಯಂತ್ರಣ ತಪ್ಪಿ ಪುಟ್‌ಪಾತ್‌ಗೆ ಡಿಕ್ಕಿ ಹೊಡೆದು ರಸ್ತೆ ಮೇಲೆ ಉರುಳಿ ಬಿದ್ದಿದ್ದಾನೆ .

ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಗಾಯಗೊಂಡ ಶಿವಂನನ್ನು ಹತ್ತಿರದ ಸಪ್ತಗಿರಿ ಮಡಿಕಲ್‌ ಕಾಲೇಜಿನ ಆಸ್ಪತ್ರಗೆ ಕರೆದೊಯ್ದಾಗ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದ ಚಿಕ್ಕಬಾಣಾವರ ಸಂಚಾರಿ ಠಾಣೆ ಪೊಲೀಸ್‌‍ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News