Thursday, May 2, 2024
Homeರಾಜ್ಯತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಿದ್ದ ರಾಮೇಶ್ವರಂ ಕಫೆ ಬಾಂಬರ್

ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಿದ್ದ ರಾಮೇಶ್ವರಂ ಕಫೆ ಬಾಂಬರ್

1ಬೆಂಗಳೂರು,ಮಾ.3- ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಪೊಲೀಸರನ್ನು ಯಾಮಾರಿಸಲು ಮಾಸ್ಟರ್ ಪ್ಲಾನ್ ಹಾಕಿದ್ದ ಎನ್ನುವುದು ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ. ಬಾಂಬ್ ಇಡಲು ಹೋಗಿದ್ದಾಗ ಶರ್ಟ್ ಮೇಲೆ ಶರ್ಟ್ ಹಾಕಿಕೊಂಡು ನಂತರ ಎಸ್ಕೇಪ್ ಆಗುವ ವೇಳೆ ಬಟ್ಟೆ ಬದಲಿಸಲು ಪ್ಲಾನ್ ರೂಪಿಸಿದ್ದನಂತೆ. ಇದರ ಜೊತೆಗೆ ಹಲವಾರು ಬಸ್ ಚೇಂಜ್ ಮಾಡಿ ಟ್ರಾವೆಲಿಂಗ್ ಮಾಡಿದ್ದ ಎಂಬ ಅಂಶವೂ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಟಿಕೆಟ್ ಪಡೆಯದೇ ಬಸ್‍ನಲ್ಲಿ ಪ್ರಯಾಣ ಮಾಡಿರುವ ಆರೋಪಿ ಒಂದು ಬಸ್ ಹತ್ತಿ ಮುಂದಿನ ಸ್ಟಾಪ್‍ನಲ್ಲಿ ಇಳಿದು ಮತ್ತೊಂದು ಬಸ್ ಹತ್ತಿ ನಂತರವೂ ಮುಂದಿನ ಸ್ಟಾಪ್‍ನಲ್ಲಿ ಇಳಿದಿದ್ದಾನೆ ಇದೇ ರೀತಿ 15ಕ್ಕೂ ಹೆಚ್ಚ ಬಸ್‍ಗಳಲ್ಲಿ ಆತ ಟಿಕೆಟ್ ಪಡೆಯದೆ ಸಂಚರಿಸಿದ್ದಾನೆ ಎಂದು ತಿಳಿದುಬಂದಿದೆ. ಬಟ್ಟೆ ಬದಲಿಸುವುದರ ಜೊತೆಗೆ ಹಲವಾರು ಬಸ್‍ಗಳಲ್ಲಿ ಪ್ರಯಾಣ ಮಾಡಿರುವ ಶಂಕಿತ ಹೊರ ರಾಜ್ಯಕ್ಕೆ ಎಸ್ಕೆಪ್ ಆಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಬಾಂಬ್ ಸ್ಪೋಟ ಮತ್ತು ಉಗ್ರ ಕೃತ್ಯಗಳ ತನಿಖೆಯಲ್ಲಿ ಖ್ಯಾತಿ ಗಳಿಸಿರುವ ಮಹಾರಾಷ್ಟ್ರ ಹಾಗೂ ತೆಲಂಗಾಣ ಎಟಿಸಿ ಹಾಗೂ ಕೌಂಟರ್ ಇಂಲಿಜೆನ್ಸ್ ಸೆಲ್ ಟೀಂ ಸಂಪರ್ಕದಲ್ಲಿ ಬೆಂಗಳೂರು ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ. ತೆಲಂಗಾಣ ಸೆಲ್ ತಂಡದವರು ಈಗಾಗಲೇ ಘಟನಾ ಸ್ಥಳದ ಸ್ಯಾಂಪಲ್ಸ ಪಡೆದು ಹೋಗಿರುವುದು ಗೊತ್ತಾಗಿದೆ.ತಮಿಳುನಾಡು, ಕೇರಳ ಹಾಗೂ ತೆಲಂಗಾಣದಲ್ಲಿ ಬೀಡುಬಿಟ್ಟಿರೋ ಬೆಂಗಳೂರು ಪೊಲೀಸರು ಆರೋಪಿಯ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.ಪಲಾಯನ ಮಾಡಿರುವ ಆರೋಪಿ ಬಂಧನಕ್ಕಾಗಿ ಸಿಸಿಬಿ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಂಟಿ ತೋಳ ಭಯೋತ್ಪಾದಕ: ಒಬ್ಬನೇ ವ್ಯಕ್ತಿ ಬಾಂಬ್ ತಯಾರಿಸಿ ಸ್ಪೋಟಿಸುವ ಸಂಪೂರ್ಣ ಜವಾಬ್ದಾರಿ ಹೊಂದಿದ್ದರೆ ಅವನನ್ನು ಒಂಟಿ ತೋಳ ಭಯೋತ್ಪಾದಕ ಎಂದು ಕರೆಯಲಾಗುತ್ತದೆ. ಅಮೇರಿಕಾದಲ್ಲಿ ಈ ರೀತಿಯ ಭಯೋತ್ಪಾದನೆಗೆ ಇಂತಹ ಹೆಸರು ನೀಡಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನು ಒಂಟಿ ತೋಳ ಭಯೋತ್ಪಾದಕ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟ ಬಾಂಬರ್ ಫ್ಲಾನ್ ಹೇಗಿತ್ತು ಗೊತ್ತಾ..? ಬ್ಲಾಸ್ಟ್ ಆರೋಪಿ ಬಾಂಬ್ ಇಟ್ಟ ಒಂದೂವರೆ ಗಂಟೆ ಬಳಿಕ ಬಾಂಬ್ ಸ್ಪೋಟ ಆಗುವಂತೆ ಟೈಮ್ ಫಿಕ್ಸ್ ಮಾಡಿದ್ದು ಆತ ಬೆಂಗಳೂರಿನಿಂದ ತಮಿಳುನಾಡಿಗೆ ಪರಾರಿಯಾಗುವ ಉದ್ದೇಶದಿಂದ ಎನ್ನುವುದು ಪೊಲೀಸರಿಗೆ ಗೊತ್ತಾಗಿದೆ. ರಾಮೇಶ್ವರಂ ಕೆಫೆಯಿಂದ ಹೊಸೂರು ಬಾರ್ಡರ್ ಗೆ ಹೋಗೋಕೆ 59 ನಿಮಿಷಗಳು ಬೇಕು ಒಂದು ವೇಳೆ ಟ್ರಾಫಿಕ್ ಇದ್ರೂ 1 ಗಂಟೆ 15 ನಿಮಿಷದಲ್ಲಿ ರೀಚ್ ಆಗಬಹುದು ಎಂಬ ಉದ್ದೇಶದಿಂದ ಒಂದೂವರೆ ಗಂಟೆಯಲ್ಲಿ ಬೆಂಗಳೂರು ಬಿಟ್ಟು ಹೊರಹೋಗಲು ಫ್ಲಾನ್ ಮಾಡಿರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು ರಾಮೇಶ್ವರಂ ಕೆಫೆ ಯಿಂದ ತಮಿಳುನಾಡು ಬಾರ್ಡರ್ ವರೆಗಿನ ಎಲ್ಲಾ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಆರೋಪಿ ರಾಮೇಶ್ವರಂ ಕೆಫೆಯಿಂದ ವೈಟ್ ಫೀಲ್ಡ ಗೆ ಹೋಗಿರೋ ಬಗ್ಗೆ ಮಾಹಿತಿ ಇದೆ ನಂತರ ಅಲ್ಲಿಂದ ಚೆನ್ನಸಂದ್ರ ಮೂಲಕ ಸರ್ಜಾಪುರ, ಅತ್ತಿಬೆಲೆ ಮೂಲಕ ಎಸ್ಕೇಪ್ ಆಗಿರೋ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಾಂಬ್ ಇಟ್ಟವನನ್ನು ನೋಡಿದ್ದೇನೆ: ರಾಮೇಶ್ವರಂ ಕೆಫೆ ಮ್ಯಾನೇಜರ್ ಹರಿಹರನ್ ಎಂಬುವರು ಬಾಂಬ್ ಇಟ್ಟು ಪರಾರಿಯಾಗಿರುವ ಆರೋಪಿಯನ್ನು ನೋಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಸಾಮಾನ್ಯ ವ್ಯಕ್ತಿಯಂತೆ ಬಂದಿದ್ದ ಬಾಂಬರ್ ಇಡ್ಲಿ ತೆಗೆದುಕೊಂಡು ಒಂದು ಕಡೆ ಕೂತಿದ್ದ ನಾನು ಅವನನ್ನು ನೋಡ್ದೆ, ಕೆಲ ಹೊತ್ತಿನಲ್ಲೇ ಆತ ನಾಪತ್ತೆಯಾಗಿದ್ದ ಆತ ಕೂತಿದ್ದ ಜಾಗದಲ್ಲಿ ಒಂದು ಸಣ್ಣ ಟಿಫಿನ್ ಬಾಕ್ಸ್ ಇತ್ತು ಎಂದು ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆ ಬಾಕ್ಸ್ ಗಾಯಾಳು ಸ್ವರ್ಣಾಂಭ ಅವರದ್ದು ಅಂತಾ ಅಂದುಕೊಂಡಿದ್ದೇ ಆದರೆ ಸ್ಪೋಟಗೊಂಡಿದ್ದು ಅದೇ ಟಿಫಿನ್ ಬಾಕ್ಸ್ ಎಂದು ಅವರು ಹೇಳಿದ್ದಾರೆ.

ಸ್ವರ್ಣಾಂಭ ಚಿಕಿತ್ಸೆ ಮುಂದುವರಿಕೆ: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡಿರುವ ಗಾಯಾಳು ಸ್ವರ್ಣಾಂಭಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಸಣ್ಣಪುಟ್ಟ ಗಾಯಗಳಾಗಿದ್ದ ಕೆಲವರು ನಿನ್ನೆ ಡಿಸ್ಚಾರ್ಜ್ ಆಗಿದ್ದಾರೆ.

RELATED ARTICLES

Latest News