Wednesday, May 1, 2024
Homeಇದೀಗ ಬಂದ ಸುದ್ದಿರಾಮನಗರ, ಚನ್ನಪಟ್ಟಣ ರೈಲು ನಿಲ್ದಾಣ ಮೇಲ್ದರ್ಜೆಗೆ : ಕುಮಾರಸ್ವಾಮಿ ಹರ್ಷ

ರಾಮನಗರ, ಚನ್ನಪಟ್ಟಣ ರೈಲು ನಿಲ್ದಾಣ ಮೇಲ್ದರ್ಜೆಗೆ : ಕುಮಾರಸ್ವಾಮಿ ಹರ್ಷ

ಬೆಂಗಳೂರು, ಮಾ.3-ಸಾಂಸ್ಕøತಿಕ ನಗರಿ ಮೈಸೂರು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಐತಿಹಾಸಿಕ, ಪಾರಂಪರಿಕ ಮಹತ್ವವುಳ್ಳ ರಾಮನಗರ, ಚನ್ನಪಟ್ಟಣ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿರುವುದು ಅತೀವ ಸಂತಸ ಉಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, 20.93 ಕೋಟಿ ರೂ. ವೆಚ್ಚದಲ್ಲಿ ಚನ್ನಪಟ್ಟಣ ರೈಲು ನಿಲ್ದಾಣ, 20.96 ಕೋಟಿ ರೂ. ವೆಚ್ಚದಲ್ಲಿ ರಾಮನಗರ ರೈಲು ನಿಲ್ದಾಣವನ್ನು ಸ್ಥಳೀಯ ಸಾಂಸ್ಕøತಿಕ ಸೊಗಡಿನ ಮಾದರಿಯಲ್ಲಿಯೇ ಉನ್ನತೀಕರಿಸುತ್ತಿರುವುದು ಈ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ಬೃಹತ್ ಪ್ರಯತ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿತ್ಯವೂ ಉದ್ಯೋಗ, ವ್ಯವಹಾರಕ್ಕಾಗಿ ಎರಡೂ ನಗರಗಳ ನಡುವೆ ಸಂಚರಿಸುವ ಜಿಲ್ಲೆಯ ಅಸಂಖ್ಯಾತ ಜನರಿಗೆ ಅನುಕೂಲ ಆಗಲಿದೆ. ಈ ಕಾರಣಕ್ಕಾಗಿ ನಾನು ಪ್ರಧಾನಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News